More

    ಕಾಂಗ್ರೆಸ್ಸಿನಿಂದ ಸರಣಿ ಸುದ್ದಿಗೋಷ್ಠಿ, ಬಿಜೆಪಿ ಮೇಲೆ ಪ್ರಹಾರ

    ವಿಜಯವಾಣಿ ಸುದ್ದಿಜಾಲ ಗದಗ
    ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಗದಗ ಮತಕ್ಷೇತ್ರದಲ್ಲಿ ಚುನಾವಣಾ ತಂತ್ರ ಹೆಣೆಯುತ್ತಿರುವ ಕಾಂಗ್ರೆಸ್​ ಪಕ್ಷ , ಪ್ರಚಾರದ ವೇಳೆ ಕಾಂಗ್ರೆಸ್​ ಪಕ್ಷಕ್ಕೆ ಟಾಂಗ್​ ನೀಡಿ ಬಿಜೆಪಿ ನೀಡಿದ ಪ್ರತಿಯೊಂದು ಹೇಳಿಕೆಗೂ ತಿರುಗೇಟು ನೀಡುತ್ತಿದೆ.
    ಅಭಿವೃದ್ಧಿ, ಮೀಸಲಾತಿ ವಿಚಾರದಲ್ಲಿ ಬಿಜೆಪಿ ಮತ್ತು ಬಿಜೆಪಿ ಅಭ್ಯಥಿರ್ ನೀಡಿದ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತಿರುವ ಕಾಂಗ್ರೆಸ್​ ಮುಖಂಡರು ಶನಿವಾರ ಪತ್ರಿಕಾಭವನದಲ್ಲಿ ಸರಣಿ ಸುದ್ದಿಗೋಷ್ಟಿ ನಡೆಸುವ ಮೂಲಕ ಏಕಾಏಕಿ ಬಿಜೆಪಿ ಪಕ್ಷದ ಮೇಲೆ ತಿರುಗಿ ಬಿದ್ದಿತ್ತು. ಬೆಲೆ ಏರಿಕೆ, ಹಕ್ಕು ಪತ್ರ ವಿತರಣೆ, ಪಂಚಮಸಾಲಿ ಸಮುಧಾಯ ಭವನ ನಿರ್ಮಾಣ ವಿಚಾರದಲ್ಲಿ ಬಿಜೆಪಿ ಮುಖಂಡರು ಅನ್ಯಾಯ ಎಸಗಿದ್ದಾರೆ ಎಂದು ಆರೋಪಿಸಲಾಯಿತು.
    ಸುದ್ದಿಗೋಷ್ಠಿ 1:
    ಕಾಂಗ್ರೆಸ್​ ಅಭ್ಯಥಿರ್ ಎಚ್​.ಕೆ. ಪಾಟೀಲ ಏ.17 ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಸುದ್ದಿಗೋಷ್ಟಿ ಮೂಲಕ ಮಾಜಿ ಶಾಸಕ ಡಿ.ಆರ್​. ಪಾಟೀಲ ಮಾಹಿತಿ ನೀಡಿ, ಎಂದಿನಿಂತೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಪಂಚಮಸಾಲಿ 2ಡಿ ಮೀಸಲಾತಿ ಎಂಬುದು ಕಣ್ಣೊರೆಸುವ ತಂತ್ರ. ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಇಂತಹ ತಂತ್ರ ಅನುಸರಿಸುತ್ತದೆ. ಇದರಿಂದ ಬಿಜೆಪಿಗೆ ಲಾಭವಿಲ್ಲ. ಲಕ್ಷ$್ಮಣ ಸವದಿ, ಜಗದೀಶ ಶೆಟ್ಟರ, ಕೆ.ಎಸ್​. ಈಶ್ವರಪ್ಪ ಸೇರಿದಂತೆ ಹಲವು ನಾಯಕರಿಗೆ ಬಿಜೆಪಿ ಗೌವರ ನೀಡದೆ ಅವಮಾನಿಸಿದೆ ಎಂದು ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿತು ಎಂದು ರಾಜಕೀಯ ಗಾಳ ಉರುಳಿಸಿದರು. ಗದಗ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಅದ್ಯಕ್ಷ ಅಶೋಕ ಮಂದಾಲಿ, ರೇವಣ್ಣಪ್ಪ ಕೊಂಡಿಕೊಪ್ಪ, ಬಸವರಾಜ ಸುಂಕಾಪುರ, ರವೀಂದ್ರನಾಥ ಮೂಲಿಮನಿ ಬಸವರಾಜ ಕಡೆಮನಿ ಇತರರು ಇದ್ದರು
    ಸುದ್ದಿಗೋಷ್ಠಿ 2:
    ಮುಳಗುಂದ ಗ್ರಾಮದ ಪಂಚಮಸಾಲಿ ವೇದಿಕೆ ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತರನ್ನು ಕಾಂಗ್ರೆಸ್​ ಪಕ್ಷ ಇಬ್ಬಾಗ ಮಾಡುವ ಕುತಂತ್ರ ಹೆಣೆಯಿತು ಎಂದು ಬಿಜೆಪಿ ಅಭ್ಯಥಿರ್ ಅನಿಲ ಮೆಣಸಿಕಾಯಿ ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್​ ಬೆಂಬಲಿತ ಪಂಚಮಸಾಲಿ ಮುಖಂಡರು ಖಂಡಿಸಿದರು. ಕಾಂಗ್ರೆಸ್​ ಬೆಂಬಲಿತ ಪಂಚಮಸಾಲಿ ಮುಖಂಡ ಸಂಗಮೇಶ ಕವಳಿಕಾಯಿ ಮಾತನಾಡಿ, ನಗರದ ಕಬಾಡರ ಲೇಔಟ್​ ನಲ್ಲಿ ಪಂಚಮಸಾಲಿ ಸಮುದಾಯ ಭವನ ಕಟ್ಟಲು ನಗರಾಭಿವೃದ್ಧಿ ಪ್ರಾಧಿಕಾರ ಅನುಮತಿ ನೀಡುತ್ತಿಲ್ಲ. ಈ ಹಿಂದಿನ ಅಧ್ಯಕ್ಷರಾಗಿದ್ದ ಸಂಗಮೇಶ ದುಂದೂರು ನಿರಾಕರಿಸಿದ್ದರು. ಈ ಬಗ್ಗೆ ಹಲವು ಪಂಚಮಸಾಲಿ ಮುಖಂಡರನ್ನು ಭೇಟಿ ಮಾಡಿ ಆಗ್ರಹಿಸಲಾಗಿತ್ತು. ಈಗಿನ ಪ್ರಾಧಿಕಾರದ ಅಧ್ಯಕ್ಷ ಸಿದ್ದು ಪಲ್ಲೇದ ಅವರೂ ಮನಸ್ಸು ಮಾಡುತ್ತಿಲ್ಲ. ಪಂಚಮಸಾಲಿಗಳಿಗೆ ಬಿಜೆಪಿಯಿಂದ ಕ್ಷೇತ್ರದಲ್ಲಿ ಅನ್ಯಾಯವಾಗಿದೆ. ಶಾಸಕ ಎಚ್​.ಕೆ. ಪಾಟೀಲರು ಸಮುದಾಯ ಭವನ ನಿರ್ಮಾಣಕ್ಕೆ ಸತತ ಪ್ರಯತ್ನ ಮಾಡಿದರೂ ಕೂಡ ಬಿಜೆಪಿ ಬೆಂಬಲ ನಗರಾಭಿವೃದ್ಧಿ ಅಧ್ಯಕ್ಷರು ತಡೆಯೊಡ್ಡುತ್ತಿದ್ದಾರೆ. ನಗರದಲ್ಲಿ ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಮುದಾಯ ಹೆಸರಿನಲ್ಲಿ ಈ ಮೊದಲೇ 32 ಗುಂಟೆ ಜಾಗವಿದೆ. ಆದರೆ ಟ್ರಸ್ಟಿಗಳ ನಡುವೆ ಒಮ್ಮತ ಇಲ್ಲದ ಕಾರಣ ಸಮುದಾಯ ಭವನ ಕಟ್ಟಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಕಬಾಡರ ಲೇಔಟ್​ ನಲ್ಲಿ ಭವನ ನಿಮಿರ್ಸಲು ಪ್ರಯತ್ನಿಸುತ್ತಿದ್ದು, ಬಿಜೆಪಿ ಅಡ್ಡಗಾಲು ಹಾಕಿದೆ ಎಂದು ಸಂಗಮೇಶ ಆರೋಪಿಸಿದ್ದರು. ಬಸವರಾಜ ಮನಗುಂಡಿ, ಲಲಿತಾ ಗೊಳಗೊಳಕಿ, ರಮೇಶ ರೋಣದ, ಮಂಜು ಬಾನದ, ಸುಮಿತ ಮಲ್ಲಾಪುರ ಇತರರು ಇದ್ದರು.
    ಸುದ್ದಿಗೋಷ್ಠಿ 3:
    ಶಾಸಕನಾದರೆ ಮನೆ ಹಕ್ಕುಪತ್ರ ಹೊಂದಿರದ ವಾರ್ಡ್​ ನಂಬರ 20 ರ ನಿವಾಸಿಗಳಿಗೆ ಹಕ್ಕು ಪತ್ರ ನೀಡಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಇತ್ತೀಚೆಗೆ ಪ್ರಚಾರದ ವೇಳೆ ಅನಿಲ ಮೆಣಸಿನಕಾಯಿ ಹೇಳಿಕೆ ನೀಡಿದ್ದನ್ನು ಸುದ್ದಿಗೋಷ್ಠಿಯಲ್ಲಿ ಖಂಡಿಸಿದ ಕಾಂಗ್ರೆಸ್​ ವಾರ್ಡ್​ ಮುಖಂಡ ಅಬ್ದುಲ್​ ಮುಲ್ಲಾ , 20ನೇ ವಾರ್ಡ್​ ಕೆಲ ಪ್ರದೇಶಗಳಲ್ಲಿ 10 ಅಡಿ, 20 ಅಡಿ ಜಾಗದಲ್ಲಿ ಕುಟುಂಬಗಳು ವಾಸಿಸುತ್ತಿವೆ. ಅವುಗಳು ಅನಧಿಕೃತ ವಾಸಸ್ಥಾನಗಳಾಗಿದ್ದು, ಹಕ್ಕುಪತ್ರ ಕೊಡಲು ಕಾನೂನು ತೊಡಕು ಮೊದಲಿನಿಂದಲೂ ಇದೆ. ಅನಿಲ ಮೆಣಸಿಕಾತಿ ನೀಡಿರುವ ಭರವಸೆ ಶುದ್ಧ ಸುಳ್ಳು. ಕಾಂಗ್ರೆಸ್​ ಅಧಿಕಾರದ ಅವಧಿಯಲ್ಲಿ ಜನತಾ ಕಾಲನಿ, ಕೃಷ್ಣ ನಗರದಲ್ಲಿ ಸೇರಿದಂತೆ ಹಲವು ನಗರಗಳ ನಿವಾಸಿಗಳಿಗೆ ಹಕ್ಕು ಪತ್ರ ನೀಡಿದೆ. ಅಧಿಕಾರದ ಆಸೆಗಾಗಿ ಅನಿಲ ಮೆಣಸಿಕಾಯಿ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು. ರುದ್ರಮ್ಮ ಕೆರಕಲಕಟ್ಟಿ, ನಲವತ್ತಮಠ, ಬಸಪ್ಪ ಕಳಬಂಡಿ, ಶಿವಪ್ಪ ಕುರಿತು, ಸುರೇಶ ಕಲಬುಗಿರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts