More

    VIDEO: ಕಸಾಯಿಖಾನೆಗೆ ಕೊಂಡೊಯ್ಯುವಾಗ ಎಸ್ಕೇಪ್​ ಆಗಿ ತಾಯಿ-ಮಗುವಿಗೆ ಗುದ್ದಿದ ನೀರೆಮ್ಮೆ ಸಾವಿಗೀಡಾಗಿದ್ದು ಹೇಗೆ? ​

    ಬೀಜಿಂಗ್​: ಕಸಾಯಿಖಾನೆಗೆ ಕೊಂಡೊಯ್ಯುತ್ತಿದ್ದ ನೀರೆಮ್ಮೆ(ವಾಟರ್​ ಬಫೆಲೋ)ಯೊಂದು ಎಸ್ಕೇಪ್​ ಆಗುವಾಗ ಎದುರಿಗೆ ಮಗುವನ್ನು ಹೊತ್ತುಕೊಂಡಿದ್ದ ತಾಯಿಯನ್ನು ಡಿಕ್ಕಿ ಹೊಡೆದು ಗಾಯಗೊಳಿಸಿದೆ.

    ಏಪ್ರಿಲ್​ 19ರಂದು ದಕ್ಷಿಣ ಚೀನಾದ ಗೌಂಗ್​ಡಂಗ್​ ಪ್ರಾಂತ್ಯದ ಹೇವಾನ್ ನಗರದಲ್ಲಿ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

    ಕಸಾಯಿಖಾನೆಗೆ ಕರೆದೊಯ್ಯುವಾಗ ತಪ್ಪಿಸಿಕೊಂಡ ಏಷ್ಯಾ ಎಮ್ಮೆ, ಭಯದಿಂದ ಓಡುವಾಗ ಮನೆಯ ದ್ವಾರದ ಬಳಿ ಮಗುವನ್ನು ತಬ್ಬಿಕೊಂಡು ನಿಂತಿದ್ದ ತಾಯಿಗೆ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಮಗುವನ್ನು ಎಸೆದ ನೆಲಕ್ಕುರುಳಿದ ತಾಯಿಯ ಮೇಲೆ ಮತ್ತೆ ದಾಳಿ ಮಾಡಿದೆ. ಈ ವೇಳೆ ಕುಟುಂಬಸ್ಥರು ಎಮ್ಮೆಯಿಂದ ಮಗು ಮತ್ತು ತಾಯಿಯನ್ನು ರಕ್ಷಿಸಿದ್ದಾರೆ.

    ಘಟನೆಯಲ್ಲಿ ತಾಯಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಯಾವುದೇ ಹಾನಿಯಿಲ್ಲದೇ ದೇವರ ದಯೆಯಿಂದ ಮಗು ಪಾರಾಗಿದೆ. ತನ್ನ ಮಾಲೀಕನಿಂದ ಎಮ್ಮೆ ಎಸ್ಕೇಪ್​ ಆಗುವ ಮುನ್ನ ಅದನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಕರೋನಾದಿಂದ ಹೃದಯಕ್ಕೇನಾದರೂ ತೊಂದರೆಯೇ ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts