ಇಟಗಿ: ಮಠಗಳು ಯುವಜನರನ್ನು ಸನ್ಮಾರ್ಗದಲ್ಲಿ ಸಾಗುವಂತೆ ಮಾಡುತ್ತವೆ ಎಂದು ಬೆಳಗಾವಿ ಕೆಎಲ್‌ಇ ಕಂಕಣವಾಡಿ ಆಯುರ್ವೇದ ಕಾಲೇಜಿನ ಶರೀರ ರಚನಾಶಾಸ ವಿಭಾಗದ ಮುಖ್ಯಸ್ಥ ಡಾ. ಮಹಾಂತೇಶ ರಾಮಣ್ಣವರ ಹೇಳಿದರು.
ಸಮೀಪದ ಹಿರೇಮುನವಳ್ಳಿಯ ಸಿದ್ಧ ಶಿವಯೋಗಿ ಶಾಂಡಿಲೇಶ್ವರ ಮಠದ 26ನೇ ಜಾತ್ರೆ ಹಾಗೂ ಶ್ರೀ ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ 11ನೇ ವರ್ಷದ ಗುರುಪಟ್ಟಾಧಿಕಾರ ಸಮಾರಂಭದ ನಿಮಿತ್ತ ‘ಅಭಿವೃದ್ಧಿ ಪಥದಲ್ಲಿ ಯುವ ಜನತೆಯ ಕರ್ತವ್ಯ’ ಕುರಿತ ಗುರುವಾರ ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಭೂತರಾಮನಹಟ್ಟಿಯ ಶಿವಸಿದ್ಧ ಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಪಾರಿಶ್ವಾಡದ ಗುರುಸಿದ್ಧಯ್ಯ ಕಲ್ಮಠ ಮಾತನಾಡಿದರು. ಶಂಭುಲಿಂಗ ಶಿವಾಚಾರ್ಯ ಸ್ವಾಮೀಜಿ, ಅವರೋಳ್ಳಿ-ಬಿಳಕಿಯ ಚನ್ನಬಸವ ದೇವರು, ತೋಲಗಿ ಅದೃಶ್ಯಾನಂದ ಶಿವಾಚಾರ್ಯ ಸ್ವಾಮೀಜಿ, ತುರುಮರಿಯ ಶಾಂತಯ್ಯ ಸ್ವಾಮೀಜಿ, ಬಸವರಾಜ ಯಳ್ಳೂರ, ಮುಸ್ತ್ ರಾಸ, ಸಿರಿಯಾಳ ಪೂಜಾರ, ಉಳವಯ್ಯ ಪೂಜಾರ, ಅರವಿಂದ ಮಕಾಟೆ, ಆಯಿಷಾ ಸಯ್ಯದ, ಮಹಾಂತೇಶ ಪೂಜಾರ ಇತರರಿದ್ದರು.