More

    ಗುಂಡಮ್ಮ ಕ್ಯಾಂಪ್‌ಗೆ ಮಾರುಕಟ್ಟೆ ಸ್ಥಳಾಂತರ; ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ

    ವ್ಯಾಪಾರಿಗಳಿಗೆ ಬಾಡಿಗೆ ಹೊರೆಯಾಗದಂತೆ ಕ್ರಮ

    ಗಂಗಾವತಿ: ತರಕಾರಿ, ಮಾಂಸ ಮತ್ತು ಮೀನಿನ ವಹಿವಾಟು ಅನ್ನು ನಗರದ ಗುಂಡಮ್ಮ ಕ್ಯಾಂಪ್ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಲಾಗುವುದು. ಮಾರಾಟಗಾರರಿಗೆ ಬಾಡಿಗೆ ಹೊರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದರು.

    ನಗರದ ಗುಂಡಮ್ಮ ಕ್ಯಾಂಪ್‌ನಲ್ಲಿ 20 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಮಾರುಕಟ್ಟೆ ಪ್ರಾಂಗಣಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು. 177 ಮಳಿಗೆ ಹಾಗೂ ಹೊರಾಂಗಣ ಕಟ್ಟೆ ಹೊಂದಿರುವ ಮಾರುಕಟ್ಟೆ ಪ್ರಾಂಗಣ ಉದ್ಘಾಟನೆಯಾಗದೆ ನನೆಗುದಿಗೆ ಬಿದ್ದಿದೆ. ಮೀನು ಮತ್ತು ಮಾಂಸ ಮಾರಾಟಕ್ಕೆ ಪ್ರತ್ಯೇಕ ವ್ಯವಸ್ಥೆಯಿದೆ. ಬಾಡಿಗೆ ಮತ್ತು ಅಡ್ವಾನ್ಸ್ ದುಬಾರಿ ಹಿನ್ನೆಲೆಯಲ್ಲಿ ಮಾರುಕಟ್ಟೆ ಸ್ಥಳಾಂತರ ಸಾಧ್ಯವಾಗಿಲ್ಲ ಎಂದು ಹೇಳಿದರು.

    ನಗರದ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ತಳ್ಳು ಬಂಡಿಗಳನ್ನು ಪ್ರಾಂಗಣಕ್ಕೆ ಸ್ಥಳಾಂತರಿಸಬೇಕಿದೆ. ವಿದ್ಯುತ್, ಕುಡಿವ ನೀರು ಮತ್ತು ಭದ್ರತೆ ವ್ಯವಸ್ಥೆಯಿರುವ ಪ್ರಾಂಗಣಕ್ಕೆ ಮಾರಾಟಗಾರರನ್ನು ಕೂಡಲೇ ಸ್ಥಳಾಂತರಿಸಬೇಕೆಂದು ಶಾಸಕರು ಪೌರಾಯುಕ್ತ ಅರವಿಂದ ಜಮಖಂಡಿಗೆ ಸೂಚಿಸಿದರು.

    ನಗರಸಭೆ ಅಧ್ಯಕ್ಷೆ ಮಾಲಾಶ್ರೀ ಸಂದೀಪ ಮಾತನಾಡಿ, ವ್ಯಾಪಾರಿಗಳ ಮನವೊಲಿಸಿ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು. ಕಾಡಾ ಅಧ್ಯಕ್ಷ ಬಿ.ಎಚ್.ಎಂ.ತಿಪ್ಪೇರುದ್ರಸ್ವಾಮಿ, ನಗರಸಭೆ ಸದಸ್ಯರಾದ ಪರಶುರಾಮ ಮಡ್ಡೇರ್, ರಮೇಶ ಚೌಡ್ಕಿ, ಅಜಯ ಬಿಚ್ಚಾಲಿ, ಶರಭೋಜಿ ಗಾಯಕ್ವಾಡ್, ನವೀನ್ ಮಾಲಿ ಪಾಟೀಲ್, ವಾಸುದೇವ ನವಲಿ ಮತ್ತು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts