More

    ಶ್ರೀ ಸುಧೀಂದ್ರ ತೀರ್ಥರ ಮಧ್ಯಾರಾಧನೆ ಸಂಪನ್ನ

    ನವವೃಂದಾವನ ಗಡ್ಡಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು | ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯ

    ಗಂಗಾವತಿ: ತಾಲೂಕಿನ ಆನೆಗೊಂದಿಯ ಇತಿಹಾಸ ಪ್ರಸಿದ್ಧ ಪ್ರಸಿದ್ಧ ನವವೃಂದಾವನ ಗಡ್ಡಿಯಲ್ಲಿ ಶ್ರೀ ಸುಧೀಂದ್ರ ತೀರ್ಥರ ಮಧ್ಯಾರಾಧನೆ ಬುಧವಾರ ಭಕ್ತಿ, ಶ್ರದ್ಧೆಯಿಂದ ನೆರವೇರಿತು.

    ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಸಾನ್ನಿಧ್ಯದಲ್ಲಿ ಆರಾಧನೆಯ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಬೆಳಗ್ಗೆ ಶ್ರೀ ಸುಧೀಂದ್ರ ವೃಂದಾವನದ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತಾಭಿಷೇಕ, ಹೂವಿನ ಅಲಂಕಾರ, ಸಾಮೂಹಿಕ ಪಾರಾಯಣ, ಪಂಡಿತರಿಂದ ಉಪನ್ಯಾಸ, ಭಜನೆ, ಶ್ರೀಮನ್ಮೂಲ ರಾಮದೇವರ ಸಂಸ್ಥಾನ ಪೂಜೆ, ಮಹಾಮಂಗಳಾರತಿ, ಭಕ್ತರಿಗೆ ತಪ್ತ ಮುದ್ರಾಧಾರಣೆ, ತೀರ್ಥ ಪ್ರಸಾದ ವಿತರಣೆ ಮೊದಲಾದ ಕಾರ್ಯಕ್ರಮಗಳು ನೆರವೇರಿದವು.

    ಶ್ರೀಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿ, ಪದ್ಯ ಮತ್ತು ಗದ್ಯರೂಪದ ಗ್ರಂಥಗಳನ್ನು ನೀಡಿದ ಶ್ರೀ ಸುಧೀಂದ್ರ ತೀರ್ಥರು, ಕಲಿಯುಗ ಕಾಮಧೇನು ಶ್ರೀರಾಘವೇಂದ್ರ ಸ್ವಾಮಿಗಳ ಗುರುಗಳಾಗಿದ್ದರು. ಶ್ರೀಗಳ ಸ್ಮರಣೆಯಿಂದ ಭಕ್ತರು ಪುನೀತರಾಗುತ್ತಿದ್ದು, ಭಕ್ತರನ್ನುದ್ಧರಿಸಲು ನವವೃಂದಾವಗಡ್ಡಿಯಲ್ಲಿ ಅವರು ನೆಲಿಸಿದ್ದಾರೆ ಎಂದರು.

    ಪಂಡಿತರಾದ ದ್ವಾರಕನಾಥಾಚಾರ್ಯ, ವತ್ಸಲಾಚಾರ್ಯ, ಅನಂತಾಚಾರ್ ಪುರಾಣಿಕ, ವಿಪ್ರ ಸಮುದಾಯದ ಮುಖಂಡಾದ ರಾಮಕೃಷ್ಟಣ ಜಹಗೀರದಾರ, ನವಲಿ ಪ್ರಹ್ಲಾದರಾವ್, ವೈ.ರಾಮಕೃಷ್ಣ, ಶಾಮಾಚಾರ್ ರಾಯಸ್ತ, ಗುರುಪ್ರಸಾದ ಇಟಗಿ, ವಿಜಯೇಂದ್ರಚಾರ್, ಸುಮಂತ ಕುಲ್ಕರ್ಣಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts