More

    ಕೊಟಬಾಗಿ ಪಂಚಾಯಿತಿಗೆ `ಗಾಂಧಿ ಗ್ರಾಮ ಪುರಸ್ಕಾರ’

    ಮಂಜುನಾಥ ಎಸ್. ಅಂಗಡಿ ಧಾರವಾಡ
    ಗ್ರಾಮ ಪಂಚಾಯಿತಿಗಳು ಇಂದು ಆಡಳಿತಾತ್ಮಕ ಹಾಗೂ ಅನುದಾನದಲ್ಲೂ ಬಲಿಷ್ಠವಾಗಿವೆ. ಗ್ರಾ.ಪಂ.ಗಳ ಕಾರ್ಯವೈಖರಿಯನ್ನು ಗುರುತಿಸಿ ಪ್ರೇರೇಪಿಸುವ ಉದ್ದೇಶದಿಂದ ನೀಡಲಾಗುವ `ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಜಿಲ್ಲೆಯ 7 ಗ್ರಾ.ಪಂ.ಗಳು ಭಾಜನವಾಗಿವೆ. ತಾಲೂಕಿನ ಕೊಟಬಾಗಿಯ ಆಡಳಿತ ವ್ಯವಸ್ಥೆ ಮತ್ತು ಅಭಿವೃದ್ಧಿ ಕಾರ್ಯಗಳು ಇತರ ಪಂಚಾಯಿತಿಗಳಿಗೆ ಮಾದರಿಯಾಗಿದೆ.

    • ಏನಿದು ಪುರಸ್ಕಾರ…?: ಕೊಟಬಾಗಿ, ಕಲ್ಲೂರ ಮತ್ತು ಜೀರಿಗವಾಡ ಗ್ರಾಮಗಳು ಸೇರಿ ಕೊಟಬಾಗಿ ಗ್ರಾ.ಪಂ. ಅಸ್ತಿತ್ವದಲ್ಲಿದ್ದು, ೧೭ ಸದಸ್ಯರಿದ್ದಾರೆ. ಅಧ್ಯಕ್ಷೆ, ಉಪಾಧ್ಯಕ್ಷ, ಸರ್ವ ಸದಸ್ಯರು ಮತ್ತು ಅಭಿವೃದ್ಧಿ ಅಽಕಾರಿ ಸುನಂದಾ ಕಮತಿ ಅವರ ಸಮನ್ವಯದಿಂದ ಮಾದರಿ ಕಾರ್ಯಗಳಾಗಿವೆ. ಪಂಚಾಯತ್ ರಾಜ್ ಇಲಾಖೆ ಗಾಂಽ ಗ್ರಾಮ ಪುರಸ್ಕಾರಕ್ಕೆ ಕೆಲ ಮಾನದಂಡ ನಿಗದಿಪಡಿಸಿದೆ. ಮುಖ್ಯವಾಗಿ ಉತ್ತಮ ಆಡಳಿತ, ಸಾಮಾನ್ಯ ಸಭೆ, ಗ್ರಾಮ ಮತ್ತು ವಾರ್ಡ್ ಸಭೆಗಳ ಆಯೋಜನೆ, ಜನಸ್ಪಂದನ, ಮೂಲ ಸೌಕರ್ಯ, ಅಭಿವೃದ್ಧಿ ಕಾರ್ಯಗಳಲ್ಲಿ ಪಂಚಾಯಿತಿ ಮುಂದಿದೆ.
      ಪAಚಾಯಿತಿ ವ್ಯಾಪ್ತಿಯಲ್ಲಿ 1 ಪ್ರೌಢಶಾಲೆ, 4 ಪ್ರಾಥಮಿಕ ಶಾಲೆಗಳಿವೆ. ಇಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಆಟದ ಮೈದಾನ, ಕಾಂಪೌAಡ್ ನಿರ್ಮಾಣ, ಶೌಚಗೃಹ ನಿರ್ಮಸಲಾಗಿದೆ. ಪಂಚಾಯಿತಿ ನಿಧಿ ಅಡಿ ಮೈದಾನಗಳಲ್ಲಿ ಯುವಕರಿಗೆ ಓಪನ್ ಜಿಮ್, ಮಕ್ಕಳಿಗಾಗಿ ಆಟದ ಸಾಮಗ್ರಿಗಳನ್ನು ಅಳವಡಿಸಲಾಗಿದೆ. ಮಕ್ಕಳು ರಾತ್ರಿ ಕೂಡ ಆಡಲು ಫ್ಲಡ್ ಲೈಟ್ ವ್ಯವಸ್ಥೆ ಕಲ್ಪಿಸಲಾಗಿದೆ. ಅಮೃತ ಉದ್ಯಾನಗಳು ಹಸಿರಿನಿಂದ ನಳನಳಿಸುತ್ತಿವೆ. ಸ್ಮಶಾನಗಳಲ್ಲಿ ಆಸನ ವ್ಯವಸ್ಥೆ, ಫೇವರ್ಸ್ ಅಳವಡಿಕೆ ಹಾಗೂ ಸಸಿ ನೆಟ್ಟು ನೆರಳಿನ ವ್ಯವಸ್ಥೆ ಮಾಡಲಾಗಿದೆ.
      ೨೦೨೨- ೨೩ನೇ ಸಾಲಿನ ಗಾಂಽ ಗ್ರಾಮ ಪುರಸ್ಕಾರಕ್ಕೆ ಜಿಲ್ಲೆಯ ಕೊಟಬಾಗಿ, ದೇವರಗುಡಿಹಾಳ, ತಂಬೂರ, ಇಂಗಳಗಿ, ಶಿರಕೋಳ, ಅರವಟಗಿ, ಶಲವಡಿ ಪಂಚಾಯಿಗಳು ಭಾಜನವಾಗಿವೆ. ಅಧಿಕಾರಿಗಳ ಇಚ್ಛಾಶಕ್ತಿ ಮತ್ತು ಸಮರ್ಪಕ ಕಾರ್ಯವೈಖರಿಯು ಸದಸ್ಯರನ್ನು ವಿಧಾನಸಭೆಗೆ ಆಹ್ವಾನಿಸಿದೆ.

    ಕ್ಷೇತ್ರ ಅಧ್ಯಯನ: ಗ್ರಾಮಗಳಲ್ಲಿ ನೈರ್ಮಲ್ಯಕ್ಕಾಗಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲಾಗಿದೆ. ಸ್ವಚ್ಛತಾ ವಾಹಿನಿಯಲ್ಲಿ ಕಸ ಸಂಗ್ರಹಿಸಿ ಹಸಿ ಕಸ- ಒಣ ಕಸವನ್ನು ಬೇರ್ಪಡಿಸಿ ಮರುಬಳಸುವ ಕಾರ್ಯ ಮಾದರಿಯಾಗಿದೆ. ಇದನ್ನು ವೀಕ್ಷಿಸಲು ಬೇರೆ ಪಂಚಾಯಿತಿಗಳ ಸದಸ್ಯರು ಕ್ಷೇತ್ರ ಅಧ್ಯಯನಕ್ಕೆ ಬರುತ್ತಿರುವುದು ವಿಶೇಷ. ಬಚ್ಚಲು ನೀರು ರಸ್ತೆಗೆ ಬಂದು ಗಲೀಜಾಗುವುದನ್ನು ತಡೆಯಲು ಬಹುತೇಕ ಮನೆಗಳಿಗೆ ಇಂಗುಗು0ಡಿ ನಿರ್ಮಿಸಲಾಗಿದೆ.

    3 ಅಮೃತ ಸರೋವರ: ನರೇಗಾ ಅಡಿ ೩ ಅಮೃತ ಸರೋವರಗಳನ್ನು ನಿರ್ಮಿಸಲಾಗಿದೆ. ಕೆರೆಗಳ ಹೂಳೆತ್ತಿ ಮಳೆನೀರು ಸಂಗ್ರಹವಾಗುವAತೆ ಸುತ್ತಲೂ ಕಲ್ಲಿನ ದಂಡೆ ನಿರ್ಮಿಸಲಾಗಿದೆ. ದಂಡೆಯ ಮೇಲೆ ಸಸಿ ನೆಡಲಾಗಿದ್ದು, ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗಿದೆ. ಸ್ವಾತಂತ್ರ‍್ಯದ ೭೫ನೇ ಅಮೃತ ಮಹೋತ್ಸವ ಸಂದರ್ಭದಲ್ಲಿ ಈ ಕೆರೆಗಳ ದಂಡೆಯ ಮೇಲೆ ಧ್ವಜಾರೋಹಣ ಮಾಡಿದ್ದು ವಿಶೇಷ.

    ಡಿಜಿಟಲ್ ಲೈಬ್ರರಿ: ಮಕ್ಕಳು ಓದಲು ಅನುಕೂಲವಾಗುವಂಥ ಡಿಜಿಟಲ್ ಲೈಬ್ರರಿ ನಿರ್ಮಿಸಲಾಗಿದೆ. ಶಾಲಾ ಮಕ್ಕಳಲ್ಲಿ ಗ್ರಂಥಾಲಯ ಓದಿನ ಹವ್ಯಾಸ ಬೆಳೆಸಲಾಗಿದೆ. ಮಕ್ಕಳಿಗೆ ನಿಯತಕಾಲಿಕೆ, ದಿನಪತ್ರಿಕೆಗಳು ಮತ್ತು ಸಿಇಟಿ, ಸ್ಪರ್ಧಾತ್ಮಕ ಪರೀಕ್ಷೆ ಓದುವವರಿಗೆ ಪುಸ್ತಕಗಳ ವ್ಯವಸ್ಥೆ ಇದೆ. ಶಾಲಾ ಪಠ್ಯಾಧಾರಿತ ಟ್ಯಾಬ್ ಮತ್ತು ವಿಡಿಯೋ ಪಾಠಗಳು ಮಕ್ಕಳನ್ನು ಕೈ ಬೀಸಿ ಕರೆಯುತ್ತಿವೆ.

    ಪಿಡಿಒ ಹಾಗೂ ಪಂಚಾಯಿತಿ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಾರೆ. ಸರ್ವ ಸದಸ್ಯರ ಸಹಕಾರ ಮತ್ತು ಊರಿನ ಜನರ ಪ್ರೋತ್ಸಾಹದಿಂದ ಗ್ರಾಮಗಳ ಅಭಿವೃದ್ಧಿಯಾಗಿದೆ. ದೂರದ ಊರುಗಳ ಸದಸ್ಯರು ನೋಡಲು ಬಂದಿರುವುದು ನಮ್ಮ ಹೆಮ್ಮೆ.- ಶಕುಂತಲಾ ಭಂಗಿ, ಕೊಟಬಾಗಿ ಗ್ರಾ.ಪಂ. ಅಧ್ಯಕ್ಷೆ

    ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಇಚ್ಛಾಶಕ್ತಿ ಮತ್ತು ಅಧಿಕಾರಿಗಳ ಮಾರ್ಗದರ್ಶನ ಹಾಗೂ ಸಿಬ್ಬಂದಿಯ ಸಹಕಾರ, ಗ್ರಾಮಸ್ಥರ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ. ರಾಜ್ಯ ಮಟ್ಟದ ಪುರಸ್ಕಾರ ಜವಾಬ್ದಾರಿಯನ್ನು ಹೆಚ್ಚಿಸಿದೆ.- ಸುನಂದಾ ಐ. ಕಮತಿ, ಕೊಟಬಾಗಿ ಪಿಡಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts