More

    16ರಿಂದ ಚಿತ್ರದುರ್ಗದಲ್ಲಿ ತ್ರಿಸಂಧ್ಯಾ ಕವಿ ಜಯಂತ್ಯುತ್ಸವ

    ಚಿತ್ರದುರ್ಗ: ಬೆಂಗಳೂರಿನ ಕರ್ನಾಟಕ ಕಲಾ ಪರಿಷತ್,ಚಿತ್ರದುರ್ಗದ ಬ್ರಾಹ್ಮಣ ಸಂಘ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘ ನಗರದ ಗಾಯತ್ರಿ ಕಲ್ಯಾಣಮಂಟಪದ ಶಾರದಾ ಸಭಾಂಗಣದಲ್ಲಿ ನ.16ರಿಂದ ಮೂರು ದಿನಗಳ ಕಾಲ ನಿತ್ಯ ಸಂಜೆ 5.30ಕ್ಕೆ ತೊರವೆ ನರಹರಿ,ಲಕ್ಷ್ಮೀಶ ಹಾಗೂ ಕುಮಾರವ್ಯಾಸರ ದಿವ್ಯ ಸ್ಮರಣೆಗಾಗಿ ತ್ರಿಸಂಧ್ಯಾ ಕವಿ ಜಯಂತ್ಯುತ್ಸವ ಆಯೋಜಿಸಲಾಗಿದೆ.
    16ರಂದು ಕವಿ ತೊರವೆ ನರಹರಿ ಸ್ಮರಣಾರ್ಥ ಕುಮಾರವ್ಯಾಸ ಪ್ರಶಸ್ತಿ ವಿಜೇತ ಗಮಕಿ ಗಂಗಮ್ಮ ಕೇಶವಮೂರ್ತಿ ಅವರು ಕವಿಸ್ಮರಣೆ ಮಾಡಿ ಕವಿ ಮುದ್ದಣನ ಶ್ರೀರಾಮ ಪಟ್ಟಾಭಿಷೇಕ ಪ್ರಸಂಗವನ್ನು ವಾಚಿಸುವರು. ಶಿವಮೊಗ್ಗದ ಶ್ರೀ ಎಂ.ಎಸ್.ವಿನಾಯಕ ಅವರು ವ್ಯಾಖ್ಯಾನ ಮಾಡುವರು.
    17ರಂದು ಹಾಸನದ ವಿದುಷಿ ರಾಧಾಕೃಷ್ಣ ಸ್ವರೂಪ್ ಅವರು ಲಕ್ಷ್ಮೀಶ ಕವಿಯ ಜೈಮಿನಿ ಭಾರತದ ಸುಧನ್ವ ಭಕ್ತಿ ಪ್ರಸಂಗವನ್ನು ವಾಚಿಸಲಿದ್ದು, ತಿಪಟೂರಿನ ವಿದುಷಿ ಸೌಮ್ಯ ಶ್ರೀಕಂಠ ಅವರು ವ್ಯಾಖ್ಯಾನ ಮಾಡುವರು. 18ರಂದು ಸಂಜೆ ಉತ್ಸವದ ಸಮಾರೋಪವಿದ್ದು, ಸ್ಥಳೀಯ ಪ್ರತಿಭೆಗ ಳಾದ ಸವಿತಾ ದಿವಾಕರ,ಯೋಗೇಶ್ವರಿ ರಂಗನಾಥ,ತ್ರಿಷಾ,ಭಾರ್ಗವಿ ಇವರು ಕುಮಾರವ್ಯಾಸ ಭಾರತದ ಕೃಷ್ಣ ರಾಯಭಾರ ಪ್ರಸಂಗವನ್ನು ವಾಚಿಸುವರು. ಕೆ.ಆರ್.ರಮಾದೇವಿ ಅವರು ವ್ಯಾಖ್ಯಾನ ಮಾಡುವರು. ಸ್ವಾತಂತ್ರ್ಯಅಮೃತ ಮಹೋತ್ಸವದ ಅಂಗವಾಗಿ ದೇಶ ಭಕ್ತಿಗೀತೆಗಳ ಗಾಯನವಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts