More

    ಮಾತೃ ವಿಯೋಗ ನಡುವೆಯೂ ಕರ್ತವ್ಯಕ್ಕೆ ಹಾಜರಾದ ಪೊಲೀಸ್​ ಪೇದೆ

    ಗದಗ:
    ತಾಯಿ ಕಳೆದುಕೊಂಡು ದುಃಖದ ನಡೆಯುವೂ ಚುನಾವಣಾ ಕರ್ತವ್ಯಕ್ಕೆ ಹಾಜರಾಗಿ ಬೆಟಗೇರಿ ಬಡವಾಣೆ ಠಾಣೆಯ ಪೊಲಿಸ್​ ಪೇದೆ ಅಶೋಕ್​ ಗದಗ ಕರ್ತವ್ಯ ಪ್ರಜ್ಞೆ ಮೆರೆದಿದ್ದಾರೆ. ಪೇದೆ ಅಶೋಕ್​ ಕರ್ತವ್ಯಕ್ಕೆ ಮೆಚ್ಚಿ ಗದಗ ಜಿಲ್ಲಾ ಪೊಲೀಸ್​ ಸನ್ಮಾನಿಸಿ ಗೌರವಿಸಿದೆ.
    ಆಶೋಕ್​ ಅವರ ತಾಯಿ ಶಂಕ್ರವ್ವ ಗದಗ (78) ಕಳೆದ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಅನಾರೋಗ್ಯದ ಹಿನ್ನೆಲೆ ಸೋಮವಾರ ನಿಧನ ಹೊಂದಿದ್ದರು. ತಾಯಿಯ ಅಂತ್ಯ ಸಂಸ್ಕಾರ ಮುಗಿಸಿ ಗದಗನ ಜೆಟಿ ಕಾಲೇಜ್​ ನಲ್ಲಿ ನಡೆದ ಮಸ್ಟರಿಂಗ್​ ಕರ್ತವ್ಯಕ್ಕೆ ಅಶೋಕ್​ ಮಂಗಳವಾರ ಹಾಜರಾದರು. ಅಶೋಕ್​ ಮೂಲತಃ ಗದಗ ತಾಲೂಕಿನ ಹಾತಲಗೇರಿ ಗ್ರಾಮದವರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts