More

    ರಾಜ್ಯದಲ್ಲಿ ಜು.27ರಿಂದ ಮತ್ತೆ ಭಾರೀ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

    ಬೆಂಗಳೂರು: ಇನ್ನೆರಡು ದಿನಗಳಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸತತ ಎರಡು ವಾರಗಳ ಬಳಿಕ  ಬಿಡುವು ನೀಡಿದ್ದ ಮಳೆಯಿಂದ ಈಗಷ್ಟೇ ಜನರು ನಿರಾಳರಾಗಿದ್ದರು. ಈ ಬೆನ್ನಲ್ಲೇ ಮತ್ತೆ ಮಳೆ ಮುನ್ಸೂಚನೆ ನೀಡಲಾಗಿದೆ.

    ರಾಜ್ಯದಲ್ಲಿ ಜು.27ರಿಂದ ಮಳೆ ಜೋರಾಗಲಿದ್ದು, ದಕ್ಷಿಣ ಒಳನಾಡು ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಜು.27ರಿಂದ ಮುಂದಿನ 3 ದಿನ ನಿರಂತರ ಮಳೆಯಾಗಲಿದ ಎಂದು ತಿಳಿಸಿದೆ.

    ಈ ಬಾರಿ ನಿರೀಕ್ಷಿತಕ್ಕೂ ಅಧಿಕ ಮಳೆಯಾಗಿದ್ದರೂ, ಕೆಲವೆಡೆ ಮಳೆ ಕೊರತೆಯೂ ಉಂಟಾಗಿದೆ. ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿಯೇ ಉಂಟಾಗಿತ್ತು, ಇದರಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಕೆಲವೆಡೆ ಸಂಪರ್ಕ ಕಡಿತಗೊಂಡಿದ್ದಲ್ಲದೇ, ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿತ್ತು.

    ಈ ವಾರದಿಂದ ಮಳೆ ಸ್ವಲ್ಪ ಬಿಡುವುದು ನೀಢಿತ್ತು, ಈ ನಡುವೆ ಮತ್ತೆ ಭಾರೀ ಮಳೆಯಾಗಲಿದೆ ಎನ್ನುವ ಮೂಲಕ ಹವಾಮಾನ ಇಲಾಖೆ ಮತ್ತೆ ಕಟ್ಟೆಚ್ಚರ ವಹಿಸಲು ಸೂಚಿಸಿದೆ. ಇನ್ನು ಉತ್ತರ ಒಳನಾಡು ಹಾಗೂ ಕರಾವಳಿಯಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹೇಳಿದೆ.

    ಮಲ್ಪೆಯಲ್ಲಿ ಗಾಳಕ್ಕೆ ಸಿಕ್ತು ಭರ್ಜರಿ ಮೀನು! ಮಾರುಕಟ್ಟೆಯಲ್ಲಿ ಈ ಮೀನಿಗಿದೆ ಭಾರೀ ಬೇಡಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts