More

    ಸಾಂಸತಿಕ ಹವ್ಯಾಸವುಳ್ಳವರು ಉತ್ತಮ ನಾಗರಿಕರಾಗಿ ಬೆಳೆಯುತ್ತಾರೆ: ಡಾ. ಸಿದ್ಧರಾಮ ಶ್ರೀಗಳು

    ವಿಜಯವಾಣಿ ಸುದ್ದಿಜಾಲ ಗದಗ
    ಸಂಗೀತ, ನಾಟ್ಯ, ಕಲೆ, ಇಂಥ ಸಾಂಸತಿಕ ಹವ್ಯಾಸವುಳ್ಳವರು ಅತ್ಯುತ್ತಮ ನಾಗರಿಕರಾಗಿ ಬೆಳೆಯುತ್ತಾರೆ. ಮಾನವೀಯ ಪ್ರೀತಿ ಸಹಜವಾಗಿ ಅವರಲ್ಲಿ ಆವರಿಸಿಕೊಳ್ಳುತ್ತದೆ. ಇಂತಹ ಕಾರ್ಯವನ್ನು ರಾಜೇರ್ಶವರಿ ಕಲಾ ಕುಟೀರ 23 ವರ್ಷಗಳಿಂದ ನಿರಂತರ ಕಲಾ ಸೇವೆ ಮಾಡುತ್ತಾ ಬಂದಿದೆ ಎಂದು ತೋಂಟದ ಸಿದ್ಧರಾಮ ಶ್ರೀಗಳು ಹೇಳಿದರು.
    ರಾಜೇಶ್ವರಿ ಕಲಾ ಕುಟೀರದಲ್ಲಿ ಮಂಗಳವಾರ ನಡೆದ 23ನೇ ವಾಷಿರ್ಕೋತ್ಸವ ಮತ್ತು ಸಂಗೀತ ನೃತ್ಯೋಲ್ಲಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಕ್ಕಳನ್ನು ಮೊಬೈಲ್​ನಿಂದ ದೂರವಿರಿಸಿ ಓದು, ಬರಹ, ಸಂಗೀತ ನೃತ್ಯ ಚಿತ್ರಕಲೆ ಮುಂತಾದ ಒಳ್ಳೆಯ ಹವ್ಯಾಸಗಳನ್ನು ಬೆಳೆಸಲು ಪಾಲಕರು ವ್ಯವಸ್ಥೆ ಕಲ್ಪಿಸಬೇಕು ಎಂದು ಹೇಳಿದರು.
    ಜಿ. ಬಿ. ಪಾಟೀಲ ಮಾತನಾಡಿ, ತೋಂಟದ ಸಿದ್ಧಲಿಂಗ ಶ್ರೀಗಳ ಆಶೀರ್ವಾದದಿಂದ ರಾಜೇಶ್ವರಿ ಕಲಾ ಕುಟೀರ ಸಾಧನೆ ಮಾಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಮಕ್ಕಳಿಂದ ನೃತ್ಯ ಕಲಾಪ್ರದರ್ಶನ ಪ್ರಸ್ತುಪಡಿಸಲಾಯಿತು
    ಅಂದಾನಪ್ಪ ವಿಭೂತಿ, ಗಜಾನನ ವೇರ್ಣೇಕರ, ಎಸ್​. ಎಸ್​. ಪಾಟೀಲ, ಎಸ್​. ಎಸ್​. ಕಳಸಾಪುರ ಶೆಟ್ಟರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts