More

    ಜಿ.ಸಿ.ಮುರ್ಮು ಭಾರತದ ನೂತನ ಸಿಎಜಿ

    ನವದೆಹಲಿ: ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಸ್ಥಾನಕ್ಕೆ ನಿನ್ನೆ ರಾಜೀನಾಮೆ ಸಲ್ಲಿಸಿದ್ದ ಗಿರೀಶ್ ಚಂದ್ರ ಮುರ್ಮು ಅವರನ್ನು ನೂತನ ಕಂಪ್ಟ್ರೋಲರ್ ಆ್ಯಂಡ್ ಆಡಿಟ್ ಜನರಲ್​(ಸಿಎಜಿ) ಆಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ. ನಿನ್ನೆ ತಡರಾತ್ರಿ ಈ ನಿರ್ಣಯವನ್ನು ಕೇಂದ್ರ ಸರ್ಕಾರ ಘೋಷಿಸಿದೆ ಎಂದು ಐಎಎನ್​ಎಸ್ ವರದಿ ಮಾಡಿದೆ.

    ಜಮ್ಮು-ಕಾಶ್ಮೀರ ರಾಜ್ಯದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಎರಡು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿ ಸರಿಯಾಗಿ ಒಂದು ವರ್ಷವಾಗಿತ್ತು ನಿನ್ನೆಗೆ. ನಿನ್ನೆಯೇ ಮುರ್ಮು ರಾಜೀನಾಮೆ ನೀಡಿದಾಗ ಅವರಿಗೆ ಮಹತ್ವದ ಹೊಣೆಗಾರಿಕೆಯನ್ನು ಕೇಂದ್ರ ಸರ್ಕಾರ ನೀಡಲಿದೆ. ಬಹುಶಃ ಅವರು ಮಹಾಲೇಖಪಾಲರಾಗಬಹುದು ಎಂಬ ಮಾತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಧ್ವನಿಸಿತ್ತು. ಮುರ್ಮು ಅವರ ರಾಜೀನಾಮೆಯಿಂದ ತೆರವಾದ ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್​ ಸ್ಥಾನಕ್ಕೆ ಇಂದು ಬೆಳಗ್ಗೆ ಮಾಜಿ ಕೇಂದ್ರ ಸಚಿವ ಮನೋಜ್ ಸಿನ್ಹಾ ನೇಮಕವಾಗಿದ್ದಾರೆ.

    ಇದನ್ನೂ ಓದಿ: ಅಯೋಧ್ಯೆ ಬೀಗ ತೆರೆಯುವುದಕ್ಕೆ ಮುನ್ನ ರಾಜೀವ್ ಗಾಂಧಿ ಮಾಡಿದ ಡೀಲ್ ಏನಾಗಿತ್ತು!!!

    ಗುಜರಾತ್​ ಕೆಡರ್​ನ 1985 ಬ್ಯಾಚಿನ ಐಎಎಸ್ ಅಧಿಕಾರಿಯಾಗಿರುವ ಮುರ್ಮು ಮಹಾಲೇಖಪಾಲರಾಗಿ 1978ರ ಬ್ಯಾಚಿನ ರಾಜಸ್ಥಾನ ಕೆಡರ್​ನ ಐಎಎಸ್ ಅಧಿಕಾರಿ ರಾಜೀವ್ ಮೆಹರ್ಷಿ ಅವರಿಂದ ತೆರವಾದ ಸ್ಥಾನವನ್ನು ತುಂಬಲಿದ್ದಾರೆ. ನರೇಂದ್ರ ಮೋದಿ ಗುಜರಾತ್​ನಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಅಲ್ಲಿ ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ಕೆಲಸ ನಿರ್ವಹಿಸಿದ್ದರು. ಜಮ್ಮು-ಕಾಶ್ಮೀರದ ಎಲ್​ಜಿ ಆಗುವುದಕ್ಕಿಂತ ಮುನ್ನ ಅವರು ಹಣಕಾಸು ಸಚಿವಾಲಯದಲ್ಲಿ ಸೆಕ್ರೆಟರಿ ಆಗಿದ್ದರು. (ಏಜೆನ್ಸೀಸ್)

    ಜಮ್ಮು-ಕಾಶ್ಮೀರಕ್ಕೆ ಮನೋಜ್​ ಸಿನ್ಹಾ ನೂತನ ಎಲ್​ಜಿ: ಮುರ್ಮು ರಾಜೀನಾಮೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts