More

    ಗದಗ: ಯಶಸ್ವಿನಿ ಯೋಜನೆ: ಸಾರ್ವಜನಿಕರ ಗಮನಕ್ಕೆ

    ಗದಗ: 2023-24 ನೇ ಸಾಲಿಗೆ ಸಹಕಾರ ಇಲಾಖೆಯಿಂದ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯನ್ನು ಜಾರಿಗೊಳಿಸಿರುತ್ತದೆ. ಸದರಿ ಯೋಜನೆಯಲ್ಲಿ ಸದಸ್ಯರಾಗಿ ನೊಂದಾಯಿಸಬಹುದಾಗಿದೆ. ಸಹಕಾರ ಸಂಘ/ ಸೌಹಾರ್ದ ಸಹಕಾರಿಗಳು/ ಬ್ಯಾಂಕುಗಳು ಮತ್ತು ಗ್ರಾಮೀಣ ಸ್ವ ಸಹಾಯ ಗುಂಪುಗಳಲಿರುವ ಸದಸ್ಯರು ಕನಿಷ್ಟ 3 ತಿಂಗಳುಗಳ ಮುಂಚೆ ಸದಸ್ಯತ್ವವನ್ನು ಹೊಂದಿರಬೇಕು. ಅಂತಹ ಸದಸ್ಯರು ಯಶಸ್ವಿನಿ ಯೋಜನೆಯಡಿಯಲ್ಲಿ ಹೊಸದಾಗಿ ನೊಂದಾಯಿಸಿ ಸದರಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳುವುದು. ಫಲಾನುಭವಿ ಕುಟುಂಬಕ್ಕೆ ವಾರ್ಷಿಕ ವೈದ್ಯಕೀಯ ಚಿಕಿತ್ಸಾ ವೆಚ್ಚದ ಗರಿಷ್ಟ ಮಿತಿ ರೂ.5.00 ಲಕ್ಷ ನಿಗದಿಪಡಿಸಿರುತ್ತಾರೆ.

    ಹೆಚ್ಚಿನ ಮಾಹಿತಿಗಾಗಿ ಸಹಕಾರ ಸಂಘಗಳ ಉಪನಿಬಂಧಕರ ಕಚೇರಿ, ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ -125  ಹಾಗೂ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಎ.ಪಿ.ಎಂ.ಸಿ. ಯಾರ್ಡ, ಎಸ್.ಬಿ.ಐ ಮುಖ್ಯ ಶಾಖೆ ಎದುರಿಗೆ , ಗದಗ ದೂರವಾಣಿ ಸಂಖ್ಯೆ 08372-238598  ಹಾಗೂ ತಾಲೂಖಾ ಸಹಕಾರ ಅಭಿವೃದ್ಧಿ ಅಧಿಕಾರಿ ನರಗುಂದ-8660099227, ಶಿರಹಟ್ಟಿ- 9739247088, ರೋಣ- 9538198110, ಮುಂಡರಗಿ 8088386791, ಗದಗ- 9945187724 ಇವರನ್ನು ಸಂಪರ್ಕಿಸಬಹುದಾಗಿದೆ.  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts