More

    ಹುಟ್ಟೂರಿಗಾಗಿ ಎಕರೆ ಭೂದಾನ, 30 ಲಕ್ಷ ಹಣ!

    ಅಕ್ಕಿಆಲೂರ: ಗದಿಗೆಪ್ಪ ದೊಡ್ಡಮನಿ ಎಂಬುವರು ತಮ್ಮ ಹುಟ್ಟೂರು ಕುಂದೂರ ನೀರಲಗಿಗಾಗಿ ಒಂದು ಎಕರೆ ಭೂಮಿ ಹಾಗೂ 30 ಲಕ್ಷ ರೂ. ಹಣ ನೀಡಿದ್ದಾರೆ. ಅವರ ಈ ದಾನದಿಂದ ಭವ್ಯ ಧಾರ್ವಿುಕ ಭವನ ನಿರ್ವಣವಾಗಿ ಲೋಕಾರ್ಪಣೆಗೊಳ್ಳುತ್ತಿದೆ. ದಾನಿ ಗದಿಗೆಪ್ಪ ಅವರ ಕಾರ್ಯಕ್ಕೆ ಇಡೀ ಊರೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.

    ನರೇಗಲ್ಲ ಜಿ.ಪಂ. ವ್ಯಾಪ್ತಿಯ 300 ಮನೆಗಳಿರುವ ಸಣ್ಣ ಗ್ರಾಮ ಕುಂದೂರ ನೀರಲಗಿಯಲ್ಲಿ ಕಡುಬಡತನದಲ್ಲಿ ಜನಿಸಿದವರು ಗದಿಗೆಪ್ಪ. ಇವರು ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಬೆಳಗಾವಿ ಜಿಲ್ಲೆ ಸಂಕೇಶ್ವರದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಈಗ 34 ವರ್ಷಗಳಿಂದ ಅಮೆರಿಕದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಂದೆಯ ಆಸರೆ ಇಲ್ಲದಿದ್ದರೂ ಉತ್ತಮ ಶಿಕ್ಷಣ ಪಡೆದು ದೊಡ್ಡಮಟ್ಟದಲ್ಲಿ ಬೆಳೆಯಲು ಕಾರಣವಾದ ಕುಂದೂರ ನೀರಲಗಿ ಗ್ರಾಮದ ಋಣ ತೀರಿಸಲು ತಮ್ಮ ಹೆಸರಿನಲ್ಲಿ ಭೂಮಿ ಇಲ್ಲದಿದ್ದರೂ 1 ಎಕರೆ ಖರೀದಿಸಿ ದಾನ ನೀಡಿ ಭವನ ನಿರ್ವಣಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ.

    ಕೈಜೋಡಿಸಿದ ಸ್ನೇಹಿತ: ಗೆದಿಗೆಪ್ಪನವರ ಜೊತೆ ಅವರ ಸ್ನೇಹಿತ ಸಿಂಧಗಿ ದತ್ತು ಶಾಸ್ತ್ರಿ ಅವರೂ ಭವನ ನಿರ್ವಣಕ್ಕೆ 28 ಲಕ್ಷ ರೂ. ನೀಡಿದ್ದಾರೆ.

    ಉದ್ಘಾಟನೆ ನಾಡಿದ್ದು: ನೂತನ ಬಸವೇಶ್ವರ ಭವನ ಫೆ. 7ರಂದು ಬೆಳಗ್ಗೆ 10.30ಕ್ಕೆ ಲೋಕಾರ್ಪಣೆಗೊಳ್ಳಲಿದೆ. ಬೆಳಗ್ಗೆ 5 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ವಿವಿಧ ಪೂಜಾ ವಿಧಿ-ವಿಧಾನಗಳು, ಹೋಮ- ಹವನ ನಡೆಯಲಿವೆ. ಹಾವೇರಿ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹೋತನಹಳ್ಳಿ ಸಿಂಧಗಿ ಮಠದ ಶಂಭುಲಿಂಗ ಪಟ್ಟಾಧ್ಯಕ್ಷರು ಸಾನ್ನಿಧ್ಯ ವಹಿಸುವರು. ದಾನಿ ಗದಿಗೆಪ್ಪ ದೊಡ್ಡಮನಿ, ಸಿಂಧಗಿ ದತ್ತು ಶಾಸ್ತ್ರಿ ಉದ್ಘಾಟಿಸುವರು. ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಹಾದೆಪ್ಪ ದೊಡ್ಡಮನಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಸಿ.ಎಂ. ಉದಾಸಿ, ಮಾಜಿ ಶಾಸಕ ಮನೋಹರ ತಹಶೀಲ್ದಾರ್ ಪಾಲ್ಗೊಳ್ಳುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts