ಜಮ್ಮು-ಕಾಶ್ಮೀರಕ್ಕೆ ಮನೋಜ್​ ಸಿನ್ಹಾ ನೂತನ ಎಲ್​ಜಿ: ಮುರ್ಮು ರಾಜೀನಾಮೆ

ನವದೆಹಲಿ: ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್​ ಗವರ್ನರ್(ಎಲ್​ಜಿ) ಆಗಿ ಮನೋಜ್ ಸಿನ್ಹಾ ಅಧಿಕಾರ ಸ್ವೀಕರಿಸಲಿದ್ದಾರೆ. ಗಿರೀಶ್ ಚಂದ್ರ ಮುರ್ಮು ನಿನ್ನೆ ಏಕಾಕಿಯಾಗಿ ಎಲ್​ಜಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಅದನ್ನು ಅಂಗೀಕರಿಸಿದ್ದಾರೆ. ಕೇಂದ್ರದ ಮಾಜಿ ಸಚಿವ ಮನೋಜ್ ಸಿನ್ಹಾ ಅವರ ನೇಮಕವನ್ನು ರಾಷ್ಟ್ರಪತಿ ಭವನ ಖಚಿತಪಡಿಸಿದ್ದು, ಶೀಘ್ರವೇ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. 2014ರಿಂದ 2019ರ ತನಕ ಅವರು ಮೋದಿ ಸಂಪುಟದಲ್ಲಿ ಸಚಿವರಾಗಿದ್ದರು. ಬನಾರಸ್ ಹಿಂದು ಯೂನಿವರ್ಸಿಟಿಯಲ್ಲಿ ಅವರು ವಿದ್ಯಾರ್ಥಿ ನಾಯಕರಾಗಿದ್ದರು. ಉತ್ತರ ಪ್ರದೇಶದ ಘಾಜಿಪುರ ಲೋಕಸಭೆ … Continue reading ಜಮ್ಮು-ಕಾಶ್ಮೀರಕ್ಕೆ ಮನೋಜ್​ ಸಿನ್ಹಾ ನೂತನ ಎಲ್​ಜಿ: ಮುರ್ಮು ರಾಜೀನಾಮೆ