More

    ಉಚಿತರ ಪಡಿತರಕ್ಕೆ ಅಂಗವಿಕಲರ ಒತ್ತಾಯ, ಮಿನಿವಿಧಾನ ಸೌಧದ ಮುಂದೆ ರಾಜ್ಯ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟ ಮೌನ ಪ್ರತಿಭಟನೆ

    ಗಂಗಾವತಿ: ಅಂಗವಿಕಲರಿಗೆ ಉಚಿತ ಪಡಿತರ, ಮಾಸಾಶನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಂಗವಿಕಲರು ಹಾಗೂ ಪಾಲಕರ ಒಕ್ಕೂಟ ಮಿನಿವಿಧಾನಸೌಧದ ಎದುರು ಸೋಮವಾರ ಮೌನ ಪ್ರತಿಭಟನೆ ನಡೆಸಿತು.

    ಮನೆ ಮನೆ ಮುಂದೆ ಪ್ರತಿಭಟಿಸಿದ ನಂತರ ಮಿನಿವಿಧಾನಸೌಧಕ್ಕೆ ಸಂಘದ ಸದಸ್ಯರು ಉಪತಹಸೀಲ್ದಾರ್ ವಿ.ಎಚ್.ಹೊರಪೇಟಿಗೆ ಮನವಿ ಸಲ್ಲಿಸಿದರು. ನೇತೃತ್ವ ವಹಿಸಿದ್ದ ಒಕ್ಕೂಟದ ತಾಲೂಕಾಧ್ಯಕ್ಷ ಅಶೋಕ ಗುಡಿಕೋಟಿ ಮಾತನಾಡಿ, ಲಾಕ್‌ಡೌನ್‌ನಿಂದಾಗಿ ಅಂಗವಿಕಲರ ದುಡಿಮೆ ಇಲ್ಲದಂತಾಗಿದೆ. ಈಗ ನಾವು ಸಂಕಷ್ಟದಲ್ಲಿದ್ದೇವೆ. ವರಮಾನ ಇಲ್ಲದೇ ಬದುಕು ದುಸ್ತರವಾಗಿದೆ. ಒಪ್ಪತ್ತಿನ ಊಟಕ್ಕೂ ಸಂಕಷ್ಟ ಎದುರಾಗಿದೆ. ಈ ವೇಳೆ ನಮ್ಮ ನೆರವಿಗೆ ಸರ್ಕಾರ ಬರಬೇಕು. ಮಾಸಿಕ 7500ರೂ. ನೆರವು ನೀಡಬೇಕು. 16 ಅಗತ್ಯ ವಸ್ತುಗಳನ್ನೊಳಗೊಂಡ ಕಿಟ್ ವಿತರಿಸಬೇಕು. ಅಂಗವಿಕಲರ ಕುಟುಂಬ ವರ್ಗದವರಿಗೆ ಉದ್ಯೋಗ ಖಾತ್ರಿಯಡಿ ಕೆಲಸ ನೀಡಬೇಕು. ಚಿಕಿತ್ಸೆಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಗುತ್ತಿಗೆ, ದಿನಗೂಲಿ, ಗೌರವ ಧನ ಆಧಾರಿತ ತಾತ್ಕಾಲಿಕ ನೌಕರರು ಮತ್ತು ಕಾರ್ಮಿಕರಿಗೆ ಕೆಲಸದ ಭದ್ರತೆ ಮತ್ತು ಪೂರ್ಣ ವೇತನ ನೀಡಬೇಕು ಎಂದು ಒತ್ತಾಯಿಸಿದರು.

    ಒಕ್ಕೂಟದ ರಾಜ್ಯ ಸಮಿತಿ ಸದಸ್ಯ ಬಸವರಾಜ ಗೋನಾಳ್, ಪದಾಧಿಕಾರಿಗಳಾದ ಮಂಜುನಾಥ ಹೊಸ್ಕೇರಾ, ಉಮೇಶ ಜೇಕಿನ್, ಯಮನೂರ್ ,ಯಲ್ಲಮ್ಮ, ಅಶೋಕ ವಡ್ಡರಹಟ್ಟಿ, ಅಕ್ಬರ್ ಅಲಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts