More

    ಗಂಗಾವತಿಯ ಸಿದ್ಧಿಕೇರಿ ಕಾಲನಿಗೆ ನಾಲ್ಕು ದಶಕಗಳ ಬಳಿಕ ವಿದ್ಯುತ್ ಸಂಪರ್ಕ

    ಗಂಗಾವತಿ: ನಾಲ್ಕು ದಶಕಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಪರದಾಡುತ್ತಿದ್ದ ನಗರದ 4ನೇ ವಾರ್ಡ್‌ನ ಸಿದ್ಧಿಕೇರಿ ಮತ್ತು ವಕೀಲ್ ಗೇಟ್ ಕಾಲನಿ ನಿವಾಸಿಗಳಿಗೆ ವಿದ್ಯುತ್ ಮೀಟರ್ ವಿತರಣೆ ಮೂಲಕ ಸಂಪರ್ಕ ನೀಡಲಾಯಿತು.

    ಇಲ್ಲಿನ 43 ಮನೆಗಳಿಗೆ ವಿದ್ಯುತ್ ಸಂಪರ್ಕವಿರಲಿಲ್ಲ. ಕೊಳಚೆ ಪ್ರದೇಶ ಎಂದು ೋಷಣೆಯಾಗಿದ್ದರೂ, ಕುಟುಂಬಗಳಿಗೆ ಸೌಲಭ್ಯಸಿಕ್ಕಿರಲಿಲ್ಲ. ಕೊಳಚೆ ನಿರ್ಮೂಲನೆ ಮಂಡಳಿಯೊಂದಿಗೆ ನಿರಂತರ ಪತ್ರ ವ್ಯವಹಾರದಿಂದ ಎಲ್ಲ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲಾಗಿದೆ. ವಿದ್ಯುತ್ ಸಂಪರ್ಕದ ಕೊರತೆಯಿಂದ ಕತ್ತಲಲ್ಲಿ ಕುಟುಂಬಗಳಿದ್ದು, ವಿಷ ಜಂತುಗಳ ಕಾಟವಿತ್ತು. ಶಾಸಕ ಪರಣ್ಣ ಮುನವಳ್ಳಿ ಮುತುವರ್ಜಿಯಿಂದ ಕೊಳಚೆ ನಿರ್ಮೂಲನೆ ಮಂಡಳಿಯಿಂದ ವಿದ್ಯುತ್ ಸಂಪರ್ಕ ಕೊಡಿಸಲಾಗಿದ್ದು, ಮುಂದಿನ ದಿನಗಳಲ್ಲಿ ಹಕ್ಕುಪತ್ರ ಸೇರಿದಂತೆ ಕಾಲನಿ ಅಭಿವೃದ್ಧಿಗೆ ಅನುದಾನ ಕ್ರೋಡೀಕರಿಸಲಾಗುವುದು ಎಂದು ನಗರಸಭೆ ಸದಸ್ಯ ಶರಭೋಜಿರಾವ್ ಗಾಯಕ್ವಾಡ್ ತಿಳಿಸಿದ್ದಾರೆ.

    ನಗರದಲ್ಲಿ 35 ವಾರ್ಡ್‌ಗಳಲ್ಲಿ 27ವಾರ್ಡ್‌ಗಳು ಕೊಳಚೆ ಪ್ರದೇಶವೆಂದು ೋಷಣೆಯಾಗಿದ್ದರೂ ಈವರೆಗೆ ಸೌಲಭ್ಯ ದೊರೆಯುತ್ತಿಲ್ಲ. ಹಕ್ಕು ಪತ್ರ ದೊರೆತರೆ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ ಎಂದು ಕೊಳಚೆ ಪ್ರದೇಶದ ನಿವಾಸಿಗಳು ಮನವಿ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts