More

    ಗದಗ: ಅವಧಿ ಮುಗಿದರೂ ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ ಇಲ್ಲ, ಅಧಿಕಾರ ವಿಕೇಂದ್ರೀಕರಣಕ್ಕೆ ತೋರದ ಒಲವು

    ಶಿವಾನಂದ ಹಿರೇಮಠ ಗದಗ
    ಅಧಿಕಾರ ವಿಕೇಂದ್ರಿಕರಣ, ಅಭಿವೃದ್ಧಿ ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ನಗರಸಭೆಯಲ್ಲಿ ಇರುವ ಮಹತ್ವದ ಸ್ಥಾಯಿ ಸಮಿತಿಗೆ ಅಧ್ಯಕ್ಷರ ನೇಮಕಕ್ಕೆ ಮೀನಮೇಷ ತೋರಲಾಗುತ್ತಿದೆ. ಅಧಿಕಾರ ಹಂಚಿಕೆ ಸೂತ್ರದಂತೆ ಜು.6 ರಂದೇ ಸದಸ್ಯ ರಾಘವೇಂದ್ರ ಯಳವತ್ತಿ ಅವಧಿ ಮುಕ್ತಾಯಗೊಂಡಿದ್ದು, ಕಳೆದ 20 ದಿನಗಳಿಂದ ಸ್ಥಾಯಿ ಸಮಿತಿ ಅಧ್ಯಕ್ಷರ ಖುಚಿರ್ ಖಾಲಿ ಇದೆ. 30 ಲಕ್ಷಕ್ಕಿಂತ ಕಡಿಮೆ ಮೊತ್ತದ ಕಾಮಗಾರಿ ಕಡತ ಪರಿಶೀಲನೆ, ನಗರದ ಸ್ವಚ್ಚತೆ ಮತ್ತು ನಗರಸಭೆಗೆ ಬರುವ ತೆರಿಗೆಯನ್ನು ವಸೂಲಿ ಮಾಡಲು ಸ್ಥಾಯಿ ಸಮಿತಿ ಅಧ್ಯಕ್ಷರು ಹೊಣೆಗಾರರಾಗಿದ್ದು, ನಗರಸಭೆಯಲ್ಲಿ ಇಂತಹ ಜವಾಬ್ದಾರಿಗಳ್ನು ನಿರ್ವಹಿಸಲು ನಾಯಕನಿಲ್ಲದಂತಾಗಿದೆ.
    ಅಧ್ಯಕ್ಷರ ಆಯ್ಕೆಗೆ ನಾಯಕರು ಆಸಕ್ತಿ ವಹಿಸಿದಂತೆ ಕಾಣುತ್ತಿಲ್ಲ. ಅದಲ್ಲದೇ, ನಿಯಮದಂತೆ ನಗರಸಭೆಯಲ್ಲಿ 30 ಲಕ್ಷ ರೂ.ಗಿಂತ ಕಡಿಮೆ ಮೊತ್ತದ ಯಾವುದೇ ಕಾಮಗಾರಿಯ ಕಡತವನ್ನು ಸ್ಥಾಯಿ ಸಮಿತಿ ಮೇಲ್ವಿಚಾರಣೆ ನಡೆಸುತ್ತದೆ. ಸಮಿತಿ ಅಧ್ಯಕ್ಷರ ಸಹಿಯೊಂದಿಗೆ ಅನುಮತಿ ನೀಡಲಾಗುತ್ತದೆ. ಅನುಮೋದನೆ, ಕಾಮಗಾರಿಗೆ ಬಿಲ್​ ಪಾವತಿ ಸೇರಿದಂತೆ ಪ್ರತಿಯೊಂದು ಪ್ರಕ್ರಿಯೆಗೆ ಸ್ಥಾಯಿ ಸಮಿತಿಯೇ ಅನುಮತಿ ನೀಡಬೇಕು. ಕಳೆದ 20 ದಿನಗಳಿಂದ ಸ್ಥಾಯಿ ಸಮಿತಿ ಅಧ್ಯಕ್ಷರ ನೇಮಕ ಮಾಡದೇ ಇರುವ ಹಿನ್ನೆಲೆ ನಗರದ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ತಡೆ ನೀಡಲಾಗಿದೆ. ನಗರದ ಸ್ವಚ್ಚತೆಯ ಜವಾಬ್ದಾರಿಯು ಸ್ಥಾಯಿ ಸಮಿತಿಗೆ ಇದ್ದು ಮಳೆಗಾಲದಲ್ಲಿ ಸ್ವಚ್ಚತೆಯ ಮೇಲ್ವಿಚಾರಣೆ ಮಾಡಲು ಅಧ್ಯಕ್ಷರೇ ಇಲ್ಲದಂತಾಗಿ, ನಗರ ಅಂದ ಕೆಡುತ್ತಿದೆ. ಹೀಗಾಗಿ ಅಧಿಕಾರ ವಿಕೇಂದ್ರಿಕರಣ ತತ್ವ ನಗರಸಭೆಯಲ್ಲಿ ಪಾಲನೆ ಆಗುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

    ಬಿಜೆಪಿ ಪಕ್ಷದ ಅಧಿಕಾರ ಹಂಚಿಕೆ ಸೂತ್ರದಂತೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಒಂದು ವರ್ಷದ ಅವಧಿಗೆ ನಿಗದಿಗೊಳಿಸಲಾಗಿತ್ತು. ಜು. 6ರಂದು ರಾವೇಂದ್ರ ಯಳವತ್ತಿ ಅವರಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಆಕಾಂಗಳ ದಂಡೇ ಸೃಷ್ಟಿಯಾಗಿದೆ. ಅಧ್ಯಕ್ಷಗಿರಿ ಪೈಪೋಟಿಯಲ್ಲಿ ಹಲವರಿದ್ದಾರೆ. 28ನೇ ವಾಡಿರ್ನ ಬಿಜೆಪಿ ನಗರಸಭೆ ಸದಸ್ಯ ಅನಿಲ ಅಬ್ಬಿಗೇರಿ, 13ನೇ ವಾರ್ಡ್​ ಸದಸ್ಯ ಮುತ್ತು ಮುಶಿಗೇರಿ, 24ನೇ ವಾರ್ಡ್​ ಸದಸ್ಯ ನಾಗರಾಜ ತಳವಾರ ಮತ್ತು ಪ್ರಕಾಂಶ ಅಂಗಡಿ, ವಿನಾಯಕ ಮಾನ್ವಿ ಹೆಸರುಗಳು ಮುಖ್ಯವಾಗಿ ಕೇಳಿಬರುತ್ತಿದೆ.

    ===
    ಸ್ಥಾಯಿ ಸಮಿತಿ ಅಷ್ಟೇ ಅಲ್ಲದೇ ನಗರಸಭೆ ಉಪಾಧ್ಯಕ್ಷೆ ಸ್ಥಾನ, ನಗರಸಭೆ ಹೈಸ್ಕೂಲ್​ ಕಮಿಟಿ ಅಧ್ಯಕ್ಷರ ಅಧಿಕಾರಾವಧಿಯೂ ಮುಕ್ತಾಯವಾಗಿದೆ. ನಗರಸಭೆ ಉಪಾಧ್ಯಕ್ಷೆ ಸ್ಥಾನಕ್ಕೆ ವಿಜಯಲಕ್ಷಿ ದಿಂಡೂರ, ವಿದ್ಯಾವತಿ ಗಡಗಿ, ಕಾಕಿ, ಶ್ವೇತಾ ದಂಡಿನ ಹೆಸರು ಮುಂಚೂಣಿಯಲ್ಲಿದೆ. ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಮೀಸಲನ್ನು ಹೊಂದಿದೆ.

    ಕೋಟ್​:
    ಪಕ್ಷ ನೀಡಿರುವ ಹಲವು ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ. ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ನಿರ್ವಹಿಸಲು ಶಕ್ತನಾಗಿದ್ದೇನೆ. ಅತವಾ ಪಕ್ಷ ಯಾರಿಗೆ ಜವಾಬ್ದಾರಿ ನೀಡಿದರೂ ಪೂರ್ಣ ಪ್ರಮಾಣದಲ್ಲಿ ಎಲ್ಲ ಸದಸ್ಯರು ಸಹಕಾರ ನೀಡುತ್ತಾರೆ.
    – ಅನಿಲ ಅಬ್ಬಿಗೇರಿ, ನಗರಸಭೆ ಸದಸ್ಯ.

    ಕೋಟ್​:
    ಮೊದಲ ಬಾರಿ ನಗರಸಭೆ ಸದಸ್ಯನಾಗಿ ಆಯ್ಕೆ ಆಗಿದ್ದೇನೆ. ಪಕ್ಷ ನನ್ನ ಮೇಲೆ ವಿಶ್ವಾಸ ಇಟ್ಟು ಅಧ್ಯಕ್ಷ ಸ್ಥಾನ ನೀಡಿದರೆ ಕರ್ತವ್ಯ ನಿಭಾಯಿಸಬಲ್ಲೆ.
    – ನಾಗರಾಜ ತಳವಾರ, ನಗರಸಭೆ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts