More

    ರೆಸಲೂಷನ್​ 2019 ಹೀಗೆಲ್ಲಾ ಆಯ್ತಪ್ಪ: ತೂಕ ಬಿಟ್ಟು ಎಲ್ಲವೂ ಓಕೆ

    ಜನವರಿ ಎಂದರೆ ಹಲವರಿಗೆ ಅದು ‘ಸಾಧನೆ’ಯ ಮಾಸ. ಹೋದ ವರ್ಷ ಮಾಡದ ಏನಾದರೊಂದು ಸಾಧನೆ ಈ ವರ್ಷ ಮಾಡಬೇಕು ಎನ್ನುವ ಹಂಬಲ. ಕಳೆದ ವರ್ಷ ಇಂಥದ್ದೇ ರೆಸಲೂಷನ್ ಮಾಡಿ ಎಷ್ಟರಮಟ್ಟಿಗೆ ಸಕ್ಸಸ್ ಆಗಿದ್ದೀರಿ ಎಂದು ವಿಜಯವಾಣಿ ಕೇಳಿದ ಪ್ರಶ್ನೆಗೆ ಬಂದ ಸಾವಿರಾರು ಪತ್ರಗಳಲ್ಲಿ ಆಯ್ದ ಕೆಲವು ಪತ್ರಗಳ ಎರಡನೆಯ ಭಾಗ.

    ತೂಕ ಬಿಟ್ಟು ಎಲ್ಲವೂ ಓಕೆ

    ಪ್ರತಿವರ್ಷವೂ ನನ್ನ ಆಣೆ ಪ್ರಮಾಣ ಎಲ್ಲವೂ ಠುಸ್ ಆಗುತ್ತಿತ್ತು. ಆದರೆ ಕಳೆದ ವರ್ಷ ಹಾಗಾಗಬಾರದು ಎಂದು ನನ್ನ ಸಂಕಲ್ಪಗಳನ್ನು ಹಾಗೂ ಗುರಿಗಳನ್ನು ಡೈರಿಯಲ್ಲಿ ಬರೆದಿಟ್ಟು ಒಂದು ಇಡೀ ವರ್ಷದ ಪ್ಲಾ್ಯನ್ ಮಾಡಿದ್ದೆ. ಪ್ರತಿಯೊಂದು ಗುರಿಗೆ ಚಾಲೆಂಜ್ ಅನ್ನು ಇಟ್ಟುಕೊಂಡಿದ್ದೆ. ಅದರಂತೆ ವರ್ಷದಲ್ಲಿ 55 ಪುಸ್ತಕಗಳನ್ನು ಓದಿದೆ, 314 ಆರ್ಟ್ ವರ್ಕ್ ಮಾಡಿದ್ದೇನೆ, 94 ಹೊಸ ಅಡುಗೆಯನ್ನು ಕಲಿತಿದ್ದೇನೆ. ಇದೆಲ್ಲಾ ಓಕೆ ಆದರೆ ತೂಕ ಮಾತ್ರ ಕಡಿಮೆಯಾಗಿಲ್ಲ ಏಕೆ ಎನ್ನುವ ನೋವು ನನಗಿದೆ. ಏಕೆಂದರೆ ದೇಹದ ತೂಕ ಕಡಿಮೆ ಮಾಡುವ ನನ್ನ ಸಂಕಲ್ಪ ಮಾತ್ರ ವಿಫಲವಾಯಿತು. ಒಂದು ತಿಂಗಳು ಯೋಗ ಮಾಡಿ ಮತ್ತೆ ಬಿಟ್ಟುಬಿಟ್ಟೆ.

    |ಹರ್ಷಾ ಕಾಮತ್ ಕಾರ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts