More

    ಕಸ ವಿಲೇವಾರಿ ವಾಹನಗಳಿಗೆ ಚಾಲನೆ

    ಗದಗ: ಗದಗ ಬೆಟಗೇರಿ ನಗರಸಭೆಯ ವಿವಿಧ ಯೋಜನೆಗಳಡಿ ಖರೀದಿಸಲಾದ 14 ಕಸ ವಿಲೇವಾರಿ ಹೊಸ ವಾಹನಗಳಿಗೆ ಹಸಿರು ನಿಶಾನೆ ತೋರುವ ಮೂಲಕ ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಕೆ.ಪಾಟೀಲ  ಅವರು ಶನಿವಾರದಂದು ಚಾಲನೆ ನೀಡಿದರು.  

    ನಂತರ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ ಅವರು 1.82 ಕೋಟಿ ರೂ. ವೆಚ್ಚದಲ್ಲಿ ವಿವಿಧ ಹಂತದ 14 ವಾಹನಗಳನ್ನು ಖರೀದಿಸಿ ನಗರದ ಸ್ವಚ್ಛತೆಗಾಗಿ ನಗರಸಭೆಯಿಂದ ನೀಡಲಾಗಿದೆ. 6 ಮಿನಿ ಟಿಪ್ಪರ್, 3 ಟ್ರ್ಯಾಕ್ಟರ್, 2 ಡಿ ಶಿಲ್ಟಿಂಗ್ ಮಶಿನ್ ವಾಹನಗಳು, ಸ್ಕಿಡ್ ಸ್ಟೇರ್ ಲೋಡರ್ ವಾಹನ, ಫ್ರಂಟ್ ಆಂಡ್ ಬ್ಯಾಕ್ ಲೋಡರ್ ವಾಹನ, ಮಿನಿ ಎಕ್ಸಾಲೇಟರ್ ತಲಾ ಒಂದು ವಾಹನಗಳಗೆ  ಇಂದು  ಚಾಲನೆ ನೀಡಲಾಗಿದೆ. ಈ ಬಂಡವಾಳ ತೊಡಗಿಸುವಿಕೆ ಮೂಲಕ ಗದಗ ನಗರ ಸ್ವಚ್ಛತೆಗೆ ನಗರಸಭೆ ಮುಂದಾಗಿದೆ. ಈ ಕಸ ವಿಲೇವಾರಿ ವಾಹನಗಳ ಸದ್ಭಳಕೆಯಾಗುವಂತೆ ಅಧಿಕಾರಿಗಳು ನಿಗಾ ವಹಿಸಬೇಕು. ನಗರದ ಸುಂದರತೆಗೆ ಒತ್ತು ನೀಡಬೆಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀಮತಿ ಉಷಾ ದಾಸರ, ಉಪಾಧ್ಯಕ್ಷೆ ಸುನಂದಾ ಬಾಕಳೆ, ವಿರೋಧ ಪಕ್ಷದ ನಾಯಕ ಎಲ್.ಡಿ. ಚಂದಾವರಿ, ಬಿ.ಬಿ.ಅಸೂಟಿ, ಕೃಷ್ಣಾ ಪರಾಪುರ , ಪೌರಾಯುಕ್ತ ಗಂಗಪ್ಪ ಎಂ, ಸೇರಿದಂತೆ ನಗರಸಭೆ ಸರ್ವ ಸದಸ್ಯರು ಅಧಿಕಾರಿಗಳು ಉಪಸ್ಥಿತರಿದ್ದರು.  

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts