More

    ದಶಕವಾದರೂ ನಿರ್ಮಾಣವಾಗದ ಹಾಪ್ಕಾಮ್ಸ್

    ಲಕ್ಷ್ಮೀಕಾಂತ್ ಕುಲಕರ್ಣಿ ಯಾದಗಿರಿ
    ಕರೊನಾ ಹೊಡೆತಕ್ಕೆ ನಲುಗಿದ ಗಿರಿ ಜಿಲ್ಲೆಯಲ್ಲಿ ರೈತರು ಹುಲುಸಾಗಿ ಬೆಳೆದಿದ್ದ ಹಣ್ಣುಗಳನ್ನು ಮಾರಾಟ ಮಾಡಲಾಗದೆ ಇಕ್ಕಟ್ಟಿಗೆ ಸಿಲುಕಿದ್ದನ್ನು ಅರಿತ ಶಾಸಕ ವೆಂಕಟರಡ್ಡಿ ಮುದ್ನಾಳ್ ಸೋಮವಾರ ಸುಮಾರು 300 ಕ್ವಿಂಟಾಲ್ ಕಲ್ಲಂಗಡಿ ಖರೀದಿಸಿ ಅನ್ನದಾತರ ಒಂದಿಷ್ಟು ಸಂಕಷ್ಟ ನಿವಾರಿಸಿದ್ದಾರೆ. ಆದರೆ ಯಾದಗಿರಿ ಸ್ವತಂತ್ರ ಜಿಲ್ಲೆಯಾಗಿ ದಶಕವಾದರೂ ಒಂದೇ ಒಂದು ಹಾಪ್ಕಾಮ್ಸ್ ಮಳಿಗೆ ತಲೆ ಎತ್ತದಿರುವುದು ರೈತರಲ್ಲಿ ಅಸಮಧಾನ ಮೂಡಿಸಿದೆ.

    ಹಾಪ್ಕಾಮ್ಸ್ ಸಂಸ್ಥೆ ತೋಟಗಾರಿಕೆ ಇಲಾಖೆ ಒಂದು ಅಂಗಸಂಸ್ಥೆ. ರಾಜ್ಯದ ಪ್ರತಿ ಜಿಲ್ಲೆಯಲ್ಲಿ ರೈತರಿಂದ ಹಣ್ಣು ಮತ್ತು ತರಕಾರಿ ಖರೀದಿಸಿ ಗ್ರಾಹಕರಿಗೆ ಮಾರಾಟ ಮಾಡುತ್ತಿದೆ. ಆದರೆ ಯಾದಗಿರಿಯಲ್ಲಿ ಮಾತ್ರ ಇದುವರೆಗೆ ಮಳಿಗೆ ನಿಮರ್ಿಸುವುದಿರಲಿ, ಹಾಪ್ಕಾಮ್ಸ್ ರಚನೆಗೂ ಸರ್ಕಾರ ಆಸಕ್ತಿ ತೋರದಿರುವುದು ವಿಪರ್ಯಾಸ.

    ಜಿಲ್ಲೆಯ 3500 ಹೆಕ್ಟೇರ್ನಲ್ಲಿ ರೈತರು ಕಲ್ಲಂಗಡಿ, ಪಪ್ಪಾಯಿ, ಸಪೋಟಾ, ದಾಳಿಂಬೆ, ಪೇರಲ, ಮಾವು ಹಾಗೂ ಟೊಮ್ಯಾಟೊ, ಲಿಂಬೆ, ನುಗ್ಗೆಕಾಯಿ ಮತ್ತಿತರ ತರಕಾರಿ ಬೆಳೆಯುತ್ತಿದ್ದಾರೆ. ಆದರೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ದಲ್ಲಾಳಿಗಳು ನಿಗದಿಪಡಿಸಿದ ದರಕ್ಕೆ ಮಾರಾಟ ಮಾಡುವ ಇಕ್ಕಟ್ಟಿನ ಸ್ಥಿತಿಗೆ ಸಿಲುಕಿದ್ದಾರೆ.
    ಸದ್ಯ ಕರೊನಾ ವೈರಸ್ನಿಂದಾಗಿ ಇಡೀ ದೇಶ ಲಾಕ್ಡೌನ್ನಲ್ಲಿ ಇರುವ ಕಾರಣ ಜಿಲ್ಲೆ ರೈತರು ಬೆಳೆದ ತೋಟಗಾರಿಕೆ ಬೆಳೆಗಳು ಕಣ್ಣೆದುರೇ ಒಣಗಿ ನಿಂತಿವೆ. ಇದರಿಂದ ರೈತರು ಹಣ್ಣುಗಳನ್ನು ತಮ್ಮ ಕೈಯಾರೆ ನಾಶಪಡಿಸುತ್ತಿದ್ದು, ಕೆಲ ದಾನಿಗಳು ಹಾಗೂ ಶಾಸಕರು ಒಂದಿಷ್ಟು ರೈತರ ನೆರವಿಗೆ ಧಾವಿಸಿದ್ದಾರೆ. ಆದರೆ ಇಡೀ ಜಿಲ್ಲೆಯಲ್ಲಿ ಬೆಳೆದ ಹಣ್ಣು, ತರಕಾರಿ ಭೂಮಿಯಲ್ಲಿ ಕೊಳೆಯಲಾರಂಭಿಸಿದೆ.

    ಇಂಥ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಹಾಪ್ಕಾಮ್ಸ್ ಮಳಿಗೆಗಳಿದ್ದರೆ ತೋಟಕಾರಿಕೆ ಬೆಳೆಗಳನ್ನು ನೇರವಾಗಿ ಖರೀದಿಸಲು ಅನುಕೂಲವಾಗುತ್ತಿತ್ತು. ಆದರೆ ಯಾದಗಿರಿ ಜಿಲ್ಲೆಯಾಗಿ 10 ವರ್ಷವಾದರೂ ಹಾಪ್ಕಾಮ್ಸ್ ಮಳಿಗೆ ನಿರ್ಮಾಣವಾಗಿಲ್ಲ. ಈ ಬಗ್ಗೆ ತೋಟಕಾರಿಕೆ ಇಲಾಖೆ ತಲೆಕೆಡಿಸಿಕೊಳ್ಳದಿರುವುದು ವರ್ತಮಾನದ ದುರಂತ.

    ಆರು ತಿಂಗಳ ಹಿಂದಷ್ಟೆ ಭಯಂಕರ ನೆರೆಗೆ ತುತ್ತಾದ ಜಿಲ್ಲೆ ರೈತರು ಇದೀಗ ಕರೊನಾ ವೈರಸ್ ಹೊಡೆತಕ್ಕೆ ಸಿಲುಕಿ ಹೈರಾಣಾಗಿದ್ದಾರೆ. ತಾವು ಬೆಳೆದ ಬೆಳೆಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಕಂಗಾಲಾಗಿದ್ದು, ಇನ್ನಾದರೂ ಸಕರ್ಾರ ಜಿಲ್ಲೆಯಲ್ಲಿ ಹಾಪ್ಕಾಮ್ಸ್ ಮಳಿಗೆ ನಿಮರ್ಾಣಕ್ಕೆ ಮುಂದಾಗಬೇಕು ಎಂಬುದು ರೈತರ ಒತ್ತಾಸೆಯಾಗಿದೆ.

    ಕರೊನಾ ವೈರಸ್ನಿಂದಾಗಿ ಜಿಲ್ಲೆಯಲ್ಲಿ ಲಾಕ್ಡೌನ್ ಜಾರಿಯಲ್ಲಿ ಇರುವುದರಿಂದ ಗ್ರಾಮೀಣ ರೈತರು ತಮ್ಮ ಜಮೀನಿನಲ್ಲಿ ಬೆಳೆದ ಕಲ್ಲಂಗಡಿ ನಾಶವಾಗುತ್ತಿರುವುದನ್ನು ಗಮನಿಸಿ ಖರೀದಿಸಿದ್ದೇನೆ. ನಗರದ 31 ವಾಡರ್್ ಸದಸ್ಯರ ಮೂಲಕ ಅಂದಾಜು 300 ಕ್ವಿಂಟಾಲ್ ಕಲ್ಲಂಗಡಿ ಖರೀದಿಸಿ ಬಡ ಜನರಿಗೆ ಉಚಿತವಾಗಿ ವಿತರಿಸುವಂತೆ ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಹಾಪ್ಕಾಮ್ಸ್ ಮಳಿಗೆ ನಿಮರ್ಾಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    | ವೆಂಕಟರಡ್ಡಿ ಮುದ್ನಾಳ್ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts