More

    ಯೋಗದಿಂದ ಮನುಷ್ಯನ ಆರೋಗ್ಯ ಸದೃಢ

    ವಿಜಯವಾಣಿ ಸುದ್ದಿಜಾಲ ಗದಗ
    ಯೋಗದಿಂದ ಮನುಷ್ಯನ ಆರೋಗ್ಯದಲ್ಲಿ ಸದೃಢತೆ ಬರಲು ಸಾಧ್ಯವಿದೆ ಎಂದು ನಗರದ ಅಡವೀಂದ್ರ ಸ್ವಾಮಿ ಮಠದ ಧರ್ಮದಶಿರ್ ಮಹೇಶ್ವರ ಸ್ವಾಮೀಜಿ ಹೊಸಳ್ಳಿಮಠ ಅಭಿಪ್ರಾಯಪಟ್ಟರು.
    ನಗರದ ಮುಳಗುಂದ ನಾಕಾ ಬಳಿ ಇರುವ ಅಡವೀಂದ್ರ ಮಠದಲ್ಲಿ ಗುರುವಾರ ನಡೆದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಸಮ್ಮುಖ ವಹಿಸಿ ಮಾತನಾಡಿದ ಅವರು, ಆಧುನಿಕ ದಿನಗಳಲ್ಲಿ ನಾವೆಲ್ಲ ಒತ್ತಡದ ಮಧ್ಯ ಜೀವನ ನಡೆಸುತ್ತಿದ್ದೇವೆ. ಒತ್ತಡದಿಂದಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಈ ಒತ್ತಡ ನಿಗ್ರಹಕ್ಕೆ ಯೋಗ ಅವಶ್ಯ ಎಂದರು.
    ಯೋಗದ ಬಗ್ಗೆ ಉಪನ್ಯಾಸ ನೀಡಿದ ಯೋಗಾಚಾರ್ಯ ಪ್ರಾ. ಎಸ್​. ಎಸ್​. ಹಿರೇಮಠ ಮಾತನಾಡಿ, ಯೋಗಾಸನಗಳು ಮನುಷ್ಯ ಜೀವನದ ಒಂದು ಅಂಗವಾಗಬೇಕು. ಪ್ರತಿಯೊಬ್ಬರೂ ದೈಹಿಕ ಸಂಪತ್ತನ್ನು ಹೆಚ್ಚಿಸಿಕೊಳ್ಳಲು ನಿತ್ಯ ಯೋಗಾಭ್ಯಾಸ ರೂಢೀಸಿಕೊಂಡು ಉತ್ತಮ ಆರೋಗ್ಯ ಕಾಯ್ದುಕೊಳ್ಳಬೇಕು ಎಂದರು.
    ರಾಣಿ ಚೆನ್ನಮ್ಮ ಸೌಹಾರ್ದ ಸಹಕಾರಿ ಪತ್ತಿನ ಸಂದ ಅಧ್ಯ ಡಾ.ಎಸ್​. ಕೆ. ಮ್ಯಾಗೇರಿ ಮಾತನಾಡಿ, ಜನತೆಯಲ್ಲಿ ವೈಚಾರಿಕ ಮತ್ತು ಧಾಮಿರ್ಕ ಪ್ರಜ್ಞೆ, ಧರ್ಮ ಜಾಗೃತಿ ಮೂಡಿಸುವಲ್ಲಿ ಮಠ ಮಂದಿರಗಳ ಪಾತ್ರ ಹಿರಿದಾಗಿದೆ ಎಂದರು.
    ಬಿ.ಬಿ.ಪಾಟೀಲ, ಎಂ. ಎಂ. ಜೋಗಿನ, ಶೇಖರಪ್ಪ ಹನಮನಾಳ, ಸಿದ್ದಣ್ಣ ಜವಳಿ, ಯು. ಆರ್​. ಭೂಸನೂರಮಠ, ಜಿ.ಎಂ.ಯಾನಮಶೆಟ್ಟಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts