More

    ಗದಗ ನಗರಸಭೆ ಎಇಇ ಹುದ್ದಾರ ವಿಚಾರಣೆ ತೀವ್ರ

    ಗದಗ: ಪೌರ ಕಾರ್ವಿುಕರ ಸಮುಚ್ಛಯ ನಿರ್ವಣಕ್ಕಾಗಿ ಮಣ್ಣು ಹೊರಸಾಗಿಸುವ ಕಾಮಗಾರಿಯ ಬಿಲ್ ಪಾವತಿಸುವ ಕುರಿತು ಲಂಚಕ್ಕೆ ಬೇಡಿಕೆಯಿಟ್ಟು ಬುಧವಾರ ಎಸಿಬಿ ಬಲೆಗೆ ಬಿದ್ದಿರುವ ನಗರಸಭೆ ಸಹಾಯಕ ಇಂಜಿನಿಯರ್ ವರ್ಧಮಾನ ಹುದ್ದಾರ ಅವರ ಬಂಧನಕ್ಕೆ ಸಂಬಂಧಿಸಿದಂತೆ ಗುರುವಾರ ಮತ್ತಷ್ಟು ವಿಚಾರಣೆ ನಡೆಯಿತು.
    ನಗರದ ಎಸಿಬಿ ಪೊಲೀಸ್ ಕಚೇರಿಯಲ್ಲಿ ನಗರಸಭೆ ಪೌರಾಯುಕ್ತರು ಸೇರಿ ವಿವಿಧ ಅಧಿಕಾರಿಗಳ ಮತ್ತು ಸಿಬ್ಬಂದಿಯ ವಿಚಾರಣೆ ನಡೆಸಲಾಯಿತು ಎಂದು ತಿಳಿದುಬಂದಿದೆ. ನಗರಸಭೆ ಪೌರಾಯುಕ್ತ ರಮೇಶ ಜಾಧವ ಮತ್ತು ಜಿಲ್ಲಾ ನಗರಾಭಿವೃದ್ಧಿ ಕೋಶದ ಇಂಜಿನಿಯರ್ ಅನಿಲಕುಮಾರ ಮುದ್ದಾ ಕೂಡಾ ಭ್ರಷ್ಟಾಚಾರದಲ್ಲಿ ಭಾಗಿದ್ದಾರೆ ಎಂಬ ಆರೋಪವಿದೆ. ಬಿಲ್ ಪಾವತಿಸಲು ಪೌರಾಯುಕ್ತ ರಮೇಶ ಜಾಧವ 1.50 ಲಕ್ಷ ರೂ. ಲಂಚ ಕೇಳಿದ್ದರು ಎಂದು ವಿಚಾರಣೆಯಿಂದ ತಿಳಿದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.
    ಏನಿದು ಪ್ರಕರಣ?: ಬೆಟಗೇರಿ ಸರ್ವೆ ನಂ. 613/1+2+3, 6 ಎಕರೆಯಲ್ಲಿದ್ದ ಮಣ್ಣನ್ನು ಹೊರಸಾಗಿಸುವ ಕಾಮಗಾರಿಯ ಗುತ್ತಿಗೆಯನ್ನು ಟೆಂಡರ್ ಮೂಲಕ ನೀಡಲಾಗಿದೆ. ನಗರಸಭೆಯಿಂದ 12,96.296 ರೂ. ಮತ್ತು ತೆರಿಗೆ ಮಂಜೂರಾಗಬೇಕಾಗಿತ್ತು. ಈ ಮೊತ್ತವನ್ನು ಮಂಜೂರಾತಿ ಮಾಡಲು ಆರೋಪಿತ ಅಧಿಕಾರಿ ನಗರಸಭೆ ಎಇಇ ವರ್ಧಮಾನ ಎಸ್. ಹುದ್ದಾರ ಅವರು ಬಿಲ್ ಮೊತ್ತದ ಶೇ. 3ರಷ್ಟು ಅಂದರೆ 40,000ರೂ. ಲಂಚದ ಮೊತ್ತಕ್ಕೆ ಬೇಡಿಕೆ ಇಟ್ಟಿದ್ದರು. ಈಗಾಗಲೇ ಗುತ್ತಿಗೆದಾರರಿಂದ 15,000 ರೂ. ಲಂಚದ ಹಣ ಪಡೆದುಕೊಂಡಿದ್ದಾರೆ. ಜು. 5ರಂದು ನಗರಾಭಿವೃದ್ಧಿ ಕೋಶದ ಕಾರ್ಯಪಾಲಕ ಇಂಜಿನಿಯರ್ ಅನೀಲ ಮುದ್ದಾ ಅವರು 10,000 ರೂ. ಪಡೆದುಕೊಂಡಿದ್ದಾರೆ. ಕಾಮಗಾರಿ ಮೊತ್ತದ ಪೈಕಿ 10,18,996 ರೂ. ಚೆಕ್ ಕೊಡುವ ಪೂರ್ವದಲ್ಲಿ ನಗರಸಭೆ ಪೌರಾಯುಕ್ತ ರಮೇಶ ಪಾಂಡುರಂಗ ಜಾಧವ ಅವರು 1.50 ಲಕ್ಷ ರೂ. ಲಂಚ ನೀಡಬೇಕೆಂದು ಕೇಳಿದ್ದರು. ಈ ಹಿನ್ನೆಲೆಯಲ್ಲಿ ಬುಧವಾರ ಎಇಇ ವರ್ಧಮಾನ ಹುದ್ದಾರ 25 ಸಾವಿರ ರೂ. ಲಂಚದ ಹಣ ಸ್ವೀಕರಿಸುವಾಗ ದಾಳಿ ಮಾಡಲಾಗಿದೆ. ಸ್ಥಳೀಯ ಸಿವಿಲ್ ಗುತ್ತಿಗೆದಾರ ಅಬ್ದುಲ್​ಸಲಾಂ ಮನಿಯಾರ್ ನೀಡಿದ ದೂರಿನ ಹಿನ್ನೆಲೆಯಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಗರಸಭೆ ಎಇಇ ವರ್ಧಮಾನ ಹುದ್ದಾರ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಅಗತ್ಯ ಮಾಹಿತಿ ಕಲೆ ಹಾಕಲಾಗುತ್ತಿದೆ. ಪ್ರಕರಣದಲ್ಲಿರುವವರ ವಿಚಾರಣೆಯನ್ನೂ ನಡೆಸಲಾಗುತ್ತಿದೆ.
    | ಆರ್.ಎಫ್. ದೇಸಾಯಿ ಇನ್ಸ್​ಪೆಕ್ಟರ್, ಎಸಿಬಿ, ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts