More

    ಸರ್ವಜ್ಞ ತ್ರಿಪದಿಗಳು ಕನ್ನಡದ ಉಪನಿಷತ್ತುಗಳು: ಟಿ. ವಿ. ಮಾಗಳದ

    ವಿಜಯವಾಣಿ ಸುದ್ದಿಜಾಲ ಗದಗ
    ನಗರದ ಪ್ರೊಬಸ್​ ಕ್ಲಬ್​ನ 6ನೇ ಮಾಸಿಕ ಸಮಾರಂಭ ಸೋಮವಾರ ಜರುಗಿತು. ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯ ಟಿ.ವಿ. ಮಾಗಳದ ಅವರು ತ್ರಿಪದಿ ಕವಿ ಸರ್ವಜ್ಞ ಕುರಿತು ಮಾತನಾಡಿದರು.
    ವಚನ ಸಾಹಿತ್ಯವೆಲ್ಲ ಜಾಗತಿಕವಾಗಿದೆ. ಸರ್ವಜ್ಞ ಯಾರ ಹಂಗಿಲ್ಲದೆ, ರಾಜಾಶ್ರಯವಿಲ್ಲದೆ, ಲೋಕದರ್ಶನ ಮಾಡಿಸಿದ ಕನ್ನಡದ ಕವಿ. ಮನುಷ್ಯನ ಅವ್ಯವಹಾರಗಳನ್ನು ಕವಿ ವಚನದಲ್ಲಿ ವಿಸ್ತಾರವಾಗಿ ವಿವರಿಸಿದ್ದಾರೆ. ಗುರು, ಭಕ್ತ, ಶಿವಲಿಂಗ, ದಾನ, ಜ್ಞಾನ, ವಿಜ್ಞಾನ, ಮಹೇಶ್ವರ, ಕಾಲಜ್ಞಾನ, ದೈವ, ವಿಧಿ ಮಹಿಮೆ, ಯೋಗ, ರಾಜನೀತಿ, ನಿಂದೆ, ಸಹವಾಸ, ಅನ್ನ ಹೀಗೆ ಪ್ರಾಪಂಚಿಕ ಲೋಕಜ್ಞಾನವನ್ನೆಲ್ಲ ಪಡೆದು ಬರೆದ ಸರ್ವಜ್ಞ ತ್ರಿಪದಿಗಳು ಸರ್ವಕಾಲಕ್ಕೂ ಒಪು$್ಪವ ಕನ್ನಡದ ಉಪನಿಷತ್ತುಗಳು. ಅಲ್ಲದೆ ಸರ್ವಜ್ಞ ಕವಿ ಅಭಿಮಾನದ ನಮ್ಮ ಕನ್ನಡದ ಅಸ್ಮಿತೆಯ ಕುಲದೀಪ ಎಂದು ಅನೇಕ ವಚನಗಳಿಂದ ಸಾಭಿತಾಗುತ್ತದೆ ಎಂದರು.
    ಬಸವರಾಜ ಹಿರೇಮಠ, ಚನ್ನಬಸಪ್ಪ ವಂದಾಲ, ಗಿರೀಜಾ ನಾಲತ್ವಾಡಮಠ, ವಿ. ಎಚ್​. ಪಾಟೀಲ, ಆರ್​.ಡಿ. ಕಪ್ಪಲಿ, ಬಿ. ಎಚ್​. ಗರಡಿಮನಿ ಹಲವರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts