More

    ಗ್ರಾಹಕರಿಂದ ಹೆಚ್ಚು ಹಣ ಪಡೆದರೆ ಕ್ರಮ

    ಅರಟಾಳ: ಕರೊನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಏ. 14ರ ವರೆಗೆ ಲಾಕ್‌ಡೌನ್ ಘೋಷಿಸಿದೆ. ಪ್ರತಿಯೊಬ್ಬರೂ ಈ ಆದೇಶ ಪಾಲಿಸಬೇಕು. ಅಥಣಿ ತಾಲೂಕಿಗೆ ಹೊರಗಿನಿಂದ ಸಾವಿರಕ್ಕೂ ಅಧಿಕ ಜನರು ಬಂದಿದ್ದಾರೆ. ಅಧಿಕಾರಿಗಳು ಅವರನ್ನು ಗುರುತಿಸಿ ವೈದ್ಯಕೀಯ ತಪಾಸಣೆಗೆ ಒಳಪಡಿಸಬೇಕು ಎಂದು ತಾಪಂ ಇಒ ರವೀಂದ್ರ ಬಂಗಾರೆಪ್ಪನವರ ಸೂಚಿಸಿದರು.

    ಬುಧವಾರ ಗ್ರಾಮದಲ್ಲಿ ಕರೊನಾ ವೈರಸ್ ಹರಡುವಿಕೆ ತಡೆಯಲು ರಚಿಸಿದ ಗ್ರಾಮದ ಕಾವಲು ಪಡೆಯ ಸ್ವಯಂ ಸೇವಕರನ್ನು ಉದ್ದೇಶಿಸಿ ಮಾತನಾಡಿ, ನ್ಯಾಯಬೆಲೆ, ಕಿರಾಣಿ ಅಂಗಡಿಗಳು, ಬ್ಯಾಂಕ್‌ಗಳಿಗೆ ಜನರು ಬಂದಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಸೂಚಿಸಬೇಕು.

    ಪ್ರತಿಯೊಬ್ಬರೂ ಮಾಸ್ಕ್ ಧರಿಸಬೇಕು. ಸೇವೆ ಹೆಸರಿನಲ್ಲಿ ವ್ಯಾಪಾರಿಗಳು ಜನರಿಂದ ದುಪ್ಪಟ್ಟು ಹಣ ಪಡೆಯುತ್ತಿದ್ದರೆ ಅಂಥವರ ವಿರುದ್ಧ ಕ್ರಮ ಜರುಗಿಸಬೇಕು. ತಕ್ಷಣ ಅವರ ಲೈಸನ್ಸ್ ರದ್ದು ಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಪಿಡಿಒ ಎ.ಜಿ. ಎಡಕೆ ಮಾತನಾಡಿದರು.

    ಗ್ರಾಪಂ ಕಾರ್ಯದರ್ಶಿ ಜಿತೇಂದ್ರ ಗದಾಡೆ, ತಾಪಂ ನರೇಗಾ ಸಹಾಯಕ ನಿರ್ದೇಶಕ ಅರುಣ ಮಾಚಕನೂರ, ತಾಪಂ ಸಿಬ್ಬಂದಿ ವಿಶ್ವನಾಥ ಮೋರೆ, ಆರೋಗ್ಯ ಇಲಾಖೆ ಎಎಂಎನ್ ಎನ್. ಶಾಲಿನಿ, ಎಂ.ಪಿ. ಪಾಟೀಲ, ಅಂಗನವಾಡಿ ಕಾರ್ಯಕರ್ತೆ ಶಾಂತಾ ಕಟ್ಟಿಮನಿ, ಮಾಲಾ ಕಾಂಬಳೆ, ದಾಕ್ಷಾಯಣಿ ಕಾಂಬಳೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts