More

    ಜನಮನ ಗೆದ್ದ ಫರ್ನೀಚರ್ ಶೋ: ಸಾವಿರಾರು ಗ್ರಾಹಕರ ಭೇಟಿ, ಅರಮನೆ ಮೈದಾನದ ಕಿಂಗ್ಸ್ ಕೋರ್ಟ್​ನಲ್ಲಿ ಆಯೋಜನೆ

    ಬೆಂಗಳೂರು: ನಗರದ ಅರಮನೆ ಮೈದಾನದ ಕಿಂಗ್ಸ್ ಕೋರ್ಟ್​ನಲ್ಲಿ ಆಯೋಜಿಸಿರುವ 4 ದಿನಗಳ ಫರ್ನೀಚರ್ ಮೇಳಕ್ಕೆ ಜಿಟಿಜಿಟಿ ಮಳೆಯ ನಡುವೆಯೂ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಸತತ ಎರಡನೇ ದಿನವೂ ಜನರು ತಮ್ಮಿಷ್ಟದ ಪೀಠೋಪಕರಣಗಳನ್ನು ಖುಷಿಯಿಂದ ಖರೀದಿಸಿದರು.

    ವೈವಿರ್ ಈವೆಂಟ್ಸ್ ಆಂಡ್ ಎಕ್ಸಿಬಿಷನ್ ಸಂಸ್ಥೆಯು ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ ಮಾಧ್ಯಮ ಸಹಯೋಗದಲ್ಲಿ ‘ಪೀಠೋಪಕರಣ ಹಾಗೂ ಮನೆಯ ಒಳಾಂಗಣ ವಿನ್ಯಾಸ ಮೇಳ’ ಏರ್ಪಡಿಸಿದೆ. ಮನೆ ಮತ್ತು ಕಚೇರಿಗೆ ಅವಶ್ಯವಿರುವ ಪೀಠೋಪಕರಣಗಳನ್ನು ಖರೀದಿಸಲು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ತಮ್ಮ ಮನೆಯ ಒಳಾಂಗಣ ವಿನ್ಯಾಸಕ್ಕೆ ಬೇಕಾಗಿರುವ ಕುರ್ಚಿ, ಟೇಬಲ್, ಸೋಫಾ ಸೆಟ್, ಡೈನಿಂಗ್ ಟೇಬಲ್, ಮಂಚ, ಅಲಂಕಾರಿಕ ವಸ್ತುಗಳು ಹಾಗೂ ವಾಲ್​ಫ್ರೇಮ್ ಸೇರಿ ಇತರೆ ವಸ್ತುಗಳನ್ನು ಖರೀದಿಸಿದರು. ಒಂದೇ ಸೂರಿನಡಿ ಹಲವು ಬಗೆಯ ವಿನ್ಯಾಸ ಮತ್ತು ಬಣ್ಣಗಳನ್ನು ಒಳಗೊಂಡ ವಸ್ತುಗಳು ಕಡಿಮೆ ಮತ್ತು ಕೈಗೆಟುಕುವ ದರದಲ್ಲಿ ಎಲ್ಲ ವರ್ಗದ ಜನರಿಗೆ ದೊರೆಯುತ್ತಿರುವುದೇ ಜನಸ್ಪಂದನೆ ಪ್ರಮುಖ ಕಾರಣವಾಗಿದೆ.

    ಜನಮನ ಗೆದ್ದ ಫರ್ನೀಚರ್ ಶೋ: ಸಾವಿರಾರು ಗ್ರಾಹಕರ ಭೇಟಿ, ಅರಮನೆ ಮೈದಾನದ ಕಿಂಗ್ಸ್ ಕೋರ್ಟ್​ನಲ್ಲಿ ಆಯೋಜನೆ

    ಸಾಮಾನ್ಯ ಪ್ಲೈವುಡ್​ನಿಂದ ಹಿಡಿದು ಟೀಕ್​ವುಡ್, ರೋಸ್​ವುಡ್ ಸೇರಿ ಮನೆಯ ಆಕರ್ಷಣೆಯನ್ನು ಹೆಚ್ಚಿಸುವಂತಹ ಪೀಠೋಪಕರಣಗಳು ಗ್ರಾಹಕರ ಮನ ಸೆಳೆಯುತ್ತಿವೆ. ಸಾಂಪ್ರದಾಯಿಕ ಮನೆಗಳಿಂದ ಆಧುನಿಕ ಶೈಲಿಯ ಮನೆಗಳಿಗೆ ಹೊಂದಿಕೊಳ್ಳುವಂತಹ ಪೀಠೋಪಕರಣಗಳು ದೊರೆಯುತ್ತಿವೆ. ಕರ್ನಾಟಕ ಮಾತ್ರವಲ್ಲದೆ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶ ಮೂಲದವರು ಮಳಿಗೆ ತೆರೆದಿರುವುದರಿಂದ ಗ್ರಾಹಕರಿಗೆ ಹೆಚ್ಚಿನ ಆಯ್ಕೆ ಲಭ್ಯವಾಗುತ್ತಿವೆ.

    ವರ್ಕ್ ಫ್ರಂ ಹೋಮ್ ಜನರೇ ಹೆಚ್ಚು
    ಕರೊನಾ ಬಳಿಕ ಹೆಚ್ಚಿನ ಜನರು ಮನೆ ಯಿಂದಲೇ ಕೆಲಸ ಮಾಡುತ್ತಿದ್ದಾರೆ. ಆರಾಮವಾಗಿ ಕುಳಿತುಕೊಂಡು ಕೆಲಸ ಮಾಡಲು ಬೇಕಾಗಿರುವ ಕಂಪ್ಯೂಟರ್ ಟೇಬಲ್, ಹಾಸಿಗೆಗಳು ಮತ್ತು ಸೋಫಾಗಳನ್ನು ಜನರು ಖರೀದಿ ಮಾಡುತ್ತಿದ್ದಾರೆ. ಮೇಳ ಕುರಿತು ಆಭಿಪ್ರಾಯ ಹಂಚಿಕೊಂಡ ಗ್ರಾಹಕಿ ಪ್ರಿಯಾ, ನಾನು ಸಾಫ್ಟ್​ವೇರ್ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದೇವೆ. ವರ್ಕ್ ಫ್ರಂ ಹೋಮ್ ಇರುವುದರಿಂದ ಹೆಚ್ಚಿನ ಸಮಯವನ್ನು ಮನೆಯಲ್ಲಿಯೇ ಕಳೆಯುತ್ತೇನೆ. ಆಧುನಿಕ ಶೈಲಿಯ ಮತ್ತು ಮನೆಗೆ ಹೊಂದಿಕೊಳ್ಳುವಂತಹ ಪೀಠೋಪಕರಣಗಳ ಖರೀದಿಗೆ ಬಂದಿದ್ದೇವೆ. ನಾನಾ ಬಗೆಯ ಪೀಠೋಪಕರಣ ಆಕರ್ಷಿಸುತ್ತಿವೆ. ತುಂಬ ಕಲೆಕ್ಷನ್​ಗಳಿವೆ. ಇಷ್ಟೊಂದು ಬಗೆಯ ಕಲೆಕ್ಷನ್​ಗಳಿರುತ್ತವೆ ಎಂದು ಊಹಿಸಿರಲಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.

    ಹಲವು ವೈಶಿಷ್ಟ್ಯಗಳ ಸೋಫಾ
    ಮೇಳದಲ್ಲಿ ಟ್ರಾನ್ಸ್​ಫಾರ್ಮರ್, ಮಾಡ್ಯುಲರ್, ಅರ್ಧವೃತ್ತಾಕಾರ ಮತ್ತು ಕಾರ್ನರ್ ಮಾದರಿಯ ಸೋಫಾಗಳು, ಡಾಲ್ಪಿನ್, ಯುರೋಬುಕ್, ಟ್ಯಾಂಗೋ ಮಾದರಿಯ ಸೋಫಾಗಳು ದೊರೆಯುತ್ತಿವೆ. ಏಕ, ಡಬಲ್ ಮತ್ತು ಮೂರು ಆಸನಗಳ ಸೋಫಾಗಳು ಆಕರ್ಷಣೆಯಾಗಿವೆ.

    ಉತ್ತಮ ಗುಣಮಟ್ಟದ ಸೋಫಾ ಖರೀದಿಸಲು ಯೋಚಿಸುತ್ತಿದ್ದೆ. ಇದೇ ವೇಳೆಗೆ ಫರ್ನಿಚರ್ ಮೇಳ ಆಯೋಜನೆ ಮಾಡಿರುವುದು ಸಹಕಾರಿಯಾಯಿತು. ಇದಕ್ಕಾಗಿ ‘ವಿಜಯವಾಣಿ’ಗೆ ಧನ್ಯವಾದ ಅರ್ಪಿಸುತ್ತೇನೆ. ಸೋಫಾ ಖರೀದಿಸಿದ್ದಕ್ಕೆ ಖುಷಿಯಾಗಿದೆ.

    | ತ್ಯಾಗರಾಜ್ ವಿಜಯನಗರ

    ಬೆಂಗಳೂರು ಒಳ್ಳೆಯ ಅನುಭವ
    ಬೆಂಗಳೂರು ಜಾಗತಿಕ ನಗರಿಯಾಗಿರುವ ಕಾರಣ ವಿಭಿನ್ನ ಅಭಿರುಚಿ ಇರುವ ಗ್ರಾಹಕರನ್ನು ನೋಡುತ್ತಿದ್ದೇವೆ. ನಮ್ಮಲ್ಲಿರುವ ಟೀಕ್​ವುಡ್ ಮತ್ತು ರೋಸ್​ವುಡ್ ಪೀಠೋಪಕರಣಗಳಿಗೆ ಉತ್ತಮ ಬೇಡಿಕೆ ಬರುತ್ತಿದೆ. ಹೊಸ ಮಾದರಿಯ ವಿನ್ಯಾಸಗಳನ್ನು ಜನರು ಕೇಳುತ್ತಿದ್ದಾರೆ. ಇದರಿಂದ ಪೀಠೋಪಕರಣ ಕ್ಷೇತ್ರದಲ್ಲಿನ ಕಲಾತ್ಮಕತೆ ಹೆಚ್ಚಿಸಿಕೊಳ್ಳಲು ಸಹಕಾರಿಯಾಗಿದ್ದು, ಇದೊಂದು ಒಳ್ಳೆಯ ಅನುಭವವಾಗಿದೆ ಎಂದು ಕೇರಳದಿಂದ ಆಗಮಿಸಿರುವ ಪೋಷ ಫರ್ನೀಚರ್ಸ್​ನ ಜಗಲ್​ರಾಜ್ ಪ್ರತಿಕ್ರಿಯಿಸಿದರು.

    ಜನಮನ ಗೆದ್ದ ಫರ್ನೀಚರ್ ಶೋ: ಸಾವಿರಾರು ಗ್ರಾಹಕರ ಭೇಟಿ, ಅರಮನೆ ಮೈದಾನದ ಕಿಂಗ್ಸ್ ಕೋರ್ಟ್​ನಲ್ಲಿ ಆಯೋಜನೆ

    ಐಪಿಎಲ್​ನಲ್ಲಿ ಆಡುತ್ತೀರಾ? ವರದಿಗಾರನ ಪ್ರಶ್ನೆಗೆ ಬಾಬರ್​ ಅಜಮ್​ ಕೊಟ್ಟ ಪ್ರತಿಕ್ರಿಯೆ ವೈರಲ್​

    ಐಸಿಐಸಿಐ ಪ್ರುಡೆನ್ಶಿಯಲ್ ಫ್ರೀಡಂ SIP ಎಂದರೇನು? ಹೇಗೆ ಪ್ರಯೋಜನಕಾರಿ?

    ಕಸ ಗುಡಿಸಲು ಬಾಲಕಿಯರನ್ನು ಕರೆದು ಲೈಂಗಿಕ ಕಿರುಕುಳ ನೀಡುತ್ತಿದ್ದ ಮುಖ್ಯಶಿಕ್ಷಕನಿಗೆ ಬಿತ್ತು ಗೂಸಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts