More

    ಸೈಕ್ಲಿಂಗ್ ನಲ್ಲಿ ಬಂಗಾರದ ಪದಕ ಗೆದ್ದು ಬರಲಿ ಎಂದು ಹಾರೈಸಿದ ಬಸವರಾಜ ಬೊಮ್ಮಾಯಿ

    ಗದಗ: ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಕಡಕೋಳ ಗ್ರಾಮದ ಗದಗ ಕ್ರೀಡಾಶಾಲೆಯ ವಿದ್ಯಾರ್ಥಿನಿ ಪವಿತ್ರಾ ಕುರ್ತಕೋಟಿ ತಾನು ಸೈಕ್ಲಿಂಗ್ ಮಾಡಲು ಸೈಕಲ್ ಕೊಳ್ಳಲು ಸಾಧ್ಯವಾಗದಿದ್ದಾಗ ಅಂದಿನ ಮುಖ್ಯ ಬಸವರಾಜ ಬೊಮ್ಮಾಯಿಯವರು ಕ್ರೀಡಾ ಇಲಾಖೆ ಮೂಲಕ ಹೊಸ ಸೈಕಲ್ ಕೊಡೆಸಿದ್ದನ್ನು ಸ್ಮರಿಸಿ ಇಂದು ಗದಗನಲ್ಲಿ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ, ನನ್ನ ಮನೆಯಲ್ಲಿ ಬಡತನ ಇದ್ದಿದ್ದರಿಂದ ನನಗೆ ಸೈಕಲ್ ಕೊಳ್ಳಲು ಸಾಧ್ಯವಾಗಿರಲಿಲ್ಲ. ನನ್ನ ಸಮಸ್ಯೆಯನ್ನು ಅಂದಿನ ಗದಗ ಉಸ್ತುವಾರಿ ಸಚಿವರಾದ ಸಿ.ಸಿ ಪಾಟೀರಿಗೆ ತಿಳಿಸಿದ್ದೆನು. ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಗಮನಕ್ಕೆ ತಂದರು, ಅವರು ಮುಖ್ಯಮಂತ್ರಿ ಯಾಗಿದ್ದಾಗ ತನಗೆ ಸೈಕ್ಲಿಂಗ್ ಮಾಡಲು ಕ್ರೀಡಾ ಇಲಾಖೆಯಿಂದ 8.50 ಲಕ್ಷ ರೂ. ಮೊತ್ತದ ಸೈಕಲ್ ಕೊಡಿಸಿದ್ದರಿಂದ ತಾನು ರಾಷ್ಟ್ರೀಯ ಮಟ್ಟದಲ್ಲಿ ಪದಕ ಪಡೆದು ಏಷಿಯನ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಿತು ಎಂದು ಸ್ಮರಿಸಿ ಅವರಿಗೆ ಅಭಿನಂದನೆ ಸಲ್ಲಿಸಿದರು.
    ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸಬರಾಜ ಬೊಮ್ಮಾಯಿ, ಪವಿತ್ರಾಳ ಅರ್ಹತೆಯ ಬಗ್ಗೆ ಸಿಸಿ ಪಾಟೀಲರು ನನ್ನ ಗಮನಕ್ಕೆ ತಂದು ಅವಳಿಗೆ ಪ್ರತಿಭೆ ಇದೆ. ಪ್ರೋತ್ಸಾಹ ಕೊಡಬೇಕು ಎಂದು ಹೇಳಿದರು. ನಾನು ಕೂಡಲೇ ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಕರೆ ಮಾಡಿ, ವಿಶೇಷ ಅನುದಾನ ನೀಡಿ ಅವಳಿಗೆ ಅಗತ್ಯವಿರುವ ತಂತ್ರಜ್ಞಾನ ಹೊಂದಿರುವ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೈಕ್ಲಿಂಗ್ ಮಾಡುವ ಸುಮಾರು 8 ಲಕ್ಷ ರೂ. ಬೆಲೆ ಬಾಳುವ ಸೈಕಲ್ ಕೊಡಿಸಿದ್ದೇವು. ಅದನ್ನು ಪವಿತ್ರ ಸದುಪಯೋಗ ಪಡೆಸಿಕೊಂಡಿದ್ದಾಳೆ. ಇಡೀ ದೇಶವನ್ನು ಏಷಿಯನ್‌ ಕ್ರೀಡಾಕೂಟದಲ್ಲಿ ಪ್ರತಿನಿಧಿಸಿ, ಮೂವತ್ತು ದೇಶಗಳು ಪಾಲ್ಗೊಳ್ಳುವ ಕ್ರೀಡಾ ಕೂಟದಲ್ಲಿ ಪಾಲ್ಗೊಂಡು, ನಮ್ಮ ಕರ್ನಾಟಕ ಸರ್ಕಾರ ನೀಡಿದ್ದ ಸೈಕಲ್ ಬಳಕೆ ಮಾಡಿದ್ದಾಳೆ ಎಂದರು.
    ಇದೇ ರೀತಿ ನಾವು ಪ್ಯಾರಿಸ್ ಓಲಂಪಿಕ್ಸ್ ಗೆ ಹೋಗುವ 75 ಕ್ರೀಡಾಪಟುಗಳಿಗೆ ಸುಮಾರು ನಾಲ್ಕು ವರ್ಷ ತರಬೇತಿ ನೀಡುತ್ತಿದ್ದೇವೆ. ಪ್ರತಿಯೊಬ್ಬರಿಗೂ ಸುಮಾರು 8 ಲಕ್ದ ರೂ. ಖರ್ಚಾಗುತ್ರದೆ. ಇದರಿಂದ ಒಲಿಂಪಿಕ್ಸ್ ನಲ್ಲಿ ಭಾರತೀಯರ ಪದಕ ಬೇಟೆಯಲ್ಲಿ ಕನ್ನಡಿಗರೂ ಇರುತ್ತಾರೆ ಎಂದು ವಿಶ್ಬಾಸ ವ್ಯಕ್ತಪಡಿಸಿದರು.
    ಹೀಗೆ ಯುವಕರಿಗೆ ಪ್ರೋತ್ಸಾಹ ನೀಡಿದ ಸಮಾಧಾನ ನನಗಿದೆ. ಪವಿತ್ರಾಳಿಗೆ ಇನ್ನಷ್ಟು ಯಶಸ್ಸು ಸಿಗಲಿ, ಬಂಗಾರದ ಪದಕ ಪಡೆದು, ದೇಶ, ರಾಜ್ಯ ಹಾಗೂ ಜಿಲ್ಲೆಗೆ ಹೆಸರು ತರಲಿ ಎಂದು ಇದೇ ವೇಳೆ ಶುಭಕೋರಿದರು.
    ಈ ಸಂದರ್ಭದಲ್ಲಿ ಪವಿತ್ರಾ ಕುರ್ತಕೋಟಿ ಅವರ ಕೋಚ್ ಆನಂದ ದೇಸಾಯಿ, ಮಾಜಿ ಸಚಿವ ಸಿ.ಸಿ. ಪಾಟೀಲ ಅವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts