More

    ವಿದ್ಯಾಥಿರ್ಗಳ ಸರ್ವತ್ತೋಮುಖ ಅಭಿವೃದ್ಧಿಗೆ ಕ್ರೀಡೆ ಬಹುಮುಖ್ಯ ಪಾತ್ರ ವಹಿಸುತ್ತದೆ: ಡಿವೈಎಸ್​ಪಿ ಟಿ.ಆರ್​. ಪಾಟೀಲ್​

    ವಿಜಯವಾಣಿ ಸುದ್ದಿಜಾಲ ಗದಗ
    ವಿದ್ಯಾಥಿರ್ಗಳ ಸರ್ವತ್ತೋಮುಖ ಅಭಿವೃದ್ಧಿಗೆ ಪಠ್ಯದ ಜತೆ ಕ್ರೀಡೆಗೂ ಹೆಚ್ಚಿನ ಗಮನ ನೀಡಬೇಕು. ಶೈಣಿಕ ವಿಷಯಗಳ ಧ್ಯಯನದಿಂದ ವಿಷಯವಾರು ಜ್ಞಾನ ಹೆಚ್ಚಾದರೆ, ಕ್ರೀಡೆಯಿಂದ ಉತ್ತಮ ದೈಹಿಕ ಆರೋಗ್ಯ ವೃದ್ದಿಸುತ್ತದೆ ಎಮದು ಡಿವೈಎಸ್​ಪಿ ಟಿ.ಆರ್​. ಪಾಟೀಲ ಹೇಳಿದರು.
    ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಶನಿವಾರ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದ ಕ್ರೀಡಾ ಹಾಗೂ ಸಾಂಸತಿಕತಿ ಚಟುವಟಿಕೆಗಳ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಉತ್ತಮ ಆರೋಗ್ಯದಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ದಿಸುತ್ತದೆ. ಅದಕ್ಕಾಗಿ ವಿದ್ಯಾಥಿರ್ಗಳು ಅಭ್ಯಾಸದ ಜತೆಯಲ್ಲಿ ಕ್ರೀಡೆಗೂ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಟಿ. ಆರ್​. ಪಾಟೀಲ್​ ಹೇಳಿದರು.
    ಸಂಸ್ಥೆಯ ಆಡಳಿತ ಮಂಡಳಿ ಸದಸ್ಯ ಡಾ. ಪವಾಡ ಶೆಟ್ಟರರವರು ಕಾರ್ಯಕ್ರಮದ ಅದ್ಯತೆ ವಹಿಸಿ ಮಾತನಾಡಿ, ವಿದ್ಯಾಥಿರ್ಗಳು ನಿರಂತರ ಅಭ್ಯಾಸದ ಜತೆಗೆ ನೀಟ್​ ಮತ್ತು ಸಿಇಟಿ ಸ್ಪರ್ಧಾತ್ಮಕ ಪರೀೆಗಳಲ್ಲಿ ಭಾಗವಹಿಸಿ ಯಶಸ್ಸು ಸಾಧಿಸುವತ್ತ ಗಮನಹರಿಸಬೇಕು ಎಂದರು.
    ಕಳೆದ ಸಾಲಿನ ದ್ವೀತಿಯ ಪಿಯುಸಿ ಪರೀೆಯಲ್ಲಿ ಅತೀಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾಥಿರ್ಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
    ಐ.ಸಿ. ಮುನವಳ್ಳಿ, ವಿ. ಎಸ್​. ಕೂಗು, ಎಸ್​. ಎ.ನಿಲುಗಲ್​, ತೋಂಟೆಶ್​ ಮಾನ್ವಿ, ಪ್ರೊ. ಪಿ. ಜಿ. ಪಾಟೀಲ್​, ಎಸ್​. ಬಿ. ಹಾವೇರಿ, ಎಸ. ಎನ್​. ಗೊರವರ, ಪ್ರೊ. ಜಿ. ಬಿ. ಶಿರ್ಕೆ ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts