More

    ಗಣಪತಿ ಕೆರೆಗೆ ಕಾಯಕಲ್ಪ ನೀಡಲು ‘ಹಬ್ಬ’

    ಸಾಗರ: ಇತಿಹಾಸ ಗಣಪತಿ ಕೆರೆ ಹಬ್ಬದ ಹೆಸರಿನಲ್ಲಿ ಕೆರೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಊರಿನ ಹೃದಯಭಾಗದಲ್ಲಿರುವ ಈ ಕೆರೆಗೆ ಕಾಯಕಲ್ಪ ನೀಡಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಜವಾಬ್ದಾರಿ. ಎಲ್ಲರೂ ಸೇರಿ ಕೆಲಸ ಆರಂಭಿಸೋಣ. ಇದಕ್ಕೆ ತಪ್ಪು ಅರ್ಥ ಕಲ್ಪಿಸುವುದು ಬೇಡ ಎಂದು ಶಾಸಕ ಎಚ್.ಹಾಲಪ್ಪ ಹರತಾಳು ಹೇಳಿದರು.

    ಹಬ್ಬದ ಹೆಸರಿನಲ್ಲಿ ಕೆರೆ ಕಾಯಕಲ್ಪಕ್ಕೆ ಮುಂದಾದರೆ ಹೆಚ್ಚು ಜನ ಸ್ವಯಂಪ್ರೇರಿತವಾಗಿ ಪಾಲ್ಗೊಳ್ಳುತ್ತಾರೆ ಎಂಬ ಸಾರ್ವಜನಿಕರ ಸಲಹೆ ಮೇರೆಗೆ ‘ಕೆರೆ ಹಬ್ಬ’ ಎಂದು ನಾಮಕರಣ ಮಾಡಿದ್ದೇವೆ. ಕೆರೆಯ ಸುತ್ತಲೂ ವಾಕಿಂಗ್ ಪಾಥ್ ನಿರ್ಮಾಣ ಮಾಡುವುದು ಬೇಡ, ಕೆರೆ ಮಲಿನಗೊಳ್ಳುತ್ತದೆ ಎಂದು ಕೆಲವರು ಅಭಿಪ್ರಾಯ ನೀಡಿದ್ದಾರೆ. ಅದಕ್ಕೆ ನಮ್ಮದೇನೂ ಆಕ್ಷೇಪವಿಲ್ಲ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಗಣಪತಿ ಕೆರೆ ಒತ್ತುವರಿ ಆಗಿರುವುದು ಎಲ್ಲರಿಗೂ ತಿಳಿದಿದೆ. ಆದರೆ ತಕ್ಷಣದಲ್ಲಿ ತೆರವು ಸಾಧ್ಯವಿಲ್ಲ. ಕೆರೆ ಜಾಗ ಸಂಬಂಧ ನ್ಯಾಯಾಲಯಕ್ಕೂ ಹೋಗಿದ್ದಾರೆ. ಈಗಾಗಲೆ ಕೆರೆ ಸಂಪೂರ್ಣ ಹಾಳಾಗುತ್ತಿದೆ. ನಮ್ಮ ರಾಜರು ನೀರಿನ ಉದ್ದೇಶಕ್ಕೆ ನಿರ್ವಿುಸಿರುವ ಕೆರೆ ಕಣ್ಣೆದುರೇ ಹಾಳಾಗುವುದನ್ನು ನೋಡಲು ಸಾಧ್ಯವಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ಕೆರೆ ಸ್ವಚ್ಛಗೊಳಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ. ಈ ಪ್ರಕ್ರಿಯೆ ಮುಂದುವರಿಯುತ್ತದೆ. ಒತ್ತುವರಿ ತೆರವುಗೊಳಿಸುವ ಮಾತಿಗೆ ಇಂದೂ ಬದ್ಧ ಎಂದರು.

    ಕಾರ್ಯಕ್ರಮಕ್ಕೆ ಬಿ.ವೈ.ರಾಘವೇಂದ್ರ, ಕಾಗೋಡು ತಿಮ್ಮಪ್ಪ, ಎಲ್.ಟಿ.ತಿಮ್ಮಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ಪ್ರಫುಲ್ಲಾ ಮಧುಕರ್ ಸೇರಿ ಎಲ್ಲರನ್ನೂ ಆಹ್ವಾನಿಸಲಾಗಿದೆ. ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಹೆಸರಾಂತ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕಲಾವಿದರಿಂದ ನೃತ್ಯ, ಗಾಯಕ ಹನುಮಂತ ಅವರಿಂದ ಗಾಯನ, ಸ್ಥಳೀಯ ಕಲಾವಿದರ ಕಾರ್ಯಕ್ರಮಗಳ ಜತೆಗೆ ಜಿಲ್ಲಾಮಟ್ಟದ ಪ್ರೋ ಕಬಡ್ಡಿ, ಆಹಾರ ಮೇಳ ಸಹ ಆಯೋಜನೆ ಮಾಡಲಾಗಿದೆ ಎಂದರು ಹೇಳಿದರು.

    ಬಿಜೆಪಿ ಪ್ರಮುಖರಾದ ಯು.ಎಚ್.ರಾಮಪ್ಪ, ಟಿ.ಡಿ.ಮೇಘರಾಜ್, ವಿ.ಮಹೇಶ್, ಆರ್.ಶ್ರೀನಿವಾಸ್, ಗಣೇಶ ಪ್ರಸಾದ್, ಲೋಕನಾಥ್ ಬಿಳಿಸಿರಿ, ಚೇತನರಾಜ್ ಕಣ್ಣೂರು, ಪ್ರೇಮಾ ಕಿರಣ್​ಸಿಂಗ್, ಮೈತ್ರಿ ಪಾಟೀಲ್, ಭಾವನಾ ಸಂತೋಷ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts