More

    ಈವರೆಗೂ ಬೆಳೆವಿಮೆ ಬಂದಿಲ್ಲ: ಶಿವಲಿಂಗಪ್ಪ ಬೋಪಳಾಪುರ

    ರಾಜ್ಯದಲ್ಲಿ ಬರ ಆವರಿಸಿದ್ದರೂ ಈವರೆಗೂ ಬೆಳೆವಿಮೆ ಬಂದಿಲ್ಲ. ಸರಕಾರದ ನಿಯಮಾವಳಿ ಅನ್ವಯ ರೈತರು ಪ್ರೀಮಿಯಂ ಪಾವತಿಸಿದ್ದಾರೆ. ಆದರೂ ವಿಮೆ ಹಣ ಬಿಡುಗಡೆಯಾಗಿಲ್ಲ ಎಂದು ಕರ್ನಾಟಕ ರೈತ ಸೇನೆ ರೋಣ ತಾಲೂಕು ಉಪಾಧ್ಯಕ್ಷ ಶಿವಲಿಂಗಪ್ಪ ಬೋಪಳಾಪುರ ಹೇಳಿದರು.

    ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಬೆಳೆವಿಮೆ ಯೋಜನೆಯನ್ನು ಖಾಸಗಿ ಸಂಸ್ಥೆಗೆ ವಹಿಸಿರುವುದೇ ಇದಕ್ಕೆ ಕಾರಣ. ತಕ್ಷಣ ಈ ಯೋಜನೆಯನ್ನು ಸರಕಾರಿ ‌ವಿಮಾ ಕಂಪನಿಗೆ ವಹಿಸಬೇಕು. ಬೆಳೆ ಹಾನಿಯನ್ನು ಸರಕಾರವೇ ಪರಿಶೀಲನೆ ನಡೆಸಿ ತಕ್ಷಣವೇ ವಿಮೆ ಹಣ ರೈತರಿಗೆ ಜಮೆ ಆಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ರಾಜ್ಯದ ಸಂಸದರು ಬರ ಪರಿಹಾರಕ್ಕೆ ಕೇಂದ್ರ ಸರಕಾರದ ಮೇಲೆ ಒತ್ತಡ ತರಲಿಲ್ಲ. ಮಹದಾಯಿ ಯೋಜನೆ ಜಾರಿಗೂ ಕ್ರಮ ಕೈಗೊಂಡಿಲ್ಲ. ಈ ವಿಷಯದಲ್ಲಿ ರಾಜ್ಯ ಸರಕಾರವೂ ದಿಟ್ಟ ನಿಲುವು ತೆಗೆದುಕೊಂಡಿಲ್ಲ. ಯೋಜನೆ ಜಾರಿಗೆ ಒತ್ತಾಯಿಸಿ ಇದೇ ಡಿ. 7 ರಂದು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನ ಸಂದರ್ಭದಲ್ಲಿ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.

    ಸುದ್ದಿಗೋಷ್ಠಿಯಲ್ಲಿ ರೈತ ಸಂಘಟನೆಗಳ ಮುಖಂಡರಾದ ರಮೇಶ ಚಲವಾದಿ, ಮಾರುತಿ ತಳವಾರ, ಶೆಟ್ಟೆಪ್ಪ ಆಲೂರ, ಕಲ್ಮೇಶ ತಳವಾರ, ಕಲ್ಲಪ್ಪ ಹಲ್ಲಳ್ಳಿ ಇತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts