More

    ಸಾಮಾಜಿಕ ಪರಿವರ್ತನೆಗೆ ದಾಸ ಸಾಹಿತ್ಯ ಪೂರಕ ಎಂದ ಹಿರಿಯ ವಕೀಲ, ಕಲಾವಿದ ಶರದ್ ದಂಡಿನ್

    ಗಂಗಾವತಿ: ಸಾಮಾಜಿಕ ಪರಿವರ್ತನೆಗೆ ಪೂರಕವಾದ ದಾಸ ಸಾಹಿತ್ಯ ಪರಂಪರೆಯನ್ನು ದೃಶ್ಯ ಮಾಧ್ಯಮದ ಮೂಲಕ ಪರಿಚಯಿಸುವ ಕಾರ್ಯವಾಗುತ್ತಿದ್ದು, ಹಲವು ವರ್ಷಗಳ ನಂತರ ದಾಸರ ಚಿತ್ರ ಬಿಡುಗಡೆಯಾಗುತ್ತಿದೆ ಎಂದು ಹಿರಿಯ ವಕೀಲ ಮತ್ತು ಕಲಾವಿದ ಶರದ್ ದಂಡಿನ್ ಹೇಳಿದರು.

    ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶ್ರೀ ಜಗನ್ನಾಥ ದಾಸರ ಚಿತ್ರ ತಂಡ ಮಂಗಳವಾರ ಆಯೋಜಿಸಿದ್ದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜ ಪರಿವರ್ತನೆಗೆ ದಾಸ ಮತ್ತು ವಚನ ಸಾಹಿತ್ಯ ಪ್ರಮುಖವಾಗಿದ್ದು, ಆಯಾ ಕಾಲಘಟ್ಟದಲ್ಲಿ ಸಮಾನತೆಯ ಬಗ್ಗೆ ಸಾಹಿತ್ಯದ ಬಗ್ಗೆ ಪ್ರಚುರಪಡಿಸಲಾಗಿತ್ತು. ಕಲ್ಯಾಣ ಕರ್ನಾಟಕದ ಭಾಗದಲ್ಲಿ 11 ದಾಸಶ್ರೇಷ್ಠರ ಪರಂಪರೆಯನ್ನು ಕಾಣಬಹುದಾಗಿದೆ. ಡಿ.10ರಂದು ರಾಜ್ಯದ 80 ಥಿಯೇಟರ್‌ಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಹೊರ ದೇಶದಲ್ಲೂ ಚಿತ್ರದ ಬಗ್ಗೆ ಉತ್ತಮ ಪ್ರತಿಕ್ರಿ ವ್ಯಕ್ತವಾಗಿದ್ದು, ಡಿ. 3ನೇ ವಾರದಲ್ಲಿ ಇತರೆ ದೇಶಗಳಲ್ಲೂ ಬಿಡುಗಡೆಯಾಗಲಿದೆ. ಚಿತ್ರದ ಬಹುತೇಕ ಸನ್ನಿವೇಶ ಗಂಗಾವತಿ, ಕನಕಗಿರಿ, ಆನೆಗೊಂದಿ ಸೇರಿ ಕಲ್ಯಾಣ ಕರ್ನಾಟಕದ ಭಾಗದಲ್ಲಿ ಚಿತ್ರೀಕರಣವಾಗಿದ್ದು, ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗಿದೆ ಎಂದರು.

    ಆರ್ಯ ವೈಶ್ಯ ಸಮುದಾಯದ ತಾಲೂಕು ಅಧ್ಯಕ್ಷ ದರೋಜಿ ಶ್ರೀರಂಗ ಶ್ರೇಷ್ಠಿ ಮಾತನಾಡಿ, ತೆರೆಗೆ ಬರುತ್ತಿರುವ ಶ್ರೀ ಜಗನ್ನಾಥ ದಾಸರ ಚಿತ್ರವನ್ನು ಥಿಯೇಟರ್‌ನಲ್ಲಿ ವೀಕ್ಷಿಸುವ ಮೂಲಕ ಸ್ಥಳೀಯ ಕಲಾವಿದರಿಗೆ ಪ್ರೋತ್ಸಾಹಿಸುವಂತೆ ಮನವಿ ಮಾಡಿದರು. ಕಲಾವಿದರಾದ ನವಲಿ ರಾಮಮೂರ್ತಿ, ಇಂಗಳಗಿ ನಾಗರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts