More

    ಬಾಂದಾರನಿಂದ ರೈತರಿಗೆ ಅನುಕೂಲ – ಶ್ರೀಮಂತ ಪಾಟೀಲ

    ಸಂಬರಗಿ: ಗಡಿಭಾಗದ ಅಗ್ರಾಣಿ ನದಿಯಲ್ಲಿ 23 ಬಾಂದಾರ ನಿರ್ಮಾಣ ಮಾಡಲಾಗಿದ್ದು, ಇದರಿಂದ ರೈತರಿಗೆ ಅನುಕೂಲವಾಗಲಿದೆ ಎಂದು ಜವಳಿ ಹಾಗೂ ಅಲ್ಪಸಂಖ್ಯಾತ ಸಚಿವ ಶ್ರೀಮಂತ ಪಾಟೀಲ ಹೇಳಿದ್ದಾರೆ.

    ಸಮೀಪದ ಶಿವನೂರ ಗ್ರಾಮದಲ್ಲಿ 3.50 ಕೋಟಿ ರೂ. ವೆಚ್ಚದ ಬ್ರಿಡ್ಜ್ ಕಂ ಬಾಂದಾರಗೆ ಭಾನುವಾರ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಬ್ರಿಡ್ಜ್ ಕಂ ಬಾಂದಾರನಲ್ಲಿ ಸುಮಾರು 2 ಕಿ.ಮೀ. ಹಿನ್ನೀರು ನಿಂತು ಸುಮಾರು 1133 ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಅಗ್ರಾಣಿ ನದಿ 45 ಕಿ.ಮೀ. ಹರಿದಿದ್ದು, ನದಿ ಪುನರುಜ್ಜೀವನಕ್ಕೆ 51 ಕೋಟಿ ರೂ. ಅನುದಾನ ಶೀಘ್ರ ಬಿಡುಗಡೆ ಮಾಡಲಾಗುವುದು ಎಂದರು. ಕಾಗವಾಡ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷಾತೀತವಾಗಿ ಅಭಿವೃದ್ಧಿ ಕೈಗೊಂಡಿದ್ದೇನೆ.

    ಕೆಲವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ನನ್ನ ಬಳಿ ಯಾರೇ ಬಂದರೂ ಅವರ ಕೆಲಸ ಮಾಡುತ್ತೇನೆ ಎಂದು ಅವರು ಸ್ಪಷ್ಟಪಡಿಸಿದರು. ಆರ್.ಎಂ.ಪಾಟೀಲ, ಮುರುಗೆಪ್ಪ ಮಗದುಮ್ಮ, ವಿನಾಯಕ ಬಾಗಡಿ, ಸಂತೋಷ ಗಾಣಿಗೇರ, ಎಂ.ಬಿ.ಮಾಕಾನಿ, ವೀರಣ್ಣ ವಾಲಿ, ಅಬ್ದುಲ್ ಮುಲ್ಲಾ, ವಿಶ್ವನಾಥ ದೇವಮಾನೆ, ಅಣ್ಣಾಸಾಬ ಮಿಸಾಳ, ಪಂಡಿತ್ ಕಾಂಬಳೆ, ವಿಜಯ ಆಜೂರ, ತಮ್ಮಣ್ಣ ಪೂಜಾರಿ, ಅಪ್ಪಾಸಾಬ ಕಿರಣಗಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts