More

    ರೈತರಿಗೆ ವಿಮಾ ಸೌಲಭ್ಯಗಳ ಅರಿವು ಇರಲಿ

    ಚಳ್ಳಕೆರೆ: ಕೃಷಿ ಚಟುವಟಿಕೆಗಳಲ್ಲಿ ಆರ್ಥಿಕವಾಗಿ ಬಲವರ್ಧನೆ ಆಗಲು ರೈತರಲ್ಲಿ ವಿಮಾ ಸೌಲಭ್ಯಗಳ ಜಾಗೃತಿ ಇರಬೇಕು ಎಂದು ಕೃಷಿ ಇಲಾಖೆ ವಿಮಾ ಕಂಪನಿ ಅಧಿಕಾರಿ ಜಯಂತ್ ಹೇಳಿದರು.

    ತಾಲೂಕಿನ ಟಿಎನ್ ಕೋಟೆ ಗ್ರಾಮ ಪಂಚಾಯಿತಿ ಸೇರಿ ವಿವಿಧ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಬುಧವಾರ ಕೃಷಿ ಇಲಾಖೆ ಹಮ್ಮಿಕೊಂಡಿದ್ದ

    ಬೆಳೆವಿಮೆ ಜಾಗೃತಿ ಪ್ರಚಾರದಲ್ಲಿ ಮಾತನಾಡಿ, ಅತಿವೃಷ್ಟಿ ಮತ್ತು ಅನಾವೃಷ್ಟಿ ಮಳೆಯ ವೈಪರೀತ್ಯ ಸೇರಿ ಪ್ರಾಕೃತಿಕ ವಿಕೋಪಗಳ ನಡುವೆ ರೈತರು ಕೃಷಿ ಬೆಳೆಗಳನ್ನು ಪೋಷಣೆ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ ಎಂದರು.

    ಇಂತಹ ಪರಿಸ್ಥಿತಿಯಲ್ಲಿ ಸಾಲ ಮಾಡಿಕೊಂಡು ಕೃಷಿ ಚಟುವಟಿಕೆ ಮಾಡುವ ರೈತರಿಗೆ ಲಾಭವಾಗುತ್ತಿಲ್ಲ.

    ಸಕಾಲಕ್ಕೆ ಸರಿಯಾಗಿ ಬೆಳೆಗಳಿಗೆ ವಿಮಾ ಕಂತು ಕಟ್ಟುವ ಮೂಲಕ ಆರ್ಥಿಕ ಭದ್ರತೆ ಮಾಡಿಕೊಳ್ಳಬೇಕು. ಇದರಿಂದ ಕೃಷಿ ಆಧಾರಿತ ಕುಟುಂಬಗಳ ಆರ್ಥಿಕ ಸುಧಾರಣೆ ಸಾಧ್ಯ ಎಂದು ತಿಳಿಸಿದರು.

    ಕಳೆದ ವರ್ಷ ರೈತರ ಜಮೀನಿನ ಪಹಣಿ ಮತ್ತು ಬ್ಯಾಂಕ್ ಖಾತೆ ಪಡೆದು ವಿಮೆ ಸೌಲಭ್ಯಕ್ಕೆ ಕಂತು ಕಟ್ಟಲಾಗುತ್ತಿತು. ಪ್ರಸಕ್ತ ವರ್ಷದಲ್ಲಿ ರೈತರ ಎಫ್‌ಐಡಿ ದಾಖಲೆ ಬೇಕಾಗಿದೆ.

    ಮುಂಜಾಗ್ರತವಾಗಿ ವಿಮಾ ಸೌಲಭ್ಯ ಪಡೆದುಕೊಳ್ಳಲು ರೈತರು ಜಾಗೃತರಾಗಬೇಕು ಎಂದು ಹೇಳಿದರು.

    ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಜೆ.ಅಶೋಕ್ ಮಾತನಾಡಿ, ಕಳೆದ ವರ್ಷ 38065 ಸಾವಿರ ರೈತರು ವಿಮಾ ಸೌಲಭ್ಯಕ್ಕೆ ನೋಂದಣಿ ಮಾಡಿಕೊಳ್ಳಲಾಗಿತ್ತು.

    ಪ್ರಸ್ತುತ ವರ್ಷದಲ್ಲಿ ಮುಂಗಾರು ಮಳೆ ಕುಂಠಿತದಿಂದಾಗಿ ನಿಗದಿತ ಗುರಿ ಬಿತ್ತನೆ ಮತ್ತು ವಿಮಾ ಕಂತು ಕಟ್ಟುವಲ್ಲಿ ರೈತರ ಆಸಕ್ತಿ ಕಾಣುತ್ತಿಲ್ಲ ಎಂದರು.

    ಜುಲೈ ತಿಂಗಳೊಳಗೆ ಶೇ.80ರಷ್ಟು ಬಿತ್ತನೆ ಆಗಬೇಕಿತ್ತು. ವಾರ್ಷಿಕ 94645 ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ಕೇವಲ 18640 ಹೆಕ್ಟೇರ್ ಬಿತ್ತನೆ ಆಗಿದೆ. ಇದುವರೆಗೂ ಕೇವಲ 18553 ರೈತರಿಂದ ವಿಮಾ ಕಂತು ಕಟ್ಟಲಾಗಿದೆ ಎಂದು ತಿಳಿಸಿದರು.

    ವಿಮೆ ಸೌಲಭ್ಯಕ್ಕೆ ಪ್ರಚಾರ ಮಾಡುವ ಪರಿಸ್ಥಿತಿ ಕಂಪನಿಗೆ ಬಂದಿದೆ. ಸಕಾಲಕ್ಕೆ ಸರಿಯಾಗಿ ರೈತರಿಗೆ ವಿಮೆ ಸಿಕ್ಕಿದ್ದರೆ ಕಳೆದ ವರ್ಷಕ್ಕಿಂತ 10 ಸಾವಿರ ಹೆಚ್ಚು ರೈತರು ವಿಮೆ ಕಟ್ಟುತ್ತಿದ್ದರು. ಕಳೆದ ವರ್ಷದ ವಿಮೆ ಹಣ ಇನ್ನೂ ರೈತರಿಗೆ ಬಾಕಿ ಇದೆ. ಮೊದಲು ಬಾಕಿ ವಿಮೆ ಹಣ ಬಿಡುಗಡೆ ಮಾಡಿಸಲಿ
    ಕೆ.ಪಿ.ಭೂತಯ್ಯ, ರಾಜ್ಯ ರೈತ ಸಂಘ ಉಪಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts