More

    ಜಮ್ಮು-ಕಾಶ್ಮೀರಕ್ಕೆ ಮನೋಜ್​ ಸಿನ್ಹಾ ನೂತನ ಎಲ್​ಜಿ: ಮುರ್ಮು ರಾಜೀನಾಮೆ

    ನವದೆಹಲಿ: ಜಮ್ಮು-ಕಾಶ್ಮೀರದ ಲೆಫ್ಟಿನೆಂಟ್​ ಗವರ್ನರ್(ಎಲ್​ಜಿ) ಆಗಿ ಮನೋಜ್ ಸಿನ್ಹಾ ಅಧಿಕಾರ ಸ್ವೀಕರಿಸಲಿದ್ದಾರೆ. ಗಿರೀಶ್ ಚಂದ್ರ ಮುರ್ಮು ನಿನ್ನೆ ಏಕಾಕಿಯಾಗಿ ಎಲ್​ಜಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದು, ರಾಷ್ಟ್ರಪತಿ ರಾಮನಾಥ ಕೋವಿಂದ ಅವರು ಅದನ್ನು ಅಂಗೀಕರಿಸಿದ್ದಾರೆ.

    ಕೇಂದ್ರದ ಮಾಜಿ ಸಚಿವ ಮನೋಜ್ ಸಿನ್ಹಾ ಅವರ ನೇಮಕವನ್ನು ರಾಷ್ಟ್ರಪತಿ ಭವನ ಖಚಿತಪಡಿಸಿದ್ದು, ಶೀಘ್ರವೇ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. 2014ರಿಂದ 2019ರ ತನಕ ಅವರು ಮೋದಿ ಸಂಪುಟದಲ್ಲಿ ಸಚಿವರಾಗಿದ್ದರು. ಬನಾರಸ್ ಹಿಂದು ಯೂನಿವರ್ಸಿಟಿಯಲ್ಲಿ ಅವರು ವಿದ್ಯಾರ್ಥಿ ನಾಯಕರಾಗಿದ್ದರು. ಉತ್ತರ ಪ್ರದೇಶದ ಘಾಜಿಪುರ ಲೋಕಸಭೆ ಕ್ಷೇತ್ರದಿಂದ ಎರಡು ಬಾರಿ ಗೆಲುವು ಕಂಡಿದ್ದರು. ಆದಾಗ್ಯೂ 2019ರ ಚುನಾವಣೆಯಲ್ಲಿ ಸೋಲನುಭವಿಸಿದ್ದರು.

    ಇದನ್ನೂ ಓದಿ: ವಿದೇಶಿ ಮಾಧ್ಯಮಗಳಲ್ಲಿ ಅಯೋಧ್ಯೆ

    ಮುರ್ಮು ರಾಜೀನಾಮೆ ಮರ್ಮ?: ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ 370ನೇ ವಿಧಿಯ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಒಂದು ವರ್ಷ ಪೂರ್ಣಗೊಂಡ ದಿನವೇ ಮುರ್ಮು ರಾಜೀನಾಮೆ ಸಲ್ಲಿಸಿದ್ದಾರೆ. 60 ವರ್ಷ ವಯಸ್ಸಿನ ಗುಜರಾತ್​ ಕೆಡರ್​ನ ಈ ಐಎಎಸ್​ ಅಧಿಕಾರಿ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಮೊದಲ ಲೆಫ್ಟಿನೆಂಟ್ ಜನರಲ್ ಆಗಿ ಕಳೆದ ವರ್ಷ ಅಕ್ಟೋಬರ್ 29ರಂದು ಅಧಿಕಾರ ಸ್ವೀಕರಿಸಿದ್ದರು.

    ಇದನ್ನೂ ಓದಿ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಹೆಸರೆಂದರೆ ನೆನಪಾಗೋದು ಆಯುರ್ವೇದದ ಚ್ಯವನಪ್ರಾಶ ಲೇಹ್ಯ!

    ಮುರ್ಮು 1985ರ ಬ್ಯಾಚಿನ ಅಧಿಕಾರಿಯಾಗಿದ್ದು, ಗುಜರಾತ್​ನಲ್ಲಿ ನರೇಂದ್ರ ಮೋದಿ ಮುಖ್ಯಮಂತ್ರಿ ಆಗಿದ್ದಾಗ ಅಲ್ಲಿ ಪ್ರಿನ್ಸಿಪಲ್ ಸೆಕ್ರೆಟರಿಯಾಗಿ ಕೆಲಸ ನಿರ್ವಹಿಸಿದ್ದರು. ಜಮ್ಮು-ಕಾಶ್ಮೀರದ ಎಲ್​ಜಿ ಆಗುವುದಕ್ಕಿಂತ ಮುನ್ನ ಅವರು ಹಣಕಾಸು ಸಚಿವಾಲಯದಲ್ಲಿ ಸೆಕ್ರೆಟರಿ ಆಗಿದ್ದರು. ಅವರ ರಾಜೀನಾಮೆಗೆ ಸ್ಪಷ್ಟ ಕಾರಣವೇನೂ ಬಹಿರಂಗವಾಗಿಲ್ಲ. ಮೂಲಗಳ ಪ್ರಕಾರ, ಅವರಿಗೆ ಕೇಂದ್ರ ಸರ್ಕಾರ ಹೊಸ ಹೊಣೆಗಾರಿಕೆ ನೀಡುವ ಸಾಧ್ಯತೆ ಇದೆ. ಶ್ರೀನಗರದಲ್ಲಿ ಅಧಿಕಾರಿಗಳನ್ನು ಆಡಳಿತಾಧಿಕಾರಿಯನ್ನಾಗಿ ಮಾಡುವ ಬದಲು ರಾಜಕೀಯ ನೇತಾರರನ್ನು ಆಡಳಿತಾಧಿಕಾರಿಯನ್ನಾಗಿ ಮಾಡಿದ್ದರ ಹಿಂದೆ ಮುಂದಿನ ರಾಜಕೀಯ ಬೆಳವಣಿಗೆಯ ದಿಕ್ಸೂಚಿ ಎಂದು ಪರಿಣತರು ಬಣ್ಣಿಸಿದ್ದಾರೆ. (ಏಜೆನ್ಸೀಸ್)

    ರಾಮ ಜನ್ಮಭೂಮಿ ಆವರಣದಲ್ಲಿ ಪ್ರಧಾನಿ ಮೋದಿ ಪಾರಿಜಾತ ನೆಟ್ಟಿದ್ದು ಏಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts