More

    ನವ ದಂಪತಿಗೆ ಪೆಟ್ರೋಲ್​, ಸಿಲಿಂಡರ್​ ಗಿಫ್ಟ್​! ಸ್ನೇಹಿತರೆಂದರೆ ಹೀಗಿರಬೇಕು ಎನ್ನುತ್ತಿದ್ದಾರೆ ನೆಟ್ಟಿಗರು

    ಚೆನ್ನೈ: ಪೆಟ್ರೋಲ್​, ಡೀಸೆಲ್​ ಮತ್ತು ಅಡುಗೆ ಅನಿಲದ ದರ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆ. ಸಾಕಷ್ಟು ಜನರು ರಸ್ತೆಗಿಳಿದು ಪ್ರತಿಭಟನೆ ಮಾಡಲಾರಂಭಿಸಿದ್ದಾರೆ. ಇಲ್ಲೊಂದು ಮದುವೆಯಲ್ಲಿಯೂ ಈ ಪೆಟ್ರೋಲ್​ ಡೀಸೆಲ್​ ಸುದ್ದಿಯಾಗಿದೆ.

    ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಮದುವೆಯಲ್ಲಿ ಪೆಟ್ರೋಲ್​ ಮತ್ತು ಗ್ಯಾಸ್​ ಸಿಲಿಂಡರ್​ ಮುಖ್ಯ ಆಕರ್ಷಣೆಯಾಗಿತ್ತು. ಮದುವೆಗೆ ಬಂದಿದ್ದ ಸ್ನೇಹಿತರು, ಬಂಧುಗಳೆಲ್ಲರೂ ತರ ತರದ ಉಡುಗೊರೆಗಳನ್ನು ದಂಪತಿಗೆ ನೀಡಿದ್ದಾರೆ. ಅದರಲ್ಲಿ ಒಂದು ಸ್ನೇಹಿತರ ತಂಡ ಮಾತ್ರ ವಿಶೇಷವಾದ ಉಡುಗೊರೆ ಕೊಟ್ಟು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮಿಂಚಲಾರಂಭಿಸಿದೆ.

    ವಧು ವರನ ಸ್ನೇಹಿತರ ತಂಡವೊಂದು ನವ ದಂಪತಿಗೆ ಗ್ಯಾಸ್​ ಸಿಲಿಂಡರ್​ ಹಾಗೂ ಪೆಟ್ರೋಲ್​ ಕ್ಯಾನ್​ ಗಿಫ್ಟ್​ ನೀಡಿದೆ. ಈರುಳ್ಳಿಯಿಂದ ಮಾಡಲಾಗಿದ್ದ ಹಾರವನ್ನೂ ದಂಪತಿಗೆ ಹಾಕಿಸಲಾಗಿದೆ. ದಂಪತಿಗೆ ಈ ವಿಶೇಷ ಗಿಫ್ಟ್ ನೀಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್​ ವೈರಲ್​ ಆಗಿದೆ. (ಏಜೆನ್ಸೀಸ್​)

    ಸೆಕ್ಸ್​ಗೆ ಒತ್ತಾಯಿಸಿದ ಗಂಡನನ್ನು ವಿಷವಿಟ್ಟು ಕೊಂದ ಹೆಂಡತಿ!

    ಪೆಟ್ರೋಲ್ ಬೆಲೆ ಏರಿಕೆ ಕುರಿತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ ಮಾಯಾವತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts