More

    ಯಲ್ಲಮ್ಮನ ಗುಡ್ಡದಲ್ಲಿ ಸಿದ್ಧತೆ ಆರಂಭ

    ಸವದತ್ತಿ: ಕೋವಿಡ್-19 ಹಾವಳಿ ಪರಿಣಾಮ ಲಾಕ್‌ಡೌನ್ ಘೋಷಣೆ ಹಿನ್ನೆಲೆಯಲ್ಲಿ ಸವದತ್ತಿಯ ಶ್ರೀಕ್ಷೇತ್ರ ಯಲ್ಲಮ್ಮನ ದೇವಸ್ಥಾನವು ಭಕ್ತರಿಲ್ಲದೆ ಭಣಗುಡುತ್ತಿದೆ. ರಾಜ್ಯ ಸರ್ಕಾರ ಜೂನ್ 1 ರಿಂದ ಲಾಕ್‌ಡೌನ್ ಇನ್ನಷ್ಟು ಸಡಿಲಗೊಳಿಸಿ ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ರಿಯಾಯಿತಿ ನೀಡಿ ದೇವರ ದರ್ಶನಕ್ಕೆ ಅನುವು ಮಾಡಿಕೊಡುವುದಾಗಿ ಚಿಂತನೆ ನಡೆಸಿದೆ ಎನ್ನಲಾಗಿದೆ. ಹಾಗಾಗಿ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ಸೇರಿ ಸಿದ್ಧತೆ ಭರದಿಂದ ನಡೆದಿದೆ.

    ದೇವಸ್ಥಾನದಲ್ಲಿ ಪ್ರತಿದಿನ ಕ್ರಿಮಿನಾಶಕ ಔಷಧ ಸಿಂಪಡಿಲಾಗುತ್ತಿದೆ. ಕ್ವಾರಂಟೈನ್ ವ್ಯಕ್ತಿಗಳಿಗೂ ಸೇರಿ ದೇವಸ್ಥಾನದಲ್ಲಿ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಇಲ್ಲಿಯವರೆಗೆ 21 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. 270 ಅರ್ಚಕರಿಗೆ ಆಹಾರದ ಕಿಟ್ ನೀಡಲಾಗಿದೆ. ಇತ್ತೀಚೆಗೆ ಲಾಕ್‌ಡೌನ್ ಕೊಂಚ ಸಡಿಲುಗೊಳಿಸಿದ್ದರಿಂದ ಅನೇಕ ಭಕ್ತರು, ಮದುವೆಯಾದ ನವಜೋಡಿಗಳು, ಪಾರಂಪರಿಕ ಭಕ್ತರು ದೇವಸ್ಥಾನದ ದ್ವಾರದಲ್ಲಿಯೇ ದೇವಿಗೆ ಕಾಯಿ ಒಡೆದು, ಕರ್ಪೂರ ಬೆಳಗಿ, ಕುಂಕುಮ-ಭಂಡಾರ, ನೈವೇದ್ಯ ಅರ್ಪಿಸುತ್ತಿದ್ದಾರೆ. ಸವದತ್ತಿಯ ಶ್ರೀಕ್ಷೇತ್ರ ಯಲ್ಲಮ್ಮನ ದರ್ಶನಕ್ಕೆ ಕರ್ನಾಟಕ ಸೇರಿ ಹಲವು ರಾಜ್ಯಗಳಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ದೇವಸ್ಥಾನದ ಪ್ರವೇಶ ನಿರ್ಬಂಧಿಸಿದ್ದರಿಂದ ಅಂದಾಜು 5 ಕೋಟಿ ನಷ್ಟವಾಗಿದೆ. ಭಕ್ತರ ಸಂಖ್ಯೆಯು ಇಳಿಮುಖವಾಗಿದ್ದು, ಹೊಟ್ಟೆ ಪಾಡಿಗಾಗಿ ದೇವಸ್ಥಾನದಲ್ಲಿ ವ್ಯಾಪಾರ-ವಹಿವಾಟು ಮಾಡಿಕೊಂಡವರ ಎಲ್ಲ ಅಂಗಡಿ-ಮುಂಗಟ್ಟುಗಳು ಬಂದ್ ಆಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ.

    ದೇವಸ್ಥಾನದ ಪ್ರವೇಶಕ್ಕೆ ಪೂರ್ವಭಾವಿ ತಯಾರಿ ನಡೆಸಲಾಗಿದೆ. ಆಗಮಿಸುವ ಭಕ್ತರನ್ನು ನಿಯಂತ್ರಿಸಲು ಯೋಜನೆ ರೂಪಿಸಲಾಗುತ್ತಿದೆ. ದೇವಸ್ಥಾನಕ್ಕೆ ಮಹಾರಾಷ್ಟ್ರ ಸೇರಿ ಹೊರ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸುವುದರಿಂದ ಅಂತರ ಕಾಯ್ದುಕೊಳ್ಳುವುದು ಕಷ್ಟವಾಗಬಹುದು. ಹೊರರಾಜ್ಯಗಳಲ್ಲಿ ಕರೊನಾ ವೈರಸ್ ಹಾವಳಿ ಹೆಚ್ಚಾಗಿದ್ದು, ಗುಡ್ಡದಲ್ಲಿನ ಸ್ಥಳೀಯರಿಗೆ, ಸಿಬ್ಬಂದಿಗೆ ಆತಂಕ ಸೃಷ್ಟಿಯಾಗುತ್ತದೆ. ಹಾಗಾಗಿ ಇನ್ನಷ್ಟು ದಿನ ಹೊರ ರಾಜ್ಯಗಳಿಂದ ಬರುವವರನ್ನು ನಿಬರ್ಂಧಿಸುವುದು ಒಳ್ಳೆಯದು.
    | ರವಿ ಕೊಟಾರಗಸ್ತಿ ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts