More

    ‘ಆದಿಪುರುಷ್​’ ಚಿತ್ರಕ್ಕೆ ‘ಗೇಮ್​ ಆಫ್​ ಥ್ರೋನ್ಸ್​’ ತಂಡದ ಗ್ರಾಫಿಕ್ಸ್​?

    ‘ಆದಿಪುರುಷ್​’ ಚಿತ್ರದ ಘೋಷಣೆಯಾಗಿ ಇನ್ನೂ ಒಂದು ವಾರ ಸಹ ಆಗಿಲ್ಲ. ಆಗಲೇ ಚಿತ್ರದ ಬಗ್ಗೆ ಪ್ರತಿದಿನ ಒಂದಲ್ಲಾ ಒಂದು ಸುದ್ದಿಗಳು ಕೇಳಿ ಬರುತ್ತಲೇ ಇವೆ. ಈಗ ಬಂದಿರುವ ಹೊಸ ಸುದ್ದಿಯ ಪ್ರಕಾರ, ಭಾರತದಲ್ಲಿ ನಿರ್ಮಾಣವಾಗುವ ಮಾಮೂಲೀ ವಿಎಫ್​ಎಕ್ಸ್ ಚಿತ್ರ ಇದಾಗಿರುವುದಿಲ್ಲವಂತೆ. ಬದಲಿಗೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಚಿತ್ರ ಮೂಡಿಬರಲಿದೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಹ್ಯಾಪಿ ಬರ್ತ್​ಡೇ ಡಾಲಿ ಧನಂಜಯ; ಚಿತ್ರತಂಡಗಳಿಂದ ಪೋಸ್ಟರ್ ಗಿಫ್ಟ್​

    ಮೂಲಗಳ ಪ್ರಕಾರ, ಚಿತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೂಡಿಬರಬೇಕು ಎನ್ನುವ ನಿಟ್ಟಿನಲ್ಲಿ ನಿರ್ದೇಶಕ ಓಂ ರೌತ್​ ಅವರು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಎಫ್​ಎಕ್ಸ್​ ತಂತ್ರಜ್ಱರನ್ನು ಈ ಚಿತ್ರಕ್ಕೆ ಕರೆಸುತ್ತಿದ್ದಾರಂತೆ. ಪ್ರಮುಖವಾಗಿ ‘ಗೇಮ್​ ಆಫ್​ ಥ್ರೋನ್ಸ್​’ಗೆ ಕೆಲಸ ಮಾಡಿದ್ದ ತಂತ್ರಜ್ಱರಿಂದ ಈ ಕೆಲಸ ಮಾಡಿಸಲಾಗುತ್ತದಂತೆ.

    ಇತ್ತೀಚಿನ ದಿನಗಳಿಗೆ ಹಾಲಿವುಡ್​ ಚಿತ್ರಗಳ ವಿಷ್ಯುಯಲ್​ ಎಫೆಕ್ಟ್ಸ್​ ಕೆಲಸ ಮಾಡುವ ಸ್ಟುಡಿಯೋಗಳು ಕೆನೆಡಾದಲ್ಲಿ ನೆಲೆಗೊಂಡಿವೆಯಂತೆ. ಈ ನಿಟ್ಟಿನಲ್ಲಿ, ಅಲ್ಲಿರುವ ಹಲವು ಸ್ಟುಡಿಯೋದವರನ್ನು ಓಂ ರೌತ್​ ಮಾತನಾಡಿಸಿದ್ದು, ಆ ಪೈಕಿ ಬೆಸ್ಟ್​ ಎನ್ನುವವರನ್ನು ಫೈನಲ್​ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.

    ‘ಆದಿಪುರುಷ್​’ ಚಿತ್ರವು ರಾಮಾಯಣವನ್ನಾಧರಿಸಿದ್ದು, ಈ ಚಿತ್ರವನ್ನು ಟಿ-ಸೀರೀಸ್​ನ ಭೂಷಣ್​ ಕುಮಾರ್​ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ಪ್ರಭಾಸ್​ ಅವರು ರಾಮನ ಪಾತ್ರವನ್ನು ಮಾಡುತ್ತಿದ್ದು, ಅದಕ್ಕೆ ಸೂಕ್ತ ತಯಾರಿಗಾಗಿ ಹಾಲಿವುಡ್​ನಿಂದ ತಂತ್ರಜ್ಱರನ್ನು ಕರೆಸಲಾಗುತ್ತಿದೆ. ಪ್ರಮುಖವಾಗಿ. ಪ್ರಮುಖವಾಗಿ ಪ್ರಭಾಸ್​ಗೆ ಬಿಲ್ವಿದ್ಯೆಯನ್ನು ಹೇಳಿಕೊಡುವುದಕ್ಕೆಂದು ತರಬೇತುದಾರರು ಬರಲಿದ್ದಾರಂತೆ. ಅಷ್ಟೇ ಅಲ್ಲ, ಪ್ರಭಾಸ್​ ಅವರ ದೇಹ ಹುರಿಗೊಳಿಸುವುದಕ್ಕೂ ಟ್ರೇನರ್​ಗಳು ಬರಲಿದ್ದಾರಂತೆ.

    ಇದನ್ನೂ ಓದಿ: ಸುಶಾಂತ್​ ಪ್ರಕರಣದಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ ಕಂಗನಾ ರಣಾವತ್​!

    ಸದ್ಯಕ್ಕೆ ಪ್ರೀ-ಪ್ರೊಡಕ್ಷನ್​ ಕೆಲಸಗಳು ಪ್ರಾರಂಭವಾಗಿವೆ. ಮೊದಲಿಗೆ ಬಾಕಿ ಇರುವ ‘ರಾಧೇ ಶ್ಯಾಮ್​’ ಚಿತ್ರದ ಚಿತ್ರೀಕರಣ ಮುಗಿಸಲಿರುವ ಪ್ರಭಾಸ್​, ಆ ನಂತರ ಹೆಸರಿಡದ ಚಿತ್ರವೊಂದರಲ್ಲಿ ದೀಪಿಕಾ ಪಡುಕೋಣೆ ಜತೆಗೆ ನಟಿಸಲಿದ್ದಾರೆ. ಆ ನಂತರ ‘ಆದಿಪುರುಷ್​’ ಶುರುವಾಗುವ ಸಾಧ್ಯತೆ ಇದೆ.

    ಸಿನಿಮಾ ಅವಕಾಶಕ್ಕಾಗಿ ನಿರ್ದೇಶಕ, ನಿರ್ಮಾಪಕರೊಂದಿಗೆ ಪಲ್ಲಂಗ ಹಂಚಿಕೊಂಡಿದ್ದರು ಈ ನಟಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts