More

    ಗದಗ: ಬಜೆಟ್​ನಲ್ಲಿ ಜಿಲ್ಲೆಗೆ ಬೇವು ಬೆಲ್ಲ

    ಶಿವಾನಂದ ಹಿರೇಮಠ ಗದಗ
    ಸಿಎಂ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದ ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಜಿಲ್ಲೆಗೆ ಬೆಲಕ್ಕಿಂತ ಬೇವು ಅಧಿಕವಾಗಿದೆ. ಗ್ಯಾರಂಟಿ ಯೋಜನೆಗಳ ನಡುವೆ ಪ್ರವಾಸೋಧ್ಯಮ ಇಲಾಖೆ ಸಚಿವರ ತವರಿಗೆ ಬಜೆಟ್​ನಲ್ಲಿ ಸೂಕ್ತ ಅನುದಾನ ಸಿಬಗಹುದು ಎಂದು ಊಹಿಸಲಾಗಿತ್ತು. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಅನುದಾನ ಸಿಗದೇ ಇರುವುದು ಜನರಲ್ಲಿ ನಿರಾಸೆ ಮೂಡಿಸಿದೆ. “ಕಪ್ಪತಗುಡ್ಡದಲ್ಲಿ ಪ್ರವಾಸೋದ್ಯಮ ಪೂರಕ ಪರಿಸರ ಅಭಿವೃದ್ಧಿ ಪಡಿಸಲಾಗುವುದು’ ಎಂಬ ವಾಖ್ಯ ಹೊರತುಪಡಿಸಿ ಪ್ರಸ್ತುತ ಬಜೆಟ್​ ಶೂನ್ಯ ಕೊಡುಗೆ ನೀಡಿದೆ.

    ಕಪ್ಪತಗುಡ್ಡ ನಿರ್ಲಕ್ಷ್ಯ:
    ಉತ್ತರ ಕರ್ನಾಟಕ ಸಹ್ಯಾದ್ರಿ, ವಿಶೇಷ ಔಷಧಿ ಗುಣಗಳನ್ನು ಹೊಂದಿರುವ ಕಪ್ಪತಗುಡ್ಡವನ್ನು ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಪರಿವತಿರ್ಸುವ ಸಂಬಂಧ ಈ ವರೆಗೂ ವಿಶೇಷ ನೀಲ ನಕ್ಷೇ ಸಿದ್ಧವಾಗಿಲ್ಲ. ಪ್ರತಿ ಬಜೆಟ್​ ನಲ್ಲೂ ಕಪ್ಪತಗುಡ್ಡ ಕ್ಷೇತ್ರಕ್ಕೆ ಅನ್ಯಾಯ ಆಗುತ್ತಲೇ ಇದೆ. ಈ ಭಾಗದಲ್ಲಿ ಆಯುರ್ವೇದ, ಔಷಧಿ ಸಸ್ಯಗಳ ಸಂಶೊಧನೆಗೆ ಸಂಶೊಧನಾ ಕೇಂದ್ರ ಸ್ಥಾಪನೆ ಮಾಡಬೇಕೆಂಬ ಹಲವು ವರ್ಷದ ಕೂಗು ಹಾಗೇ ಊಳಿದಿದೆ.

    ಲಕ್ಕುಂಡಿ ಪ್ರಾಧಿಕಾರ:
    ಸಚಿವ ಎಚ್​.ಕೆ. ಪಾಟೀಲರು ಪ್ರವಾಸೋದ್ಯಮ ಸಚಿವರಾದ ನಂತರ ಐತಿಹಾಸಿಕ ಲಕ್ಕುಂಡಿ ಕ್ಷೇತ್ರದ ಅಭಿವೃದ್ಧಿಗೆ ಮುಂದಡಿ ಇಟ್ಟಿದ್ದರು. ಲಕ್ಕುಂಡಿ ಪ್ರಾಧಿಕಾರ ರಚನೆ ಮಾಡಿದ್ದರು. ತಜ್ಞರಿಂದ ಸಮೀೆ ನಡೆಸಿ, ಲಕ್ಕುಂಡಿ ಅಭಿವೃದ್ಧಿಗೆ 804 ಕೋಟಿ ರೂ.ಗಳ ನೀಲ ನೆಯನ್ನು ತಯಾರಿಸಿ ಅನುದಾನ ಒದಗಿಸಲು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಪ್ರಸ್ತುತ ಬಜೆಟ್​ನಲ್ಲಿ ಲಕ್ಕುಂಡಿ ಪ್ರಾಧಿಕಾರಕ್ಕೆ ಅನುದಾನವನ್ನು ಮೀಸಲಿಡುವ ಭರವಸೆ ಹುಸಿಯಾಗಿದೆ.

    ರೈಲ್ವೆ ಯೋಜನೆಗೆ ಅನುದಾನ ಇಲ್ಲ:
    ಮಧ್ಯ ಕರ್ನಾಟಕದ ಪ್ರಮುಖ ರೈಲ್ವೆ ಯೋಜನೆಗಳಲ್ಲಿ ಒಂದಾದ ಗದಗ- ಬಿಂಕದಕಟ್ಟಿ- ಶಿರಹಟ್ಟಿ-ಯಲವಿಗಿ, ಗದಗ-ಹರಪನಹಳ್ಳಿ, ಗದಗ-ಕೃಷ್ಣಾನಗರ ಯೋಜನೆಗೆ ಈ ಭಾಗದ ಜನರಿಗೆ ಗಗನ ಕುಸುಮವಾವೆ. ಗದಗ-ಯಲವಗಿ ಯೋಜನೆಗೆಈ ಹಿಂದಿನ ಬಿಜೆಪಿ ಸರ್ಕಾರ 600 ಕೋಟಿಗೂ ಅಧಿಕ ಅನುದಾನ ಮೀಸಲಿಟ್ಟಿತ್ತು. ಸಿದ್ದರಾಮಯ್ಯ ಮಂಡಿಸಿದ ಬಜೆಟ್​ ನಲ್ಲಿ ಈ ಯೋಜನೆ ಮರೆತಂತಿದೆ.

    ಬಜೆಟ್​ನಲ್ಲಿ ಜಿಲ್ಲೆಗೆ ಏನೆನು?

    • ಗದಗನಲ್ಲಿ ನೂತನವಾಗಿ ನಿಮಿರ್ಸಿದ 450 ಹಾಸಿಗೆಗಳ ಆಸ್ಪತ್ರೆಗೆ ವೈದ್ಯಕಿಯ ಉಪಕರಣ ಮತ್ತು ಪಿಠೋಪಕರಣ ಖರೀದಿಗೆ ಅನುದಾನ(ಗದಗ, ಕೊಪ್ಪಳ, ಚಾಮರಾಜ ನಗರ ಸೇರಿ 150 ಕೋಟಿ)
    • ಸಾರ್ವಜನಿಕ ಆರೋಗ್ಯ ಪ್ರಯೋಗಾಲಯ
    • ಜಿಲ್ಲೆಯ ರೋಣ ಪಟ್ಟಣದಲ್ಲಿ ನಬಾರ್ಡ್​ ಸಹಯೋಗದೊಂದಿಗೆ 150 ಕೋಟಿ ವೆಚ್ಚದಲ್ಲಿ ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರ(ಜಿಟಿಟಿಸಿ) ಸ್ಥಾಪನೆ.
    • ಜಿಲ್ಲೆಯ ರೋಣ-ಮಲ್ಲಾಪುರ ರಸ್ತೆ ಅಭಿವೃದ್ಧಿ
    • ಗದಗ ಜಿಲ್ಲಾಸ್ಪತ್ರೆಯಲ್ಲಿ 10 ಕೋಟಿ ವೆಚ್ಚದಲ್ಲಿ ಸುಪರ್​ ಸ್ಪೆಷಾಲಿಟಿ ಕಾಡಿರ್ಕ್​ ಟಕ ಸ್ಥಾಪನೆ ಮತ್ತು ಅನಸ್ತೆಷಿಯಾ ಟಕ
    • ಗದಗ ಜಿಲ್ಲೆಯ ಜಾಲವಾಡಗಿ ಏತ ನೀರಾವರಿಗೆ ಅನುದಾನ
    • ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಶೀತಲಗೃಹ
    • ಜವಳಿ ಪಾರ್ಕ್​, ಶಿರಹಟ್ಟಿ ಯಲ್ಲಿ 100 ಹಾಸಿಗೆ ಸಾಮರ್ಥ್ಯ ತಾಲೂಕು ಆಸ್ಪತ್ರೆ ನಿರ್ಮಾಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts