More

    ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಧನಸಹಾಯ! ಹೊರಬಿತ್ತು ಹೊಸ ಡೇಟಾ

    ನವದೆಹಲಿ: ಮಾರ್ಚ್​​ 13ರಂದು ಚುನಾವಣಾ ಬಾಂಡ್​ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಸುಪ್ರೀಂಕೋರ್ಟ್​ಗೆ ಅನುಸರಣಾ ಅಫಿಡೆವಿಟ್​ ಸಲ್ಲಿಕೆ ಮಾಡಿತ್ತು. ಆದೇಶದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಬಾಂಡ್​ಗಳ ಕುರಿತು ಮಾಹಿತಿ ಸಲ್ಲಿಸಿರುವುದಾಗಿ ತಿಳಿಸಿತ್ತು. ಇದೀಗ ಹೊಸ ಮಾಹಿತಿ ಹೊರಬಿದ್ದಿದ್ದು, ರಾಜಕೀಯ ಪಕ್ಷಗಳಿಂದ ಪಡೆದ ಅಂಕಿಅಂಶಗಳನ್ನು ಚುನಾವಣಾ ಆಯೋಗ ಬಿಡುಗಡೆಗೊಳಿಸಿದೆ.

    ಇದನ್ನೂ ಓದಿ: ಬಂಡಾಯದ ಬೆನ್ನಲ್ಲೇ ಕೆ.ಎಸ್.ಈಶ್ವರಪ್ಪ ವಿವಿಧ ಸಮಾಜದ ಮುಖಂಡರ ಭೇಟಿ; ಸ್ಪರ್ಧೆ ಕುರಿತು ಚರ್ಚೆ

    ಚುನಾವಣಾ ಬಾಂಡ್‌ಗಳ ಕುರಿತು ರಾಜಕೀಯ ಪಕ್ಷಗಳಿಂದ ಪಡೆದ ಅಂಕಿಅಂಶಗಳನ್ನು ಇಂದು ಚುನಾವಣಾ ಆಯೋಗ ಬಿಡುಗಡೆಗೊಳಿಸಿದ್ದು, ಅದನ್ನು ಮುಚ್ಚಿದ ಕವರ್‌ಗಳಲ್ಲಿ ಸುಪ್ರೀಂ ಕೋರ್ಟ್‌ಗೆ ನೀಡಿದೆ. ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಿಯು ಪೆನ್ ಡ್ರೈವ್‌ನಲ್ಲಿ ಸೀಲ್ಡ್ ಕವರ್‌ನಲ್ಲಿ ಡಿಜಿಟಲೀಕರಣ ಮಾಡಿದ ದಾಖಲೆಯೊಂದಿಗೆ ಭೌತಿಕ ಪ್ರತಿಗಳನ್ನು ಹಿಂತಿರುಗಿಸಿದೆ.

    ಸುಪ್ರೀಂನ ರಿಜಿಸ್ಟ್ರಿಯಿಂದ ಡಿಜಿಟಲೀಕರಣ ರೂಪದಲ್ಲಿ ಸ್ವೀಕರಿಸಿದ ಡೇಟಾವನ್ನು ಭಾರತದ ಚುನಾವಣಾ ಆಯೋಗವು ಇಂದು ಅಪ್‌ಲೋಡ್ ಮಾಡಿದೆ. ಏಪ್ರಿಲ್ 19ರಿಂದ ಜೂನ್ 1ರವರೆಗೆ ಏಳು ಹಂತಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಆಯೋಗ ಈ ಡೇಟಾವನ್ನು ರಿಲೀಸ್​ ಮಾಡಿದೆ.

    ಇದನ್ನೂ ಓದಿ: ಎಗ್ ಕರಿ ಮಾಡಲು ನಿರಾಕರಿಸಿದ್ದಕ್ಕೆ ಸುತ್ತಿಗೆಯಲ್ಲಿ ಹೊಡೆದು ಕೊಲೆ; ಆರೋಪಿ ಅರೆಸ್ಟ್​

    ಚುನಾವಣಾ ಆಯೋಗ ಬಿಡುಗಡೆ ಮಾಡಿದ ಇತ್ತೀಚಿನ ದಾಖಲೆಗಳು ಬಾಂಡ್‌ಗಳು, ಮುಖಬೆಲೆಗಳ ದಿನಾಂಕದ ಕಚ್ಚಾ ಡೇಟಾವನ್ನು ಮಾತ್ರ ತೋರಿಸಿವೆ. ಬಾಂಡ್‌ಗಳ ಸಂಖ್ಯೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಬ್ರಾಂಚ್​ ವಿತರಣೆ, ರಶೀದಿಯ ದಿನಾಂಕ ಮತ್ತು ಕ್ರೆಡಿಟ್ ದಿನಾಂಕ ಬಿಡುಗಡೆಗೊಳಿಸಿದರೂ ಸಹ ಬಾಂಡ್‌ಗಳ ಅನನ್ಯ ಸಂಖ್ಯೆಗಳನ್ನು ಮಾತ್ರ ಬಹಿರಂಗಪಡಿಸಿಲ್ಲ.

    ತೃಣಮೂಲ ಕಾಂಗ್ರೆಸ್ ಪಕ್ಷವು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಅನುಸರಿಸಲು ಬಾಂಡ್‌ಗಳ ವಿಶಿಷ್ಟ ಸಂಖ್ಯೆಗಳನ್ನು ಕೇಳುವಂತೆ ಎಸ್‌ಬಿಐಗೆ ಪತ್ರ ಬರೆದಿದೆ. ಆದರೆ ಬಿಜೆಪಿ ಅಂತಹ ಯಾವುದೇ ಮನವಿಯನ್ನು ಎಸ್‌ಬಿಐಗೆ ನೀಡದೆ ಹೋದರೂ ಕಚ್ಚಾ ಡೇಟಾವನ್ನು ಮಾತ್ರ ನೀಡಿದೆ. ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ದೇಣಿಗೆ ಪಡೆದಿಲ್ಲ ಎಂದು ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತಿಳಿಸಿದ್ದು, ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕ್ಸ್‌ವಾದಿ), ಅಥವಾ ಸಿಪಿಐ(ಎಂ) ಕೂಡ ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಪಡೆದಿಲ್ಲ ಎಂದು ಹೇಳಿದೆ,(ಏಜೆನ್ಸೀಸ್).

    ‘ಇದೆಲ್ಲವೂ ನನ್ನ ಕುಟುಂಬದ ಮೇಲೆ ಪರಿಣಾಮ ಬೀರಿದೆ’; ಕಡೆಗೂ ಮೌನ ಮುರಿದ ಚಹಲ್ ಪತ್ನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts