More

    ಜಿಲ್ಲಾಧಿಕಾರಿ ಅನುಮೋದನೆಯೇ ಇಲ್ಲದೇ ವಾಷಿರ್ಕ 1 ಕೋಟಿಗೂ ಅಧಿಕ ಮೊತ್ತಕ್ಕೆ ಟೆಂಡರ್​?

    ಶಿವಾನಂದ ಹಿರೇಮಠ ಗದಗ
    ಜಿಲ್ಲಾಧಿಕಾರಿಗಳ ಅನುಮೋದನೆ ಇಲ್ಲದೇ 1 ಕೋಟಿಗೂ ಅಧಿಕ ಮೊತ್ತಕ್ಕೆ ಬೀದಿ ದೀಪಗಳ ನಿರ್ವಹಣೆಗೆ ಟೆಂಡರ್​ ನೀಡಿದ್ದಲ್ಲದೇ, ಒಂದು ಮೊತ್ತಕ್ಕೆ ಮಂಜೂರಾತಿ ಹಾಗೂ ಮತ್ತೊಂದು ಮತ್ತೊಕ್ಕೆ ಕಾರ್ಯಾನುದೇಶ ನೀಡಿರುವ ಗದಗ ನಗರಸಭೆಯಲ್ಲಿ ಬೀದಿ ದೀಪಗಳ ನಿರ್ವಹಣೆಯಲ್ಲಿ ಭ್ರಷ್ಟಾಚಾರದ ಸುಳಿದಾಡುತ್ತಿದೆ. ಗುತ್ತಿಗೆದಾರನಿಗೆ ಕಾರ್ಯಾನುದೇಶ ನೀಡುವ ಆತುರದಲ್ಲಿ ನಗರಸಭೆ ಕೆಲ ಪ್ರಮಾದಗಳನ್ನು ಮಾಡಿದ್ದು, ಭ್ರಷ್ಟಾಚಾರಕ್ಕೆ ಮಹತ್ವದ ಸಾಕ್ಷ$್ಯಗಳು ಒಂದೊಂದೇ ಹೊರ ಬರುತ್ತಿವೆ. ಆಡಳಿತ ಯಂತ್ರ ಕುಸಿಯುತ್ತಿದೆ. ಸಾರ್ವಜನಿಕರ ತೆರಿಗೆ ಹಣದಿಂದ ಸಂಗ್ರಹವಾದ ನಗರಸಭೆ ಸಾಮಾನ್ಯ ನಿಧಿಯಿಂದ ಪ್ರತಿ ತಿಂಗಳು ಲಾಂತರ ರೂ. ರ್ಖಚಾಗುತ್ತಿದ್ದು, ಸಾಮಾನ್ಯ ನಿಧಿ ನೀರಿನಂತೆ ಪೋಲಾಗುತ್ತಿದೆ.

    ನಗರಸಭೆಯ ಪ್ರಮಾದಗಳೇನು?

    • ಬೀದಿ ದೀಪಗಳ ನಿರ್ವಹಣೆ ಗುತ್ತಿಗೆಯನ್ನು ವಾಷಿರ್ಕ 98 ಲಕ್ಷ ರೂ. ಗೆ ನಗರಾಭಿವೃದ್ಧಿ ಕೋಶ ಕಾರ್ಯಪಾಲಕ ಅಭಿಯಂತರರಿಂದ ತಾಂತ್ರಿಕ ಮಂಜೂರಾತಿ ಪಡೆದು 1.37 ಕೋಟಿ ರೂ. ಮೊತ್ತಕ್ಕೆ ನಗರಸಭೆ ಪೌರಾಯುಕ್ತರು ಡಿ.1, 2023 ಕಾರ್ಯಾನುದೇಶ ನೀಡಿದ್ದು, ಅನುಮಾನಕ್ಕೆ ಎಡಮಾಡಿದೆ. ಕೋಟಿಗೂ ಅಧಿಕ ಮೊತ್ತದ ಟೆಂಡರ್​ಗೆ ಅನುಮತಿ ನೀಡುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ಮಾತ್ರ ಇರುತ್ತದೆ. ಆದರೆ, ಕಾರ್ಯಾನುದೇಶವು ಜಿಲ್ಲಾಧಿಕಾರಿಗಳಿಂದ ಪಡೆದ ಅನುಮೋದನೆಯ ಖಂಡಿಕೆಯನ್ನೇ ಒಳಗೊಂಡಿಲ್ಲ. ಜಿಲ್ಲಾಧಿಕಾರಿಗಳಿಂದ ಆಡಳಿತಾತ್ಮಕ ಅನುಮೋದನೆಯನ್ನೇ ಪಡೆಯದೇ ಗುತ್ತಿಗೆದಾರ ವೈ.ಟಿ. ತಿಪ್ಪಾಪುರ ಅವರಿಗೆ ಗದಗ ನಗರಸಭೆ ಬೀದಿ ದೀಪಗಳ ನಿರ್ವಹಣೆಗೆ ಕಾರ್ಯಾನುದೇಶ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
    • ಕಳೆದ ಅ. 25, 2023ರಂದು ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ನಿರ್ವಹಣೆ ಗುತ್ತಿಗೆ ಮೊತ್ತದ ನಿಗದಿಪಡಿಸುವ ಬಗ್ಗೆ ಚರ್ಚೆಯೇ ಜರುಗಲಿಲ್ಲ. ಪ್ರಸಕ್ತಸಾಲಿನಲ್ಲಿ ಗುತ್ತಿಗೆ ಮೊತ್ತವನ್ನು ಹೆಚ್ಚಿಸುವ, ನಿಗದಿ ಪಡಿಸುವ ಬಗ್ಗೆ ಚರ್ಚೆ ನಡೆಯದೇ ಅನುಮೋದನೆ ಗೊಂಡಿದ್ದು ಅನುಮಾನಕ್ಕೆ ಕಾರಣವಾಗಿದೆ. ನವೆಂಬರ್​ ಅಂತ್ಯದ ವರೆಗೆ ಇದ್ದ ಬೀದಿ ದೀಪಗಳ ಸಂಖ್ಯೆಯೂ ಡಿಸೆಂಬರ್​ 1 ರಂದು ಏಕಾಏಕಿ ಅಧಿಕಗೊಂಡ ಬಗ್ಗೆ ಮತ್ತು ಈ ಅಧಿಕಗೊಂಡ ಬೀದಿ ದೀಪಗಳ ಹೆಚ್ಚುವರಿ ನಿರ್ವಹಣಾ ವೆಚ್ಚ ನಿಗದಿ ಪಡಿಸುವ ಬಗ್ಗೆ ಚರ್ಚೆ ನಡೆದಿಲ್ಲ ಎಂಬುದು ಹಲವರು ಸದಸ್ಯರು ಆರೋಪಿಸುತ್ತಿದ್ದಾರೆ.
    • ಬೀದಿ ದೀಪಗಳ ನಿರ್ವಹಣೆಯನ್ನು 11,42, 521 ಲಕ್ಷಕ್ಕೆ ಟೆಂಡರ್​ ನೀಡಲಾಗಿದ್ದು, ಟೆಂಡರ್​ ಪಡೆದ ಗುತ್ತಿಗೆದಾರ ಈ ಮೊತ್ತವನ್ನು ಟೆಂಡರ್​ ನಲ್ಲಿ ನಮೂದಿಸಿಲ್ಲ ಎಂಬ ಆರೋಪವು ಇದೆ. ಹೀಗಿದ್ದಲ್ಲಿ, ಪೌರಾಯುಕ್ತರು ಈ ಮೊತ್ತಕ್ಕೆ ಕಾರ್ಯಾನುದೇಶ ಮಾಡಿದ್ದಾರು ಏತಕ್ಕೆ? ಎಂಬ ಆರೋಪ ನಗರಸಭೆ ಆವರಣದಲ್ಲಿ ಕೇಳಿ ಬರುತ್ತಿದೆ.
    • ಡಿಸೆಂಬರ್​ 1, 2023 ರಂದು ನೀಡಿರುವ ಕಾರ್ಯಾನುದೇಶ ಪ್ರತಿಯಲ್ಲಿ ಆಥಿರ್ಕ ಬಿಡ್​ ತೆರೆದ ದಿನಾಂಕ ನಮೂದಿಸಿಲ್ಲ.

    ಬಾಕ್ಸ್​:
    ಬೀದಿ ದೀಪ ನಿರ್ವಹಣೆಗೆ ಟೆಂಡರ್​ ನಲ್ಲಿ ಭಾಗವಹಿಸಿದ ಹಲವು ಗುತ್ತಿಗೆದಾರರು ನಮೂದಿಸಿದ ತುಲನಾತ್ಮಕ ದರಗಳ ಪಟ್ಟಿಯ ಬಗ್ಗೆಯೂ ಅನುಮಾನ ಮೂಡುತ್ತಿದೆ. ಯಾರು ಕಡಿಮೆ ದರ ಯಾರು ಹೆಚ್ಚು ದರ ನಮೂದಿಸಿದ್ದಾರೆ ಎಂಬದು ಗೌಪ್ಯವಾಗಿದೆ. ಈ ದಾಖಲೆಯನ್ನು ಜಿಲ್ಲಾಧಿಕಾರಿಗಳು ಕುಲಂಕೂಷವಾಗಿ ಪರಿಶೀಲಿಸಬೇಕು ಎಂಬ ಆಗ್ರಹವು ಸಾರ್ವಜನಿಕ ವಲಯದಲ್ಲಿ ಮತ್ತು ನಗರಸಭೆ ಆವರಣದಲ್ಲಿ ಕೇಳಿ ಬರುತ್ತಿದೆ. ನಕಲಿ ಠರಾವು ಪ್ರಕರಣ, ಯುಜಿಡಿ ನಿರ್ವಹಣೆ, ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಲೋಪವೆಸಗಿ ನಗರಸಭೆ ಆಡಳಿತಕ್ಕೆ ಬೇಸತ್ತ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್​ ಈ ಹಿಂದೆ ಖುದ್ದಾಗಿ ನಗರಸಭೆಗೆ ಆಗಮಿಸಿ ಸಭೆ ನಡೆಸಿದ್ದರು. ಇಂತಹ ಸನ್ನಿವೇಶ ಈಗ ಮತ್ತೊಮ್ಮೆ ಪುನರಪಿ ಆಗುವ ಸಾಧ್ಯತೆಗಳಿವೆ.

    ಬಾಕ್ಸ್​: (ಕಾರ್ಯಾನುದೇಶದಲ್ಲಿ ಇದ್ದಂತೆ)
    ನಗರದಲ್ಲಿ ಬೀದಿ ದೀಪಗಳ ಸಂಖ್ಯೆ – ನ. 2023ರ ಅಂತ್ಯಕ್ಕೆ ಒಟ್ಟು – ಡಿ.1, 2023 ಆರಂಭಕ್ಕೆ – ಪ್ರತಿ ತಿಂಗಳು ಒಟ್ಟು ನಿರ್ವಹಣೆ ಮೊತ್ತ(ಲಕ್ಷ ರೂ)
    ಟ್ಯೂಬ್​ಲೈಟ್​ 20/40 ವ್ಯಾಟ್​ – 7812 – 7312 – 156549.92
    ಎಚ್​ಪಿಎಸ್​ಎಲ್​ವಿ 70 ವ್ಯಾಟ್​ ವರೆಗೆ – 7 – 7 – 509.88
    ಎಚ್​ಪಿಎಸ್​ಎಲ್​ವಿ 150 ವ್ಯಾಟ್​ ವರೆಗೆ – 20 – 20 – 1863.20
    ಎಚ್​ಪಿಎಸ್​ಎಲ್​ವಿ 250 ವ್ಯಾಟ್​ ವರೆಗೆ – 1343 – 1393 – 155194.13
    ಎಂಎಚ್​ಎಲ್​ 250 ವ್ಯಾಟ್​ ವರೆಗೆ – 2804 – 2804 – 378764.32
    ಎಂಎಚ್​ಎಲ್​ 400 ವ್ಯಾಟ್​ ಮತ್ತು ಎಲ್​ಇಡಿ – 894 – 1026 – 163616.22
    ಎಲ್​ಇಡಿ ಸ್ಟ್ರೀಟ್​ ಲೈಟ್​ 65/72 ವ್ಯಾಟ್​ – 722 – 2746 – 286023.36

    ಕೋಟ್​:
    ಈ ವಿಷಯ ಗಮನಕ್ಕೆ ಬಂದಿದೆ. ದಾಖಲೆ ನೀಡಲು ನಗರಸಭೆಗೆ ತಿಳಿಸಿದ್ದೇನೆ. ದಾಖಲೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.
    – ವೈಶಾಲಿ. ಎಂ.ಎಲ್​ ಜಿಲ್ಲಾಧಿಕಾರಿ

    ಕೋಟ್​:
    ಬೀದಿ ದೀಪ ನಿರ್ವಹಣೆ ಸಂಬಂಧ ಜರುಗಿದ ಟೆಂಡರ್​ ಪ್ರಕ್ರಿಯೆಯನ್ನು ಪರಿಶೀಲಿಸಲಾಗುವುದು.
    – ಮಾರುತಿ ಬ್ಯಾಕೋಡ್​, ಯೋಜನಾ ನಿರ್ದೇಶಕ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts