More

  35 ವರ್ಷದಿಂದ ವಾಸವಿದ್ದ ಜಾಗ ಮಾರಾಟ: ನ್ಯಾಯಕ್ಕಾಗಿ ಕಂದಾಯ ಅಧಿಕಾರಿಗಳ ಮೊರೆ

  ಸಿರಿಗೇರಿ: ಗ್ರಾಮ ಪಂಚಾಯಿತಿಯಲ್ಲಿ ಡಿಮ್ಯಾಂಡ್ ಆಗಿರುವ ಜಾಗದಲ್ಲಿ ವಾಸ ಮಾಡುತ್ತಿದ್ದು, ಈ ಸ್ಥಳವನ್ನು ಖಾಸಗಿ ವ್ಯಕ್ತಿಗೆ ಮಾರಾಟ ಮಾಡಿದ್ದನ್ನು ವಿರೋಧಿಸಿ ಗ್ರಾಮದ ಬಸವನಪೇಟೆ ನಿವಾಸಿಗಳು ನ್ಯಾಯಕೋರಿ ಬುಧವಾರ ಕಂದಾಯ ನೀರೀಕ್ಷಕರ ಮೊರೆ ಹೋದರು.

  ಜಾಗ ಗ್ರಾಪಂ ದಾಖಲೆಯಲ್ಲಿ ಡಿಮ್ಯಾಂಡ್ ಸೇರಿದೆ

  ಸ್ಥಳೀಯ ನಿವಾಸಿ ಕಟ್ಟೇಗೌಡ ಬಿ.ಮಲ್ಲಯ್ಯ ಮಾತನಾಡಿ, ಪಂಚಾಯಿತಿಯ ಡಿಮ್ಯಾಂಡ್ ಜಾಗದಲ್ಲಿ 35 ವರ್ಷದಿಂದ 130 ಕುಟುಂಬಗಳು ವಾಸ ಮಾಡುತ್ತಿವೆ. ಗ್ರಾಪಂ ಮೂಲ ಸೌಲಭ್ಯಗಳನ್ನು ಒದಗಿಸಿಕೊಟ್ಟಿದೆ. 1984ರಲ್ಲಿ ಸರ್ವೇ ನಂ.438ರ 5.80 ಎಕರೆಯಲ್ಲಿ ನಮಗೆ ಭೋವಿ ಸಮುದಾಯದ ತಿಮ್ಮಕ್ಕ ಗಂಡ ಸಣ್ಣ ಹುಲುಗಪ್ಪ ಎಂಬುವರು ಅಗ್ರಿಮೆಂಟ್ ಮೂಲಕ ಜಾಗವನ್ನು ಖರೀದಿಗೆ ನೀಡಿರುತ್ತಾರೆ. ಈ ಬಗ್ಗೆ ಗ್ರಾಪಂ ದಾಖಲೆಯಲ್ಲಿ ಡಿಮ್ಯಾಂಡ್ ಸೇರಿದ್ದು, ತೆರಿಗೆ ಕೂಡ ಕಟ್ಟಿಸಿಕೊಳ್ಳುತ್ತಿದ್ದಾರೆ.

  ಒಳಸಂಚಿನಿಂದ ಖಾಸಗಿ ವ್ಯಕ್ತಿ ವೀರೇಶಗೆ ಹಕ್ಕು ಬದಲಾವಣೆ

  ಸದರಿ ಸ್ಥಳವನ್ನು ಅಧಿಕಾರಿಗಳ ಒಳಸಂಚಿನಿಂದ ಖಾಸಗಿ ವ್ಯಕ್ತಿಯಾದ ಹಳ್ಳಿಮರದ ವೀರೇಶಗೆ ಹಕ್ಕು ಬದಲಾವಣೆ ಮಾಡಿ ನೋಂದಣಿ ಮಾಡಿಕೊಟ್ಟಿದ್ದಾರೆ. ಇದರಿಂದ ಆ ವ್ಯಕ್ತಿ ಯಾವುದೇ ಸಮಯದಲ್ಲಿ ನಮಗೆ ತೊಂದರೆ ಕೊಡಬಹುದು. ಸ್ಥಳೀಯ ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು ತಹಸೀಲ್ದಾರ್ ಮಟ್ಟದ ಅಧಿಕಾರಿಗಳು ಮೋಸ ಎಸಗಿದ್ದಾರೆ. ನ್ಯಾಯ ಸಿಗುವವರೆಗೂ ಉಪವಾಸ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.


  ಇದನ್ನೂ ಓದಿ: ಆಸ್ತಿ ವಿಭಜನೆ ಅರ್ಜಿ ವಿಚಾರಕ್ಕೆ ಲಂಚ ಸ್ವೀಕರಿಸಿದ ಪ್ರಕರಣ: ಇಬ್ಬರು ಕಂದಾಯ ಅಧಿಕಾರಿಗಳ ಅಮಾನತು

  ನ್ಯಾಯಾಲಯಕ್ಕೆ ದಾವೆ ಹೂಡಿ ನಾವು ಸಹಕರಿಸುತ್ತೇವೆ

  ಕಂದಾಯ ನೀರೀಕ್ಷಕ ಕೆ.ಬಿ.ಸುರೇಶ್ ಬಾಬು ಮಾತನಾಡಿ, ನಿಮ್ಮ ಸುರಕ್ಷೆಗಾಗಿ ಎಸಿ ನ್ಯಾಯಾಲಯಕ್ಕೆ ದಾವೆ ಹೂಡಿ ನಾವು ಸಹಕರಿಸುತ್ತೇವೆ. ನಮಗೆ ಗಮನಕ್ಕೆ ಬಾರದೆ ಈ ಕೆಲಸಗಳು ನಡೆದಿವೆ. ಸ್ಥಳಕ್ಕೆ ಇಬ್ಬರು ತಳವಾರರನ್ನು ಕರೆಸಿ ವರದಿ ಬರೆಸಿಕೊಂಡಿದ್ದೇನೆ. ಗ್ರಾಮ ಲೆಕ್ಕಾಧಿಕಾರಿಗೆ ತಹಸೀಲ್ದಾರ್ ಮೂಲಕ ನೋಟೀಸ್ ಜಾರಿ ಮಾಡುತ್ತೇವೆ. ತಪ್ಪಿತಸ್ಥ ಆದಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ. ಸ್ಥಳದಲ್ಲೇ ವರದಿ ತಯಾರು ಮಾಡಿಕೊಂಡು ಮಹಜರು ಮಾಡಿ ಸಹಿ ಮಾಡಿಸಿಕೊಂಡಿದ್ದೇನೆ. ನಾಳೆಯೇ ಈ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.


  ಸಹಾಯಕ ನಿದೇರ್ಶಕರಾದ ಬಸವರಾಜ್ ಪಲ್ಲೆದ್, ಪಿಡಿಒ ಶಿವಕುಮಾರ್ ಕೋರಿ, ಮುಖಂಡರಾದ ಡ್ರೈವರ್ ಹುಲುಗಪ್ಪ, ಹಳ್ಳಿ ನಾಗಪ್ಪ, ಖಾಜಾ ಹುಸೇನಿ, ಎಸ್.ಎಂ.ಅಡಿವೆಯ್ಯಸ್ವಾಮಿ, ರಾರಾವಿ ವೆಂಕಟೇಶ್, ಪವಾಡಿ ನಾಯಕ, ಬಿ.ನಾಗೇಂದ್ರ, ಲಕ್ಷ್ಮಣ್ ಭಂಡಾರಿ, ಬಸರ್‌ಕೋಡು ಸೋಮಶೇಖರಪ್ಪ, ಬಿ. ರಮೇಶ್, ನಿಂಗಮ್ಮ, ದೊಡ್ಡಬಸಮ್ಮ, ಯಲ್ಲಮ್ಮ, ಗುಳೆಮ್ಮ, ನೆನಕ್ಕಿ ಗೌರಮ್ಮ, ಬಿ.ಗಂಗಮ್ಮ, ತಿಮ್ಮಕ್ಕ, ಕಜ್ಜಿ ಯಲ್ಲಮ್ಮ, ಕೊಳ್ಳಿ ಸೋಮೇಶ್, ಎಎಸ್‌ಐ ಎಚ್.ಗಂಗಣ್ಣ ಇತರರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts