More

    ಕಲಾಪದಿಂದ ವಕೀಲರು ದೂರ

    ಬೆಳಗಾವಿ: ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಬೆಳಗಾವಿ ಪೀಠದ ನ್ಯಾಯಮೂರ್ತಿ ನಾರಾಯಣಸ್ವಾಮಿ ಅವರ ದಿಢೀರ್ ವರ್ಗಾವಣೆ ವಿರೋಧಿಸಿ ವಕೀಲರು ಗುರುವಾರದಂದು ಕಲಾಪದಿಂದ ದೂರ ಉಳಿದರು.

    ಬಳಿಕ ಜಿಲ್ಲಾ ನ್ಯಾಯಾಲಯ ಆವರಣದ ಬೆಳಗಾವಿ ವಕೀಲರ ಸಂಘದ ಸಭಾಭವನದಲ್ಲಿ ತುರ್ತು ಸಭೆ ನಡೆಸಿ, ನಾರಾಯಣ ಸ್ವಾಮಿ ಯವರ ವರ್ಗಾವಣೆ ರದ್ದು ಪಡಿಸುವುದು, ಕೆಎಟಿ ಹೋರಾಟಗಾರ ವಕೀಲರ ಮೇಲಿರುವ ಪ್ರಕರಣ ಕೈ ಬಿಡಬೇಕೆಂದು ಒತ್ತಡ ಹಾಕುವುದರ ಬಗ್ಗೆ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಕೆಎಟಿ ನ್ಯಾಯಾಧೀಶರ ವರ್ಗಾವಣೆ ರದ್ದು ಪಡಿಸುವಂತೆ ಮನವಿ ಮಾಡುವ ಬಗ್ಗೆಯೂ ನಿರ್ಣಯ ಕೈಗೊಂಡರು.

    ವಕೀಲರ ಅಸಮಾಧಾನ: ನ್ಯಾ. ನಾರಾಯಣಸ್ವಾಮಿ ಅವರನ್ನು ಸಕಾರಣವಿಲ್ಲದೆ ಕಲಬುರ್ಗಿಗೆ ವರ್ಗಾವಣೆ ಮಾಡಿರುವುದು ಖಂಡನೀಯ. ನಾರಾಯಣಸ್ವಾಮಿ ಅವರು ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿಯ ಪ್ರಕರಣಗಳನ್ನು ಸುಲಲಿತವಾಗಿ ನಿರ್ವಹಿಸುತ್ತಿದ್ದರು. ಹಿರಿ- ಕಿರಿಯ ವಕೀಲರ ಪ್ರೀತಿ, ವಿಶ್ವಾಸ ಗಳಿಸಿದ್ದರು. ಅವರ ವರ್ಗಾವಣೆಯಿಂದ ವಕೀಲರ ಸಂಘದ ಸದಸ್ಯರಲ್ಲಿ ಅಸಮಾಧಾನ ಉಂಟಾಗಿದೆ. ಸರ್ಕಾರ, ಅವರ ವರ್ಗಾವಣೆ ರದ್ದು ಮಾಡಬೇಕು. ಕಲಬುರ್ಗಿ ವಕೀಲರ ಮನವೊಲಿಸಿ ನ್ಯಾಯಮೂರ್ತಿ ನಾರಾಯಣಸ್ವಾಮಿ ಅವರನ್ನು ಬೆಳಗಾವಿಯಲ್ಲಿಯೇ ಉಳಿಸಬೇಕು ಎಂದು ಹಿರಿಯ ವಕೀಲರು ಒತ್ತಾಯಿಸಿದರು.

    ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಎ.ಜಿ. ಮುಳವಾಡಮಠ, ಉಪಾಧ್ಯಕ್ಷರಾದ ಸಿ.ಟಿ. ಮಳಗಿ, ಗಜಾನನ ಕೆ. ಪಾಟೀಲ, ಕಾರ್ಯದರ್ಶಿ ಆರ್.ಸಿ. ಪಾಟೀಲ ಸುತಗಟ್ಟಿ, ಜಂಟಿ ಕಾರ್ಯದರ್ಶಿ ಶಿವಪುತ್ರ ಎನ್. ಫಾತ್ಕಲ್, ಆಡಳಿತ ಮಂಡಳಿಯ ಕಮಲೇಶ ಬಿ.ಮಾಯನ್ನಾಚೆ, ನಿತಿನ್ ಗಂಗಾಯಿ, ಪ್ರಭಾಕರ ಪವಾರ, ರಮೇಶ ಗುಡ್ಡೋಡಗಿ, ಬಸವರಾಜ ಬಿ. ಓಸಿ, ಸರಿತಾ ಶ್ರೇಯಕರ, ಸಿ.ಎನ್. ಶಿರೂರ, ಬಿ.ಜೆ. ಜಂಗಾಯಿ, ಎಂ.ಎನ್. ಕುಲಕರ್ಣಿ, ಎ.ಜೆ. ಕುಲಕರ್ಣಿ, ಆರ್.ಜಿ. ಪಾಟೀಲ, ವಕೀಲರ ಸಂಘದ ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts