More

    ವಿಶ್ವಕ್ಕೆ ಅಹಿಂಸೆ ಪರಿಚಯಿಸಿದ್ದು ಗಾಂಧಿ

    ಚಿಕ್ಕಮಗಳೂರು: ಇಡೀ ವಿಶ್ವಕ್ಕೆ ಅಹಿಂಸೆ ಪರಿಚಯಿಸಿದ್ದಲ್ಲದೆ ಅಹಿಂಸೆಯಿಂದಲೇ ಸ್ವಾತಂತ್ರೃಗಳಿಸಬಹುದು ಎಂಬುದನ್ನು ತೋರಿಸಿಕೊಟ್ಟವರು ಮಹಾತ್ಮ ಗಾಂಧಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದರು.

    ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಪಂ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವಾರ್ತಾ ಇಲಾಖೆ ಹಾಗೂ ನೆಹರು ಯುವ ಕೇಂದ್ರದಿಂದ ಆಯೋಜಿಸಿದ್ದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹಾದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
    ಅಹಿಂಸಾತ್ಮಕ ಹೋರಾಟದಿಂದ ಮಾತ್ರ ಬ್ರಿಟಿಷರನ್ನು ದೇಶದಿಂದ ಓಡಿಸಬಹುದು ಎಂಬ ಪರಿಕಲ್ಪನೆಯನ್ನು ರಾಷ್ಟ್ರದ ಜನತೆಗೆ ಗಾಂಧೀಜಿ ತೋರಿಸಿಕೊಟ್ಟರು. ಗಾಂಧೀಜಿ ಅವರ ಈ ಪರಿಕಲ್ಪನೆ ಒಪ್ಪಿದ ದೇಶದ ಜನ ಅಹಿಂಸಾತ್ಮಕ ಹೋರಾಟದ ಮೂಲಕ ಗಾಂಧೀಜಿ ಅವರನ್ನು ಅನುಸರಿಸಿದ್ದರಿಂದಲೇ ದೇಶಕ್ಕೆ ಸ್ವಾಂತಂತ್ರೃ ಸಿಕ್ಕಿತು ಎಂದು ಹೇಳಿದರು.
    ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಅಹಿಂಸಾತ್ಮಕ ಹೋರಾಟದಿಂದ ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟ ಪ್ರಪಂಚದ ಮೊದಲ ವ್ಯಕ್ತಿ ಗಾಂಧೀಜಿ. ಅವರ ಬದುಕೇ ಒಂದು ಸಂದೇಶ. ಪ್ರಪಂಚದ ಮಾದರಿ ವ್ಯಕ್ತಿಯಾಗಿ ಬದುಕಿದವರು ಗಾಂಧೀಜಿ ಎಂದರು.
    ಎಂಎಲ್‌ಸಿ ಎಸ್.ಎಲ್.ಬೋಜೇಗೌಡ ಮಾತನಾಡಿ, ಸಾಮರಸ್ಯದ ಬದುಕನ್ನು ಸಾರಿದವರು ಗಾಂಧೀಜಿ. ಅವರ ಆದರ್ಶ, ತತ್ವ ಸಿದ್ಧಾಂತ, ಸಂದೇಶಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಮೂಲಕ ಅವರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಲಾಲ್ ಬಹಾದೂರ್ ಶಾಸ್ತ್ರಿ ಅವರು ಪ್ರಧಾನಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದವರು ಎಂದು ಹೇಳಿದರು.
    ಗಾಂಧಿ ಜಯಂತಿ ಅಂಗವಾಗಿ ವಾರ್ತಾ ಇಲಾಖೆಯಿಂದ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
    ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಡಿಸಿ ಮೀನಾ ನಾಗರಾಜ್, ಜಿಪಂ ಸಿಇಒ ಡಾ. ಗೋಪಾಲಕೃಷ್ಣ, ಎಸ್ಪಿ ಡಾ. ವಿಕ್ರಮ ಅಮಟೆ, ಜಿಪಂ ಯೋಜನಾಧಿಕಾರಿ ಕರೇಗೌಡ, ಎಸಿ ರಾಜೇಶ್, ನಗರಸಭೆ ಆಯುಕ್ತ ಬಸವರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಮಂಜುಳಾ ಹುಲ್ಲಹಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts