More

    ಜಿಲ್ಲಾ ಕಸಾಪ ಗದಗದಿಂದ ವಿಶ್ವ ಮಾನವ ದಿನಾಚರಣೆ

    ವಿಜಯವಾಣಿ ಸುದ್ದಿಜಾಲ ಗದಗ
    ಇಪ್ಪತ್ತನೆಯ ಶತಮಾನ ಕಂಡ ಧೈತ್ಯ ಪ್ರತಿಭೆ, ವರಕವಿ ಬೇಂದ್ರೆಯವರಿಂದ ಯುಗದ ಕವಿ ಜಗದ ಕವಿ ಎನಿಸಿಕೊಂಡವರು ಕುವೆಂಪು ಅವರು ಎಂದು ನರೇಗಲ್ಲ ಅನ್ನದಾನೀಶ್ವರ ಮಹಾವಿದ್ಯಾಲಯದ ಉಪನ್ಯಾಸಕ ನಾಗರಾಜ ಹೊನ್ನೂರ ಹೇಳಿದರು.
    ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಏರ್ಪಡಿಸಿದ ರಾಷ್ಟ್ರಕವಿ ಕುವೆಂಪು ಜನ್ಮದಿನೋತ್ಸವ ಹಾಗೂ ವಿಶ್ವಮಾನವ ದಿನಾಚರಣೆ ಅಂಗವಾಗಿ “ಕುವೆಂಪು ಸಾಹಿತ್ಯ ಮತ್ತು ವಿಶ್ವಮಾನವ ಪ್ರಜ್ಞೆ’ ಕುರಿತು ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಕುವೆಂಪು ವಿಶ್ವಮಾನವ ಸಂದೇಶ ನೀಡಿದವರು. ಕನ್ನಡದ ಎರಡನೇ ರಾಷ್ಟ್ರಕವಿ. ಜ್ಞಾನಪೀಠ ಪ್ರಶಸ್ತಿಯನ್ನೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನೂ ಮೊದಲ ಬಾರಿಗೆ ಕನ್ನಡಕ್ಕೆ ತಂದುಕೊಟ್ಟವರು ಕುವೆಂಪು ಅವರು ಎಂದರು.
    ಅಧ್ಯತೆ ವಹಿಸಿ ಮಾತನಾಡಿದ ವಿವೇಕಾನಂದಗೌಡ ಪಾಟೀಲ, ಕುವೆಂಪು ನಿಸರ್ಗದ ಮಡಿಲಿನಲ್ಲಿ ಬೆಳೆದ ಕವಿ. ಹಾಗಾಗಿ ಅವರಲ್ಲಿ ಸೌಂದರ್ಯ ಪ್ರಜ್ಞೆಯ ಸಾಹಿತ್ಯ ಹೆಚ್ಚಿನ ಪ್ರಮಾಣದಲ್ಲಿ ಹೊರಹೊಮ್ಮಬೇಕಾಗಿತ್ತು. ಆದರೆ ಅದಕ್ಕೆ ವ್ಯತಿರಿಕ್ತವಾಗಿ ಅಧ್ಯಯನಶೀಲರಾಗಿ ಜಗತ್ತನ್ನು ನೋಡುವ ದೃಷ್ಠಿಕೋನವನ್ನು ಬದಲಾಯಿಸಿದರು. ಮೂಢನಂಬಿಕೆಗಳನ್ನು ದೇವರ ಹೆಸರಿನಲ್ಲಿ ನಡೆಯುವ ಶೋಷಣೆಯನ್ನು ವಿರೋಧಿಸಿ ತಮ್ಮ ಬರಹದಲ್ಲಿ ತೋರ್ಪಡಿಸಿದರು. ಶುಧ್ದವಾದ ಆಧ್ಯಾತ್ಮದ ಬದುಕನ್ನು ಬದುಕಿದವರು. ಸತ್ಯ ಪ್ರತಿಪಾದಕಾರಗಿದ್ದರು ಎಂದರು
    ಶ್ರೀನಿವಾಸ ಕುಲಕಣಿರ್, ಪ್ರೊ. ಎಸ್​. ವಿ. ಕುಂದಗೋಳ, ಶಿವಾನಂದ ಗಿಡ್ನಂದಿ, ಕಿಶೋರಬಾಬು ನಾಗರಕಟ್ಟಿ, ಡಾ. ದತ್ತಪ್ರಸನ್ನ ಪಾಟೀಲ, ಶೇಕಣ್ಣ ಕಳಸಾಪುರಶೆಟ್ರ, ಪ್ರೊ. ಕೆ. ಎಚ್​. ಬೇಲೂರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts