More

    ಸ್ನೇಹಿತೆಯ ಹೆಣ ಕಂಡವಳೇ ಅವಳ ಪರ್ಸ್​ಗೆ ಕೈ ಹಾಕಿ ದುಡ್ಡು ಕದ್ದಳು! ರೆಸ್ಟೋರೆಂಟ್​ನಲ್ಲಿ ಮಜಾ ಮಾಡಿ ಸಿಕ್ಕಿಬಿದ್ದ ಮಹಿಳೆ

    ಲಂಡನ್: ಪ್ರಾಣಕ್ಕೆ ಪ್ರಾಣ ಕೊಡುವ ಸ್ನೇಹಿತರಿರುತ್ತಾರೆ ಎನ್ನುವುದನ್ನು ಕೇಳಿರುತ್ತೀರ ಮತ್ತು ನೋಡಿರುತ್ತೀರ. ಆದರೆ ಈ ಕಥೆ ಓದಿದ ಮೇಲೆ ಸ್ನೇಹವೆಂದರೆ ಇದಾ ಎನ್ನುವ ಪ್ರಶ್ನೆ ನಿಮಗೆ ಬಾರದಿರದು.


    ಬ್ರಿಟನ್​ನ ಜೇನ್ ಗಾಡ್ಫ್ರೇ ಮತ್ತು ಟೆರೆಲ್ ಯೇಟ್ಸ್ ಒಳ್ಳೆಯ ಫ್ರೆಂಡ್ಸ್. ಆಕೆಯ ಮನೆಗೆ ಈಕೆ ಹೋಗುವುದು ಈಕೆಯ ಮನೆಗೆ ಆಕೆ ಬರುವುದು ಹೀಗೆ ಇವರ ಸ್ನೇಹ ಅತ್ಯಂತ ಅನ್ಯೋನ್ಯತೆಯಿಂದ ಕೂಡಿತ್ತು. ಆದರೆ ಒಂದು ದಿನ ಜೇನ್ ಗಾಡ್ಫ್ರೇ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾಳೆ. ಅದೇ ಸಮಯಕ್ಕೆ ಸರಿಯಾಗಿ ಆಕೆಯ ಮನೆಗೆ ಬಂದ ಟೆರೆಲ್ ಯೇಟ್ಸ್ ತನ್ನ ಸ್ನೇಹಿತೆ ಶವವಾಗಿ ಬಿದ್ದಿರುವುದನ್ನು ಕಂಡು ಆಸ್ಪತ್ರೆಗೆ ಕರೆ ಮಾಡಿದ್ದಾಳೆ. ನಂತರ ಅಲ್ಲಿದ್ದ ಪರ್ಸ್​ನಿಂದ ಸ್ನೇಹಿತೆಯ ಹಣ, ಬ್ಯಾಂಕ್​ ಕಾರ್ಡ್​ಗಳು ಮತ್ತು ಮನೆಯಲ್ಲಿದ್ದ ಲ್ಯಾಪ್​ಟಾಪ್​ನ್ನು ತೆಗೆದುಕೊಂಡು ಅಲ್ಲಿಂದ ಪರಾರಿಯಾಗಿದ್ದಾಳೆ.


    ಸ್ನೇಹಿತೆಯ ಶವವನ್ನು ನೋಡಿ, ಅಲ್ಲಿಂದ ಕಳ್ಳತನ ಮಾಡಿಕೊಂಡು ಬಂದ ಟೆರೆಲ್ ಯೇಟ್ಸ್ ಅಲ್ಲಿಂದ ನೇರವಾಗಿ ರೆಸ್ಟೋರೆಂಟ್​ ಒಂದಕ್ಕೆ ತೆರಳಿ ಹೊಟ್ಟೆ ಬಿರಿಯುವಂತೆ ತಿಂದಿದ್ದಾಳೆ. ಪೆಟ್ರೋಲ್​ ಬಂಕ್​ಗೆ ತೆರಳಿ ತನ್ನ ಗಾಡಿಗೂ ಫುಲ್​ ಟ್ಯಾಂಕ್​ ಪೆಟ್ರೋಲ್​ ತುಂಬಿಸಿಕೊಂಡು ಏನೂ ಆಗೇ ಇಲ್ಲ ಎನ್ನುವವರಂತೆ ಸುಮ್ಮನಾಗಿದ್ದಾಳೆ.


    ಇತ್ತ ತಾಯಿಯನ್ನು ಕಳೆದುಕೊಂಡ ನೋವಿನಲ್ಲಿದ್ದ ಜೇನ್ ಗಾಡ್ಫ್ರೇ ಮಗಳಿಗೆ, ಈ ಕಳ್ಳತನ ಮಾಡಿದವರು ಯಾರೆನ್ನುವುದು ತಿಳಿದು ಇನ್ನಷ್ಟು ಸಿಟ್ಟು ಬಂದಿದೆ. ಪೊಲೀಸರಿಗೆ ದೂರು ನೀಡಿದ್ದಾಳೆ. ಮೊದಲಿಗೆ ಟೆರೆಲ್, ತನ್ನ ಸ್ನೇಹಿತೆಯೇ ಎಲ್ಲವನ್ನು ತನಗೆ ನೀಡಿ ಸತ್ತಳೆಂದು ಹೇಳಿದಳಾದರೂ ಕೊನೆಯಲ್ಲಿ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts