More

    ಜನಸ್ನೇಹಿಯಾಗುವತ್ತ ಗದಗ ಪೊಲೀಸ್.

    ಶಿವಾನಂದ ಹಿರೇಮಠ, ಗದಗ
    ದಕ್ಷ ಪೊಲೀಸ್​ ವ್ಯವಸ್ಥೆಯತ್ತ ಜಿಲ್ಲೆ ಬದಲಾಗುತ್ತಿದೆ. ಸಿಸಿ ಅಳವಡಿಕೆ, ಪೊಲೀಸ್​ ಠಾಣೆಗಳ ಮೇಲೆ ನಿಗಾ, ಅನಗತ್ಯ ಕಾಯುವಿಕೆಯಿಂದ ದೂರುದಾರರನ್ನು ಮುಕ್ತರನ್ನಾಗಿಸುವುದು ಮತ್ತು ನೋಂದವರಿಗೆ ತುರ್ತು ಸೇವೆ ಸಲ್ಲಿಸಲು ಜಿಲ್ಲೆಯ ಪೊಲೀಸ್​ ಠಾಣೆಗಳ ಮೇಲ್ವಿಚಾರಣೆಗೆ ಪ್ರತ್ಯೇಕ ಡೆಸ್ಕ್​ ತೆರೆಯಲಾಗಿದ್ದು, ನೋಂದ ಕುಟುಂಬಸ್ಥರು ಕೇವಲ 30 ನಿಮಿಷದಲ್ಲಿ ದೂರು ಸಲ್ಲಿಸಿ ಠಾಣೆಯಿಂದ ಹೊರಬರಬಹುದು. ಠಾಣೆಗಳಲ್ಲಿ ದೂರು ದಾರರನ್ನು ಅನಗತ್ಯ ಕಾಯಿಸಿದರೇ ಸಂಬಂಧಿಸಿದ ಪೊಲೀಸ್​ ಅಧಿಕಾರಿಗೆ ಅಮಾನತು ಕಟ್ಟಿಟ್ಟ ಬುತ್ತಿ.
    ಹೌದು, ಇಂತದ್ದೊಂದು ವ್ಯವಸ್ಥೆ ಸದ್ದಿಲ್ಲದೇ ಜಿಲ್ಲೆಯ ಪೊಲೀಸ್​ ಠಾಣೆಗಳಲ್ಲಿ ಜಾರಿಯಾಗಿದೆ. ಪೊಲೀಸ್​ ಸಿಬ್ಬಂದಿ ಮತ್ತು ಠಾಣೆಗಳ ಮೇಲೆ ಸಾಮಾನ್ಯ ನಾಗರಿಕರಲ್ಲಿ ಇರುವ ಅಸಮಧಾನ, ಆರೋಪಗಳನ್ನು ದೂರವಾಗಿಸಿ ಪೊಲಿಸ್​ ವ್ಯವಸ್ಥೆ ಮೇಲೆ ನಂಬಿಕೆ ಬರಲು ಜಿಲ್ಲಾ ಪೊಲಿಸ್​ ವರಿಷ್ಠಾಧಿಕಾರಿ ಬಿ.ಎಸ್​. ನೇಮಗೌಡ ಅವರು ಜಿಲ್ಲೆಯ ಎಲ್ಲ ಠಾಣೆಗಳಲ್ಲಿ ಈ ವ್ಯವಸ್ಥೆ ಕಡ್ಡಾಯ ಜಾರಿ ಮಾಡಿದ್ದಾರೆ. ನೋಂದ ವ್ಯಕ್ತಿ ಅಥವಾ ಕುಟುಂಬ ದೂರು ಸಲ್ಲಿಸಲು ಠಾಣೆಗೆ ತೆರಳಿದ ಸಂದರ್ಭದಲ್ಲಿ ಕೇವಲ ಮೂವತ್ತು ನಿಮಿಷದಲ್ಲಿ ಅವರ ಅಜಿರ್ ಸ್ವೀಕರಿಸಿ ಎೈಆರ್​ ದಾಖಲಿಸಬೇಕು. ಈ ವ್ಯವಸ್ಥೆ ಕಡ್ಡಾಯ ಪಾಲನೆ ಆಗುತ್ತಿರುವುದನ್ನು ಗಮನಿಸಲು ವಿಶೇಷ ಸಿಬ್ಬಂದಿ ನೇಮಿಸಲಾಗಿದೆ. ದೂರುದಾರಂತೆ ನಟಿಸಿ ಪೊಲೀಸ್​ ಠಾಣೆಗೆ ತೆರಳುವ ಈ ಸಿಬ್ಬಂದಿಯು ಅಲ್ಲಿನ ವ್ಯವಸ್ಥೆಯನ್ನು ನೇರವಾಗಿ ಜಿಲ್ಲಾ ಪೊಲೀಸ್​ ಕಚೇರಿಗೆ ವರದಿ ಮಾಡುತ್ತದೆ. ಜಿಲ್ಲಾ ಪೊಲೀಸ್​ ಕಚೇರಿಯಲ್ಲೂ ಪ್ರತ್ಯೇಕ ಡೆಸ್ಕ್​ ತೆರೆಯಲಾಗಿದ್ದು, ದೂರುದಾರಂತೆ ಸಿಬ್ಬಂದಿಯೇ ಪೊಲೀಸ್​ ಠಾಣೆಗೆ ಕರೆ ಮಾಡಿ ದೂರುದಾರರ ಜತೆ ಪೊಲೀಸ್​ ಸಿಬ್ಬಂದಿ ವರ್ತನೆಯನ್ನು ಗಮನಿಸಲಾಗುತ್ತಿದೆ. ಈ ರೀತಿಯ ವ್ಯವಸ್ಥೆಯಿಂದ ಜಿಲ್ಲಾ ಕಚೇರಿಗೆ ಬರುವ ನೋಂದ ದೂರು ದಾರರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ.

    ಸೈಬರ್​ ವ್ಯವಸ್ಥೆ: ಇತ್ತೀಚೆಗೆ ಸೈಬರ್​ ಕೆಂ ಅಧಿಕಗೊಳ್ಳುತ್ತಿದ್ದು, ದೂರು ಸಲ್ಲಿಕೆಗೆ ಜಿಲ್ಲಾ ಪೊಲೀಸ್​ ಕಚೇರಿಯನ್ನೇ ಸಂಪಕಿರ್ಸಬೇಕಿತ್ತು. ಇದರಿಂದ ದೂರು ಸಲ್ಲಿಕೆ ಆಗದೇ ಸೈಬರ್​ ಜಾಲಕ್ಕೆ ಒಳಗಾಗಿ ಹಣ ಕಳೆದುಕೊಂಡ ನೋಂದವರು ಪೊಲೀಸ್​ ಕಚೇರಿಯತ್ತ ಧಾವಿಸದೇ ಹಿಂದೆಟು ಹಾಕುತ್ತಿದ್ದರು. ಈಗ ಈ ಪ್ರಕ್ರಿಯೇ ಸರಳಗೊಂಡಿದ್ದು, ಸಮೀಪದ ಠಾಣೆಗೆ ತೆರಳಿ ಸೈಬರ್​ ವಂಚನೆ ಕುರಿತಾದ ದೂರು ಸಲ್ಲಿಸಬಹುದಾಗಿದೆ. ಇದರಿಂದ ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದು ಕಳೆದೆರೆಡೂ ತಿಂಗಳಲ್ಲಿ 30 ಪ್ರಕರಣ ದಾಖಲಾಗಿವೆ ಮತ್ತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

    ಸಂಚಾರ ವ್ಯವಸ್ಥೆಗೆ ಥರ್ಡ್​ ಐ:
    ಗದಗನಲ್ಲಿ ಕಾನೂನು ವ್ಯವಸ್ಥೆ ಸುವ್ಯವಸ್ಥಿತವಾಗಿ ಜಾರಿಗೊಳಿಸುವ ಉದ್ದೇಶದಿಂದ ಥರ್ಡ ಐ ಯೋಜನೆ ಜಾರಿಗೊಂಡಿದೆ. ಸೆಗ್​ವೇ ಇಲೆಕ್ಟ್ರಿಕ್​ ಬೈಕ್​ಗಳನ್ನು ಪೊಲೀಸ್​ ಇಲಾಖೆ ಬಳಸುತ್ತಿದ್ದು, ಕೆಂ ನಿಯಂತ್ರಣಕ್ಕೆ ಸಂಚಾರಿ ನಿಯಮಗಳ ಕಟ್ಟುನಿಟ್ಟಿನ ಪಾಲನೆಗಾಗಿ ಈ ಬೈಕ್​ಗಳು ಸಹಕಾರಿಯಾಗಿ ಆಗಲಿವೆ. ಜಿಲ್ಲಾ ಪೊಲೀಸ್​ ಕಚೇರಿಯಲ್ಲಿ ಕಮಾಂಡ್​ ಸೆಂಟರ್​, ಟ್ರಾಫಿಕ್​ ಮ್ಯಾನೇಜ್ಮೆಂಟ್​ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಸುಗಮ ಸಂಚಾರ ವ್ಯವಸ್ಥೆಗೆ ನಗರದ ಪ್ರಮುಖ 44 ಸ್ಥಳಗಳಲ್ಲಿ ಬುಲೆಟ್​ ಕ್ಯಾಮರಾ ಅಳವಡಿಸಲಾಗಿದೆ. 44 ಕಿಮೀ ಆಪ್ಟಿಕಲ್​ ೈಬರ್​ ಅಳವಡಿಸಿದ್ದು 15 ಎಎಂಪಿಆರ್​ ಸಿಸಿ ಟಿವಿ ಜೋಡಿಸಲಾಗಿದೆ. ಕೆಮೆರಾಗಳು 360 ಡಿಗ್ರಿ ಕಾರ್ಯ ನಿರ್ವಹಿಸುತ್ತವೆ. ನಗರದ ಒಟ್ಟಾರೆ 45 ಸ್ಥಳಗಳನ್ನು ಪೊಲೀಸ್​ ಸಿಬ್ಬಂದಿ ಜಿಲ್ಲಾ ಕಚೇರಿಯಿಂದಲೇ ನಿಗಾ ವಹಿಸಬಹುದು. ಒಟ್ಟಾರೆ 3 ಕೊಟಿ ವೆಚ್ಚದ ಯೋಜನೆ ಇದಾಗಿದೆ.

    ಪ್ರಯಾಣಿಕರಿಗೆ ನೆರಳು:
    ಕಳೆದ ಬೇಸಿಗೆಯಲ್ಲಿ ಉಷ್ಣಾಂಶ ಅಧಿಕವಿದ್ದ ಹಿನ್ನೆಲೆ ಟ್ರಾಫಿಕ್​ ಸಿಗ್ನಲ್​ಗಳಲ್ಲಿ ಬೈಕ್​ ಸವಾರರಿಗೆ ಅಧಿಕ ಉಷ್ಣಾಂಶದಿಂದ ಇರಿಸು ಮುರಿಸು ಉಂಟಾಗುತ್ತಿತ್ತು. ಹಾಗಾಗಿ ನಗರಸಭೆ ಸಹಭಾಗಿತ್ವದಲ್ಲಿ ನಗರದ ವಿವಿಧ ಟ್ರಾಫಿಕ್​ ಸಿಗ್ನಲ್​ ಸ್ಥಳಗಳಲ್ಲಿ ಹಸಿರು ಮೇಲ್ಚಾವಣಿ ನಿಮಿರ್ಸುವ ಮೂಲಕ ನೆರಳನ್ನು ಒದಗಿಸಲಾಗಿತ್ತು. ಇದರಿಂದ ನಾಗರಿಕ ವಲಯದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

    ಇಲಾಖೆ ಆವರಣ ಉನ್ನತಿಕರಣ:
    ಜಿಲ್ಲಾ ಪೊಲೀಸ್​ ಕಚೇರಿ ಉದ್ಘಾಟನೆಗೊಂಡು ದಶಕವೇ ಕಳೆದರೂ ಕಚೇರಿ ಆವರಣದಲ್ಲಿ ಸೂಕ್ತ ಪಾಕಿರ್ ವ್ಯವಸ್ಥೆ ಮತ್ತು ಜಿಲ್ಲಾ ಕಚೇರಿ ಸಂಪಕಿರ್ಸಲು ಉನ್ನತಿಕರಿಸಿದ ರಸ್ತೆ ಕೊರತೆ ಕಾಡುತ್ತಿತ್ತು. ಬಿ.ಎಸ್​. ನೇಮಗೌಡ ಅವರು ಎಸ್​ಪಿ ಯಾಗಿ ಅಧಿಕಾರ ವಹಿಸಿಕೊಂತರ ಆವರಣದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲಾಗಿದೆ. ಹೊಸ ಬಸ್​ ನಿಲ್ದಾಣದಿಂದ ಜಿಲ್ಲಾ ಕಚೇರಿ ವರೆಗೂ ಉತ್ತಮ ರಸ್ತೆ ನಿರ್ಮಾಣಗೊಂಡಿದೆ.

    ಕೋಟ್​:
    ಜನರಿಗೆ ಪೊಲೀಸ್​ ಇಲಾಖೆ ಮೇಲೆ ವಿಶ್ವಾಸ ದ್ವಿಗುಣಗೊಳ್ಳಬೇಕು ಮತ್ತು ಪೊಲೀಸ್​ ಇಲಾಖೆ ನಾಗರಿಕರ ಜತೆ ಪಾರದರ್ಶಕವಾಗಿ ವ್ಯವಹರಿಸುವ ನಿಟ್ಟಿನಲ್ಲಿ ಪ್ರತಿ ವಾರ್ಡ್​ನಲ್ಲೂ ಕುಂದು ಕೊರತೆಗಳ ಬಗ್ಗೆ ಪೊಲೀಸ್​ ಇಲಾಖೆಯಿಂದ ಸಭೆ ನಡೆಸಲು ಚಿಂತಿಸಲಾಗಿದೆ. ಪೊಲಿಸ್​ ಇಲಾಖೆಯಲ್ಲಿ ಆಡಳಿತ ವ್ಯವಸ್ಥೆ ಬಲಪಡಿಸಲು ಹೊಸ ವಿಚಾರಗಳಿದ್ದು, ಒಮದೊಂದಾಗಿ ಕಾರ್ಯಗತಗೊಳಿಸಲಾಗುವುದು.
    – ಬಿ.ಎಸ್​. ನೇಮಗೌಡ, ಎಸ್​ಪಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts