ಕುಬೇರನ ಸೋಗಲ್ಲಿ ಕುಚೇಲನ ಕಲ್ಯಾಣ!

blank
  • ಗಂಗಾಧರ ಬೈರಾಪಟ್ಟಣ ರಾಮನಗರ

ಕರೊನಾ ಲಾಕ್​ಡೌನ್ ಸಂದರ್ಭದಲ್ಲಿನ ಕಟ್ಟುನಿಟ್ಟಿನ ನಿರ್ಬಂಧಗಳನ್ನೇ ಬಂಡವಾಳ ಮಾಡಿಕೊಂಡ ವಂಚಕನೊಬ್ಬ ಕೋಟ್ಯಧಿಪತಿ ಸೋಗಿನಲ್ಲಿ ಸುಳ್ಳುಗಳ ಸರಮಾಲೆ ಸೃಷ್ಟಿಸಿ, ನಂಬಿಸಿ ಯುವತಿಯೊಂದಿಗೆ ಮೂರನೇ ಮದುವೆಯಾಗಿ ವಂಚಿಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಲಾಕ್​ಡೌನ್ ಕಾರಣದಿಂದ ವರನ ಬಗ್ಗೆ ವಿಚಾರಿಸದೆ ಆತುರಾತುರವಾಗಿ ಮದುವೆ ಮಾಡಿದ ಪಾಲಕರೀಗ ಮಗಳ ಜತೆ ಕಣ್ಣೀರು ಹಾಕುವಂತಾಗಿದೆ.

ಮಾಗಡಿ-ರಾಮನಗರ ಗಡಿ ಗ್ರಾಮದ ಯುವತಿಯನ್ನು ಬೆಂಗಳೂರಿನಲ್ಲಿ ದೊಡ್ಡ ವ್ಯಾಪಾರ ಮಾಡುವ ಕೋಟ್ಯಧಿಪತಿ ಎಂದು ಹೇಳಿಕೊಂಡು ಯುವಕನೊಬ್ಬ ವರಿಸಿದ್ದಾನೆ. ಇವರ ವಿವಾಹ ಲಾಕ್​ಡೌನ್ ಸಮಯದಲ್ಲಿ ಕೆಲವೇ ಮಂದಿಯ ಸಮ್ಮುಖದಲ್ಲಿ ಮುಂಜಾನೆಯೇ ಆಗಿದೆ.

ಅತಿಥಿಯಿಂದ ಬಯಲು: ಕರೊನಾ ಲಾಕ್​ಡೌನ್ ನಿರ್ಬಂಧದ ಹಿನ್ನೆಲೆಯಲ್ಲಿ ಕೆಲವೇ ಮಂದಿಗೆ ಅವಕಾಶವಿದ್ದ ಮುಂಜಾನೆಯ ಮದುವೆಗೆ ರಾಮನಗರದ ಜಾಲಮಂಗಲದಿಂದ ವಧುವಿನ ಸಂಬಂಧಿಯೊಬ್ಬರು ಬಂದಿದ್ದರು. ವರನನ್ನು ನೋಡಿದ್ದೇ, ಈತನಿಗೆ ಈಗಾಗಲೇ ಮದುವೆ ಆಗಿದೆ, ಮತ್ತೊಂದು ಮದುವೆಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ನಂತರ ತಕ್ಷಣವೇ ತನ್ನೂರಿಗೆ ಹಿಂದಿರುಗಿ ವಧುವಿನ ತಂದೆಗೆ ಕರೆ ಮಾಡಿ, ಮಾಹಿತಿ ಹಂಚಿಕೊಂಡಿದ್ದಾರೆ. ಆಗ ವರನ ಮೂಲ ಹುಡುಕಿದಾಗ ಆತ ರಾಮನಗರ ತಾಲೂಕಿನವನೇ ಆಗಿದ್ದು, ತಾಲೂಕಿನ ಹಳ್ಳಿಯೊಂದರಲ್ಲಿ ಕೆಲವು ವರ್ಷಗಳ ಹಿಂದೆಯೇ ಮದುವೆ ಆಗಿರುವ ಬಗ್ಗೆ ಮಾಹಿತಿ ದೊರೆತಿದೆ. ಇದರಿಂದ ಆತಂಕಗೊಂಡ ವಧುವಿನ ಪಾಲಕರು ಬೆಂಗಳೂರಿಗೆ ತೆರಳಿದ್ದ ವಧು-ವರರನ್ನು ಕರೆಸಿಕೊಂಡು ಗ್ರಾಮಸ್ಥರ ಸಮ್ಮುಖದಲ್ಲಿ ವಿಚಾರಣೆ ನಡೆಸಿದ್ದಾರೆ.

TAGGED:
Share This Article

ವೆಜ್​ ಪ್ರಿಯರಿಗಾಗಿ ಸ್ಟ್ರೀಟ್ ಸ್ಟೈಲ್ ಮೊಮೊಸ್; ಮನೆಯಲ್ಲೆ ಮಾಡಲು ಇಲ್ಲಿದೆ ಸಿಂಪಲ್​ ವಿಧಾನ Recipe

ಸ್ಟ್ರೀಟ್​ ಫುಡ್​ ಯಾರಿಗೆ ಇಷ್ಟ ಇರುವುದಿಲ್ಲ ಹೇಳಿ, ಸಂಜೆಯಾದರೆ ಸಾಕು ಸ್ಟ್ರೀಟ್ ಫುಡ್ ತಿನ್ನಬೇಕು ಎನ್ನಿಸುತ್ತದೆ.…

ಹೀಲ್ಸ್ ಧರಿಸುವುದು ಎಷ್ಟು ಅಪಾಯಕಾರಿ ಗೊತ್ತೆ?; ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ | Health Tips

ಹೈಹೀಲ್ಸ್​​ ಬೂಟುಗಳನ್ನು ಧರಿಸುವುದು ಪರಿಪೂರ್ಣ ಭಂಗಿಯನ್ನು ನೀಡುತ್ತದೆ, ಎತ್ತರವಾಗಿ ಕಾಣುತ್ತದೆ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.…

ಶೀತದಲ್ಲಿಯೂ ಉತ್ತಮ ನಿದ್ರೆಗೆ ಈ ಟ್ರಿಕ್ಸ್​ ಫಾಲೋ ಮಾಡಿ; ನಿಮಗಾಗಿ ಹೆಲ್ತಿ ಟಿಪ್ಸ್​​ | Health Tips

ಕೆಲವರಿಗೆ ಚಳಿಗಾಲದಲ್ಲಿ ಹೆಚ್ಚು ನಿದ್ದೆ ಬಂದರೆ ಇನ್ನು ಕೆಲವರು ಕಣ್ಣುಗಳಿಂದ ನಿದ್ದೆ ಕಳೆದುಕೊಳ್ಳುತ್ತಾರೆ. ನಿದ್ರೆಯ ಮಾದರಿಯಲ್ಲಿ…