More

    ವಿಶ್ವಸಂಸ್ಥೆ ಅಧಿಕೃತ ವಾಹನದಲ್ಲೇ ಸಾರ್ವಜನಿಕವಾಗಿ ಉದ್ಯೋಗಿಗಳಿಬ್ಬರ ಸೆಕ್ಸ್: ವಿಡಿಯೋ ವೈರಲ್​​!

    ಜೆರುಸಲೆಮ್: ವಿಶ್ವಸಂಸ್ಥೆಯ ಅಧಿಕೃತ ವಾಹನದಲ್ಲಿ ಉದ್ಯೋಗಿಗಳಿಬ್ಬರು ಸಾರ್ವಜನಿಕವಾಗಿ ಸೆಕ್ಸ್​ ಮಾಡಿದ ವಿಡಿಯೋ ವೈರಲ್​ ಆಗಿದ್ದು, ಘಟನೆಯಿಂದ ಅತೀವ ನೋವಾಗಿರುವುದಲ್ಲದೇ ಶಾಕ್​ ಕೂಡ ಆಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

    ಇಸ್ರೇಲ್​ನ ಮೆಡಿಟರೇನಿಯನ್ ಕರಾವಳಿ ಪ್ರದೇಶದಲ್ಲಿ ಬರುವ ಟೆಲ್​ ಅವಿವ್​ ಯಫೋ ನಗರದಲ್ಲಿ ಈ ಘಟನೆ ನಡೆದಿದೆ. 18 ಸೆಕೆಂಡ್​ವುಳ್ಳ ವಿಡಿಯೋ ತುಣುಕನ್ನು ವ್ಯಕ್ತಿಯೊಬ್ಬರು ತಮ್ಮ ಟ್ವಿಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ. ವಿಡಿಯೋದಲ್ಲಿ ಯುಎನ್​ (UN) ಎಂದು ಬರೆದಿರುವ ವಿಶ್ವಸಂಸ್ಥೆಯ ಕಾರಿನ ಹಿಂಬದಿ ಸೀಟಿನಲ್ಲಿ ವ್ಯಕ್ತಿಯೊಬ್ಬ ಕೆಂಪು ಬಣ್ಣದ ಧಿರಿಸು ತೊಟ್ಟಿರುವ ಮಹಿಳೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಂತೆ ಕಾಣುತ್ತದೆ.

    ಇದನ್ನೂ ಓದಿ: ಕೈಕಾಲುಗಳಿಲ್ಲದೇ ಹೆಣ್ಣು ಮಗುವಿನ ಜನನ: ತಾಯಿ, ವೈದ್ಯರಿಗೆ ಕಾದಿತ್ತು ಮತ್ತೊಂದು ಅಚ್ಚರಿ!

    ವಿಡಿಯೋದಲ್ಲಿರುವ ವ್ಯಕ್ತಿ ಟೀ-ಶರ್ಟ್​ ಮತ್ತು ಶಾರ್ಟ್ಸ್​ ಧರಿಸಿರುತ್ತಾನೆ. ಮತ್ತೊಬ್ಬ ಪ್ರಯಾಣಿಕ ಕಾರಿನ ಮುಂಭಾಗದ ಸೀಟಿನಲ್ಲಿ ನಿದ್ರೆ ಹೋಗಿರುತ್ತಾನೆ. ಅದಾದ ಸ್ವಲ್ಪ ಸಮಯದಲ್ಲಿ ಕಾರು ಮುಂದಕ್ಕೆ ಚಲಿಸುವುದು ವಿಡಿಯೋದಲ್ಲಿ ದಾಖಲಾಗಿದೆ.

    ಕಾರಿನಲ್ಲಿದ್ದವರನ್ನು ವಿಶ್ವಸಂಸ್ಥೆಯ ಟ್ರೂಸ್ ಮೇಲ್ವಿಚಾರಣಾ ಸಂಸ್ಥೆ (ಯುಎನ್​ಟಿಎಸ್​ಒ)ಯ ಉದ್ಯೋಗಿಗಳೆಂದು ನಂಬಲಾಗಿದೆ. ಇದೊಂದು ಜೆರುಸಲೆಮ್ ಮೂಲದ ಶಾಂತಿಪಾಲನಾ ಪಡೆಯಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.

    ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರ ವಕ್ತಾರ ಸ್ಟೀಫನ್ ಡುಜಾರಿಕ್ ಮಾತನಾಡಿ, ವಿಡಿಯೋದಲ್ಲಿರುವುದನ್ನು ನೋಡಿ ನಾವು ಶಾಕ್​ ಆದೆವು. ವಿಡಿಯೋದಲ್ಲಿರುವ ಉದ್ಯೋಗಿಗಳ ವರ್ತನೆ ಅಸಭ್ಯವಾಗಿತ್ತು. ಸಿಬ್ಬಂದಿಯ ವರ್ತನೆಯು ನಮ್ಮ ಹೋರಾಟ ಹಾಗೂ ನಿಲುವಿಗೆ ವಿರುದ್ಧವಾಗಿರುವುದರಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.

    ಇದನ್ನೂ ಓದಿ: VIDEO| ಪೈಲಟ್​​ ಗಂಡನ ಕಿರುಕುಳಕ್ಕೆ ಬೇಸತ್ತು ಟೆಕ್ಕಿ ಆತ್ಮಹತ್ಯೆ: ಬೆಚ್ಚಿಬೀಳಿಸುವಂತಿದೆ ಸಿಸಿಟಿವಿ ದೃಶ್ಯ

    ಯುಎನ್​ ಪರಿಣಿತರು ಆದಷ್ಟು ಬೇಗ ತನಿಖೆ ಸಂಪೂರ್ಣ ಮಾಡಲಿದ್ದಾರೆ. ವಿಡಿಯೋದಲ್ಲಿದ್ದವರನ್ನು ಪತ್ತೆಹಚ್ಚುವ ಹಂತಕ್ಕೆ ಬಂದಿದ್ದಾರೆ. ಸೂಕ್ರ ಕ್ರಮ ಜರುಗಿಸಲಾಗುವುದು ಎಂದು ಡುಜಾರಿಕ್ ಹೇಳಿದ್ದಾರೆ.

    ವಿಶ್ವಸಂಸ್ಥೆ ಅಧಿಕೃತ ವಾಹನದಲ್ಲೇ ಸಾರ್ವಜನಿಕವಾಗಿ ಉದ್ಯೋಗಿಗಳಿಬ್ಬರ ಸೆಕ್ಸ್: ವಿಡಿಯೋ ವೈರಲ್​​!

    ಈ ವಿಡಿಯೋ ಕಳೆದ ವಾರವೇ ವಿಶ್ವಸಂಸ್ಥೆಯ ಗಮನಕ್ಕೆ ಬಂದಿತ್ತು. ಆದರೆ, ಇದನ್ನು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬುದು ತಿಳಿದಿರಲಿಲ್ಲ. ನೆಟ್ಟಿಗರ ವಿಡಿಯೋ ಕುರಿತು ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸಿದ್ದರು. ಇನ್ನು ಕೆಲವರು ಇದರಲ್ಲಿ ಅಚ್ಚರಿ ಪಡುವಂಥದ್ದೇನಿಲ್ಲ ಎಂದಿದ್ದಾರೆ. (ಏಜೆನ್ಸೀಸ್​)

    ಇದನ್ನೂ ಓದಿ: ಯುವತಿಯನ್ನು ನಂಬಿಸಿ ದ್ರೋಹವೆಸಗಿದ ಪೊಲೀಸ್​ ಕಾನ್ಸ್​ಟೇಬಲ್ ಬಂಧನ​

    ಹಸಿವಿಗಿಂತಲೂ ಕರೊನಾ ಉತ್ತಮ: ಕಾರ್ಮಿಕರಲ್ಲಿ ಶುರುವಾಯ್ತು ಮತ್ತೊಂದು ಭಯ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts