More

    ಗುರುವಿನ ಸ್ಮರಣೆಯಿಂದ ಜೀವನ ಸಾರ್ಥಕ

    ಅರಟಾಳ: ಜೀವನದಲ್ಲಿ ಗುರು ಮುಖ್ಯವಾಗಿದ್ದು, ಆತನಲ್ಲಿ ಶ್ರೇಷ್ಠವಾದ ಶಕ್ತಿಯಿದೆ ಎಂದು ಇಂಚಗೇರಿ ಮಠದ ಸದ್ಗುರು ರೇವಣ್ಣಸಿದ್ಧೇಶ್ವರ ಮಹಾರಾಜ ಹೇಳಿದರು. ಸಮೀಪದ ಇಂಚಗೇರಿ ಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ದತ್ತ ಜಯಂತಿ ಹಾಗೂ ಛಟ್ಟಿ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಗುರು ಹಾಕಿಕೊಟ್ಟ ದಾರಿಯಲ್ಲಿ ನಡೆದು ಪುಣ್ಯ ಸಂಪಾದಿಸಬೇಕು. ಸತತ ಪ್ರಯತ್ನದಿಂದ ಸಾಮಾನ್ಯನೂ ಅಧ್ಯಾತ್ಮ ಸಾಧಕನಾಗುತ್ತಾನೆ. ಗುರುವಿನ ಉಪದೇಶ ಸ್ಮರಣೆಯಿಂದ ಜೀವನ ಸಾರ್ಥಕವಾಗುತ್ತದೆ ಎಂದರು.

    ಶಂಕರಪ್ಪ ಮಹಾರಾಜರು ಮಾತನಾಡಿ, ಅನಾಥರಿಗೆ ಆಶ್ರಯ ನೀಡಿ ಜಗತ್ತಿಗೆ ದೇವರು ಎನ್ನಿಸಿದ ಇಂಚಗೇರಿ ಮಾಧವಾನಂದರು ಕಲಿಯುಗದ ನಿಜದೇವರು. 12ನೇ ಶತಮಾನದ ಬಸವಾದಿ ಶರಣರು ಹಾಕಿಕೊಟ್ಟ ಜಾತ್ಯತೀತ ಆಶಯಗಳು ಮತ್ತು ಸಿದ್ಧಾಂತಗಳನ್ನು ಮುಂದುವರಿಸಿಕೊಂಡು ಬರುತ್ತಿರುವ ಏಕೈಕ ಮಠ ಇಂಚಗೇರಿ ಮಠ. ಸಾಮಾಜಿಕ ಹಾಗೂ ಧಾರ್ಮಿಕವಾಗಿ ಇಂಚಗೇರಿ ಮಠದ ಕಾರ್ಯ ಅವಿಸ್ಮರಣೀಯ ಎಂದರು.

    ತುಕಾರಾಮ ಮಹಾರಾಜ, ನಾಮದೇವ ಮಹಾರಾಜರು, ಸಂಗಪ್ಪ ಮಾಸ್ಟರ, ಮೈಗೂರ ಕಲ್ಲಪ್ಪ ಮಹಾರಾಜರು, ಶಶಿಕಾಂತ ಖೋಜಾನಟ್ಟಿ, ಗಿರೀಶ ಶಿಂಧೆ, ರಾಮಣ್ಣ ಮಹಾರಾಜರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts