More

    ಇನ್ನರ್​ವ್ಹೀಲ್​ ಕ್ಲಬ್​ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ವಿವಿಧ ವಸ್ತುಗಳ ವಿತರಣೆ

    ವಿಜಯವಾಣಿ ಸುದ್ದಿಜಾಲ ಗದಗ
    ಸರ್ಕಾರಿ ಶಾಲೆಗಳ ಮಕ್ಕಳು ಪ್ರತಿಭಾನ್ವಿತರಾಗಿದ್ದಾರೆ. ಸಮುದಾಯವು ಈ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಇನ್ನರ್​ವ್ಹೀಲ್​ ಕ್ಲಬ್​ ಅಧ್ಯೆ ರಜನಿ ಪಾಟೀಲ ಹೇಳಿದರು.
    ಗದಗ ರಾಜೀವಗಾಂಧಿ ಸರ್ಕಾರಿ ಶಾಲೆಯಲ್ಲಿ ಗುರುವಾರ ಕ್ಲಬ್​ ವತಿಯಿಂದ ಮಕ್ಕಳಿಗೆ ಟೈ, ಬೆಲ್ಟ್​, ಸ್ಕೂಲ್​ಬ್ಯಾಗ, ತಟ್ಟೆ, ಲೋಟ, ಕ್ರೀಡಾ ಸಾಮಗ್ರಿ, ಪುಸ್ತಕ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
    ಇನ್ನರ್​ವ್ಹೀಲ್​ ಕ್ಲಬ್​ ಈ ಶಾಲೆಯನ್ನು ದತ್ತು ಪಡೆದು ವಿವಿಧ ಶೈಣಿಕ ಚಟುವಟಿಕೆಗಳನ್ನು ಶಾಲೆಯಲ್ಲಿ ಹಮ್ಮಿಕೊಳ್ಳುತ್ತಿದೆ. ಶಾಲಾ ಸರ್ವಾಂಗೀಣ ಅಭಿವೃದ್ಧಿಗೆ ಕ್ಲಬ್​ ವತಿಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದರು.
    ಪ್ರೇಮಾ ಗುಳಿಗೌಡರ ಮಾತನಾಡಿ, ಸಮಾಜ ಸೇವೆಯಲ್ಲಿ ಸರ್ವರು ಪಾಲ್ಗೊಳ್ಳುವ ಉನ್ನತ ಧ್ಯೇಯದೊಂದಿಗೆ ಇನ್ನರ್​ವ್ಹೀಲ್​ ಕ್ಲಬ್​ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅವಶ್ಯತೆಗಳನ್ನು ಪೂರೈಸಿ ಮಕ್ಕಳ ಶೈಣಿಕ ಅಭಿವೃದ್ಧಿಗೆ ಹಲವು ಕೊಡುಗೆಗಳನ್ನು ನೀಡುತ್ತ ಬಂದಿದೆ ಎಂದರು.
    ನೀಲಾಂಬಿಕಾ ಉಗಲಾಟದ, ಎಚ್​. ಎಸ್​. ಾರೂಖಿ, ಕೆ. ಎಸ್​. ಬೇಲೆರಿ, ಎಂ. ಎನ್​. ಹೊಸಳ್ಳಿ, ಎಸ್​. ವೈ. ಭಜಂತ್ರಿ, ರೂಪಾ ರಾಜೋಳಿ, ಎಂ. ವಿ. ರಾಮಣ್ಣವರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts