More

    ಔಷಧ ಮಾರಾಟ ಪ್ರತಿನಿಗಳ ಬೇಡಿಕೆ ಈಡೇರಿಸಿ

    ರಾಯಚೂರು: ಔಷಧ ಮಾರಾಟ ಮತ್ತು ಪ್ರಚಾರ ಪ್ರತಿನಿಗಳ ರಕ್ಷಣೆಗೆ ಕಾಯ್ದೆ ರೂಪಿಸಬೇಕು ಹಾಗೂ ಕಾನೂನು ಬದ್ಧ ಕೆಲಸದ ನಿಯಮಗಳನ್ನು ರೂಪಿಸಬೇಕು ಎಂದು ಕರ್ನಾಟಕ ರಾಜ್ಯ ಔಷಧ ಮಾರಾಟ ಮತ್ತು ಪ್ರಚಾರ ಪ್ರತಿನಿಗಳ ಸಂಘ ಒತ್ತಾಯಿಸಿದೆ.
    ಸಂಘದ ನಿಯೋಗ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಸೋಮವಾರ ಮನವಿ ಸಲ್ಲಿಸಿ, ಔಷಧ ಮಾರಾಟ ಪ್ರತಿನಿಗಳ ಪ್ರವೇಶಕ್ಕೆ ಇರುವ ನಿರ್ಬಂಧಗಳನ್ನು ತೆಗೆಯಬೇಕು. ಆಸ್ಪತ್ರೆ ಮತ್ತು ಸಂಸ್ಥೆಗಳು ಅವರು ಕೆಲಸ ಮಾಡುವ ಹಕ್ಕನ್ನು ಖಚಿತಪಡಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
    ಔಷಧ ಮತ್ತು ವೈದ್ಯಕೀಯ ಸಾಧನಗಳ ಬೆಲೆ ಕಡಿಮೆ ಮಾಡಬೇಕು, ಸಾಮಗ್ರಿಗಳ ಮೇಲಿನ ಜಿಎಸ್‌ಟಿ ತೆಗೆದು ಹಾಕಬೇಕು. ಪ್ರತಿನಿಗಳ ಮೇಲಾಗುತ್ತಿರುವ ಕಿರುಕುಳ ತಡೆಯಬೇಕು. ಕೆಲಸದ ಸ್ಥಳಗಳಿಗೆ ಅಡೆತಡೆಯಿಲ್ಲದ ಪ್ರವೇಶ ಖಚಿತ ಪಡಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
    ನಿಯೋಗದಲ್ಲಿ ಸಂಘದ ಕಾರ್ಯದರ್ಶಿ ಆರ್.ಬಿ.ಪಾಟೀಲ್, ಪದಾಕಾರಿಗಳಾದ ಗುರುರಾಜ ದೇಸಾಯಿ, ರಾಜಶೇಖರ, ಅಮರೇಶ, ಇರ್ಷಾದ್, ಬಲರಾಮ್, ತೋತಯ್ಯ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts